ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಲಾಯಿತು. ಎಂ.ರಾಜು, ಜಯಲಕ್ಷ್ಮೀ, ಅಶೋಕ್, ಪಿ.ಮಂಜುನಾಥ್, ಡಿ.ನಾರಾಯಣ ಇತರರಿದ್ದರು.  
ನ್ಯೂಸ್

ಮರಾಠಿ ಕೇರಿ ಅಭಿವೃದ್ಧಿಗೆ ಕ್ರಮ

ಶಿವಕುಮಾರ ಎಸ್.ಪಿ.

ಕಾರ್ಗಲ್: ಶರಾವತಿ ಕಣಿವೆಯ ಪುರಾತನ ಕಾಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 8 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಮರಾಠಿ ಕೇರಿಯ ಶ್ವೇತವರ್ಣ ಶಿವಲಿಂಗ ದರ್ಶನ ಪಡೆದು, ಶ್ರೀಪಂಚಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಜಾತ್ರಾ ಮಹೋತ್ಸವದ ಸಭೆಯಲ್ಲಿ ಮಾತನಾಡಿದರು.

ಜನರ ಬಹುದಿನಗಳ ಬೇಡಿಕೆಯಾಗಿದ್ದ ಇಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಬದ್ಧನಾಗಿದ್ದೇನೆ. ದೇವಸ್ಥಾನದ ಅಭಿವೃದ್ಧಿಗೂ ಕೈಜೋಡಿಸುತ್ತೇನೆ. ಹಿರೇಹೆನ್ನಿಯ ಶಿವಲಿಂಗ ದೇವಾಲಯಕ್ಕೂ 3 ಲಕ್ಷ ರೂ. ಅನುದಾನ ನೀಡಲಾಗಿದೆ. ಇಂತಹ ಕುಗ್ರಾಮದಲ್ಲಿ ಹಿರಿಯರು ಹಾಗೂ ಯುವಕರು ಸೇರಿ ದೇವಸ್ಥಾನವನ್ನು ಮರು ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಜೋಗ-ಕಾರ್ಗಲ್ ಪಪಂ ಅಧ್ಯಕ್ಷ ಎಂ.ರಾಜು, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಪಿ.ಮಂಜುನಾಥ್, ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ನಾರಾಯಣ, ಪ್ರಮುಖರಾದ ಅಶೋಕ್ ಬೇಳೂರು, ವಿ.ಸಂತೋಷ್‌ಕುಮಾರ್, ಗ್ರಾಮಸ್ಥರಾದ ಭುಜಬಲಿ ಜೈನ್, ಹರಿನಾರಾಯಣ, ಗ್ರಾಮಸ್ಥರಾದ ಲೋಕರಾಜ್ ಜೈನ್, ತಿಮ್ಮಯ್ಯ, ಭರತ್, ಟಿ.ಮಂಜುನಾಥ್, ರವಿ ಇತರರಿದ್ದರು.