ಗಂಗಾವತಿ: ಆತ್ಮವಿಶ್ವಾಸದಿಂದ ನಿರೀಕ್ಷಿತ ಗುರಿತಲುಪಬೇಕಿದ್ದು, ಸೋಲು-ಗೆಲುವಿಗೆ ಗಮನ ನೀಡದೇ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತೆ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾವಿ ಹೇಳಿದರು.
ನಗರದ ಶ್ರೀ ಚನ್ನಮಲ್ಲಿಕಾರ್ಜುನ ಮಠದಲ್ಲಿ ಶ್ರೀ ಗುರು ಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದರು.
ಲಾಪೇಕ್ಷೆಯಿಲ್ಲದೇ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಉಚಿತ ಕೋಚಿಂಗ್ ಸೆಂಟರ್ ಕಾರ್ಯ ಪ್ರಶಂಸನೀಯ. ಸೋಲಿಗೆ ಎದೆಗುಂದದೇ ಆತ್ಮವಿಶ್ವಾಸದಿಂದ ಗೆಲುವಿನತ್ತ ಹೆಜ್ಜೆಹಾಕಬೇಕಿದೆ. ಉಚಿತ ಶಿಬಿರ ಸದ್ಭಳಕೆಯಾಗಬೇಕಿದೆ ಎಂದರು.
ಗ್ರಾಪಂ ಸದಸ್ಯೆ ಪ್ರಿಯಾಂಕಾ ಪವಾರ್ ಮಾತನಾಡಿ, ಉಚಿತ ಶಿಬಿರದ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಎಂದರು.
ಶಿಬಿರದ ಸಂಚಾಲಕ ಸಿದ್ಧಲಿಂಗೇಶ ಪೂಲಭಾವಿ ಮಾತನಾಡಿ, 17 ವರ್ಷದಿಂದ ಉಚಿತ ಶಿಬಿರ ನಡೆಸಲಾಗುತ್ತಿದ್ದು, ಇದುವರೆಗೆ 5ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡಿದ್ದಾರೆ ಎಂದರು.
ಇರಕಲ್‌ಗಡಾ ಗ್ರಾಪಂ ಸದಸ್ಯ ಶ್ರೀಶೈಲ ಮೇಟಿ, ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಧರ್ಮದರ್ಶಿ ಕೆ.ಚನ್ನಬಸಯ್ಯಸ್ವಾಮಿ, ವಡ್ಡರಹಟ್ಟಿ ಗ್ರಾಪಂ ಪಿಡಿಒ ಸುರೇಶ ಛಲುವಾದಿ, ಜಿಪಂ ಸಿಬ್ಬಂದಿ ರಾಮಣ್ಣ, ಶಿಬಿರದ ಸಹಾಯಕರಾದ ಸಚಿನ್, ಅರುಣ್, ಉದಯ್, ಪುನೀತ್ ಇತರರಿದ್ದರು.