ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮವನ್ನು ಡಾ. ಸಯ್ಯದ್ ಸನಾವುಲ್ಲಾ ಉದ್ಘಾಟಿಸಿದರು. ಡಾ. ಕೆ.ಎನ್.ಮಂಜುನಾಥ್, ಪ್ರಹ್ಲಾದಪ್ಪ, ಡಾ. ಸಿರಾಜ್ ಅಹಮದ್, ಡಾ.ಕೃಪಾಲಿನಿ ಇತರರಿದ್ದರು. 
ನ್ಯೂಸ್

ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ಅವು ನಮಗೆ ಸ್ಫೂರ್ತಿದಾಯಕವಾಗಬೇಕು ಎಂದು ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯ ಡಾ. ಸಯ್ಯದ್ ಸನಾವುಲ್ಲಾ ಹೇಳಿದರು.

ಮಂಗಳವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ನಕಾರಾತ್ಮಕ ಜಗತ್ತು ನಮ್ಮ ಎದುರಿಗೆ ಇರುವಾಗ ಅದನ್ನು ಸಕಾರಾತ್ಮಕವಾಗಿ ಕಾಣಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಹ್ಲಾದಪ್ಪ ಮಾತನಾಡಿ, ಸಹ್ಯಾದ್ರಿ ಕಾಲೇಜಿಗೆ ಒಂದು ದೊಡ್ಡ ಪರಂಪರೆ ಇದೆ. ಇಲ್ಲಿ ಓದುವುದೇ ಒಂದು ಪುಣ್ಯ. ವಿದ್ಯಾರ್ಥಿಗಳು ಪ್ರೀತಿ, ಕರುಣೆ, ಸಹನೆ ಬೆಳೆಸಿಕೊಳ್ಳಬೇಕು. ಧಾವಂತದ ಬದುಕಿನಲ್ಲಿ ಸಾಧ್ಯವಾದಷ್ಟು ಮೊಬೈಲ್‌ನಿಂದ ದೂರವಿರಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್ ಮಾತನಾಡಿ, ಪಠ್ಯದ ಜತೆಗೆ ಇತರ ಚಟುವಟಿಕೆಗೂ ಆದ್ಯತೆ ಕೊಡಬೇಕು. ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಮಾನಸಿಕ ದೃಢತೆ ಹೆಚ್ಚಾಗುತ್ತದೆ ಎಂದರು.

ಪ್ರಾಧ್ಯಾಪಕರಾದ ಡಾ. ಸಿರಾಜ್ ಅಹಮದ್, ಡಾ. ಪ್ರಸನ್ನಕುಮಾರ್, ಡಾ. ಹಾಲಮ್ಮ, ಡಾ. ಕೃಪಾಲಿನಿ, ಡಾ. ಮೋಹನ್ ಚಂದ್ರಗುತ್ತಿ, ಡಾ. ಎಚ್.ಪಿ.ಮಂಜುನಾಥ್, ಡಾ. ಮಲ್ಲಿಕಾರ್ಜುನ ಮೇಟಿ, ಡಾ. ಮಹದೇವಸ್ವಾಮಿ ಇತರರಿದ್ದರು.