ತಂಬಾಕು ಉತ್ಪನ್ನ ಮಾರಾಟ, ಸೇವನೆ ಕುರಿತು ಬ್ಯಾನರ್​ ಅಳವಡಿಸಲು ಪರಿಶೀಲಿಸುತ್ತಿರುವ ಕಾರ್ಯದರ್ಶಿ ಕಿರಣ್​. 
ನ್ಯೂಸ್

ಮಾರುಕಟ್ಟೆಗೆ ಸೌಲಭ್ಯ ಕಲ್ಪಿಸಲು ಕ್ರಮ

ಕೋಲಾರ: ಕೃಷಿ ಉತ್ಪನ್ನ ಮಾರಾಟ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿದ್ದು, ಹಂತಹಂತವಾಗಿ ಸವಲತ್ತು ಕಲ್ಪಿಸಲು ಮಾರುಕಟ್ಟೆ ಸಮಿತಿ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ಮಾರುಕಟ್ಟೆಗೆ ಇಚೆಗೆ ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ದಿಢೀರ್​ ಭೇಟಿ ನೀಡಿ ಅವ್ಯವಸ್ಥೆ ಕಂಡು ವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರಂತೆಯೇ "ಸೌಲಭ್ಯ ವಂಚಿತ ಎಪಿಎಂಸಿ ಮಾರುಕಟ್ಟೆ' ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಮಾ.25ರಂದು ಸುದ್ದಿಪ್ರಕಟಿಸಲಾಗಿತ್ತು. ಎಚ್ಚೆತ್ತುಕೊಂಡ ಮಾರುಕಟ್ಟೆ ಕಾರ್ಯದರ್ಶಿ ಕಿರಣ್​ ಏನೆಲ್ಲ ಕ್ರಮವಹಿಸಲಾಗಿದೆ ಎಂಬದರ ಕುರಿತು ಪತ್ರಿಕ್ರಿಯೆ ನೀಡಿದ್ದಾರೆ.

ಆರ್​ಒ ಟಕ ನಿರ್ಮಾಣ: ಮಾರುಕಟ್ಟೆಯಲ್ಲಿ ಹಿಂದೆ 2 ಶುದ್ಧ ನೀರಿನ ಟಕಗಳಿದ್ದು, ಅವುಗಳನ್ನು ಸರಿಪಡಿಸಿ ಪ್ರಾರಂಭಿಸಲಾಗಿದೆ. ಜತೆಗೆ ಹೆಚ್ಚುವರಿ 4 ಟಗಳನ್ನು ಅಳವಡಿಸಲು ಪ್ರಸಕ್ತ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಕೈಗೊಳ್ಳಲಾಗಿದೆ.

* ಸ್ವಚ್ಛತೆಗೆ ಒತ್ತು

ಸ್ವಚ್ಛತೆ ಕುರಿತು ಸಮಿತಿಯ ಸಿಬ್ಬಂದಿ ಪರಿಶೀಲಿಸುತ್ತಿದ್ದು, ಒತ್ತು ನೀಡಲಾಗಿದೆ. ಈಗಾಗಲೇ ಚರಂಡಿ ಸ್ವಚ್ಛಗೊಳಿಸಿ, ದುರಸ್ತಿಪಡಿಸಿ ಸ್ಲ್ಯಾಬ್​ ಅಳವಡಿಸಲು ಕ್ರಿಯಾಯೋಜನೆಯ ಕಾಮಗಾರಿ ಕೈಗೊಳ್ಳಲಾಗಿದೆ. ಶೌಚಗೃಹಗಳನ್ನು ದುರಸ್ತಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲು ಕ್ರಮವಹಿಸಿದ್ದು, ಇನ್ನು 2 ಶೌಚಗೃಹ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಜತೆಗೆ ಉಪಹಾರ ಕಟ್ಟಡ ಹಾಗೂ ಹಾಗೂ ರೈತ ಭವನ ಕಟ್ಟಡ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾರುಕಟ್ಟೆ ಕಾರ್ಯದರ್ಶಿ ಕಿರಣ್​ ತಿಳಿಸಿದ್ದಾರೆ.

* ಸಭೆಯ ತೀರ್ಮಾನದಂತೆ ಕಡಿತ

2017ರ ಜು.31ರ ಸಭೆಯ ತೀರ್ಮಾನದಂತೆ ತರಕಾರಿ, ಚೀಲಗಳ ತಳಭಾಗ ಹಾಗೂ ಮೇಲ್ಬಾಗದಲ್ಲಿ ಹಾಕಿರುವ ಸೊಪು$್ಪ, ಚೀಲಕ್ಕೆ ನೀರು ಹಾಕಿ ತರುವಂತಹ ತರಕಾರಿಗಳು ನಿಗದಿಪಡಿಸಿರುವ ಕಡಿತ ಹೊರತುಪಡಿಸಿ ಬೇರೆ ಯಾವುದೇ ಕಡಿತಗಳನ್ನು ಮಾಡಲು ಅವಕಾಶ ನೀಡಿಲ್ಲ. ಈ ಬಗ್ಗೆ ನಿಯಮಿತವಾಗಿ ಪ್ರಾಂಗಣದಲ್ಲಿ ಪರಿಶೀಲಿಸಲಾಗುತ್ತಿದ್ದ ಅನಧಿಕೃತ ಕಡಿತ ಮಾಡಿರುವ ಪ್ರಕರಣಗಳು ಕಂಡು ಬಂದಿಲ್ಲ ಎಂದು ಮಾರುಕಟ್ಟೆ ಕಾರ್ಯದರ್ಶಿ ತಿಳಿಸಿದ್ದಾರೆ.

* ತಡೆಯಾಜ್ಞೆಯಿಂದ ಕಾಮಗಾರಿಗೆ ಅಡ್ಡಿ

ಮಳೆ ಬಂದರೆ ರಸ್ತೆಗಳು ಓಡಾಡಲು ಸಿಮೆಂಟ್​ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಸ್ಥಳಾವಕಾಶದ ಅಭಾವದಿಂದಾಗಿ ಪ್ರಾಂಗಣಕ್ಕೆ ಹೊಂದಿಕೊಂಡಿರುವ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಿಂದ ಹಿಂಪಡೆದಿರುವ ಜಮೀನಿನಲ್ಲಿ ತರಕಾರಿ ವಹಿವಾಟು ನಡೆಸಲಾಗುತ್ತಿದೆ. ಜಮೀನಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಇದ್ದು, ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ತಡೆಯಾಜ್ಞೆ ನೀಡಿದೆ. ಆದ್ದರಿಂದ ಜಮೀನನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಿರುವುದಿಲ್ಲ. ದಾವೆ ಮುಕ್ತಾಯಗೊಂಡ ನಂತರ ಸಮಿತಿ ಪರವಾಗಿ ತೀರ್ಪು ಬಂದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

* ಜಾಗ ಗುರುತಿಸಿರುವ ಮಾಹಿತಿ

ಪ್ರಸ್ತುತ ಮಾರುಕಟ್ಟೆಯು 19 ಎಕರೆ ಜಾಗದಲ್ಲಿ ನಡೆಯುತ್ತಿದ್ದು, ಸ್ಥಳವಕಾಶಾದ ಕೊರತೆ ತೀವ್ರವಾಗಿದೆ. ಆದ್ದರಿಂದ ವಹಿವಾಟಿಗೆ ತೊಂದರೆಯಾಗುತ್ತಿದೆ. ಈ ಭಾರದ ರೈತರಿಗೆ ಸುಸಜ್ಜಿತ ಮಾರುಕಟ್ಟೆ ಅಭಿವೃದ್ಧಿ ಪಡಿಸುವ ಸಲುವಾಗಿ 100 ಎಕರೆ ಜಮೀನು ಒದಗಿಸುವಂತೆ ಈಗಾಗಲೇ ತಹಶೀಲ್ದಾರ್​ ಅವರಿಗೆ ಪತ್ರ ಬರೆಯಲಾಗಿದ್ದು, ಜಾಗ ಗುರುತಿಸುವ ಮಾಹಿತಿ ತಿಳಿದು ಬಂದಿದೆ. ಎಲ್ಲ ದಲ್ಲಾಳಿಗರು ಅಂಗಡಿ, ಹೆಸರು ಮತ್ತು ವಿಳಾಸ ಹೊಂದಿರುವ ಬಿಲ್ಲುಗಳನ್ನೇ ರೈತರಿಗೆ ನೀಡುತ್ತಿರುವುದು ಅಧಿಕಾರಿಗಳ ಪರಿಶೀಲನೆಯ ವೇಳೆ ತಿಳಿದು ಬಂದಿದ್ದು, ಬಿಳಿ ಚೀಟಿ ವಿತರಣೆ ಪ್ರಕರಣಗಳು ಕಂಡು ಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.