Udhayanidhi Stalin : ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡುವ ಮೂಲಕ ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ದೇಶಾದ್ಯಂತ ವಿವಾದ ಸೃಷ್ಟಿಸಿ ಸುಮಾರು 2 ವರ್ಷಗಳ ಕಳೆದ ನಂತರ, ಇದೀಗ ಜನರಲ್ಲಿ ಕೋಮು ಗಲಭೆ ಸೃಷ್ಟಿಸಲು ಈ ಹೇಳಿಕೆಯನ್ನು ಗುಂಪೊಂದು ತಿರುಚಲಾಗಿದೆ ಎಂದು ಹೇಳಿದ್ದಾರೆ.
ತಮಿಳುನಾಡು ಫ್ಯಾಕ್ಟ್ ಚೆಕ್ ಯೂನಿಟ್ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಟಾಲಿನ್ ನಾನು ನೀಡಿದ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಗುಂಪೊಂದು ತಿರುಚಲಾಗಿದೆ ಮತ್ತು ದೇಶಾದ್ಯಂತ ಸುಳ್ಳು ಸುದ್ಧಿಯನ್ನು ಹರಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 20 ರಿಂದ 25 ವರ್ಷ ವಯಸ್ಸಿನವರ ಹಠಾತ್ ಸಾವಿಗೆ ಇದೇ ಕಾರಣ! ಮರಣೋತ್ತರ ತಜ್ಞರ ವಿಶ್ಲೇಷಣೆ.. heart attack
ಎರಡು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಸಮಾನರು, ಹುಟ್ಟಿನಿಂದ ಯಾರನ್ನೂ ಮೇಲೆ ಅಥವಾ ಕೆಳಗೆ ಎಂದು ಪರಿಗಣಿಸಲಾಗುವುದಿಲ್ಲ. ಹಾಗೆ ಅಂತಹದ್ದೇನಾದರೂ ಇದ್ದರೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೆ. ಆದರೆ ಈ ಹೇಳಕೆಯನ್ನು ಒಂದು ಗುಂಪು ಉದ್ದೇಶಪೂವರ್ಕವಾಗಿ ತಿರುಚಿದ್ದು, ನಾನು ನರಮೇಧಕಕ್ಕೆ ಕರೆ ನೀಡಿದ್ದೇನೆ ಎಂಬ ನಕಲಿ ಸುದ್ದಿಯನ್ನು ದೇಶಾದ್ಯಂತ ಹರಡಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಮಾಸ್ಕೋಗೆ ಬಂದರೆ ಭೇಟಿ ಮಾಡಲು ಸಿದ್ಧ: ವ್ಲಾಡಿಮಿರ್ ಪುಟಿನ್| Vladimir Putin
ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಈ ಸುಳ್ಳುಗಳು ಸತ್ಯಕ್ಕಿಂತ ಎರಡು ಪಟ್ಟು ವೇಗವಾಗಿ ಹರಡುತ್ತಿವೆ. ಜನರ ದಾರಿ ತಪ್ಪಿಸಲು ಮತ್ತು ವಿಭಜನೆಗಳನ್ನು ಉತ್ತೇಜಿಸಲು ಭಾರತದಲ್ಲಿರುವ ಒಂದು ಫ್ಯಾಸಿಸ್ಟ್ ಗುಂಪು ಇದೆ. ಇದನ್ನು ಯಾರು ಮಾಡಿದ್ದಾರೆ ಎಂದು ಹೇಳುವುದು ಬೇಡ. ಈ ರೀತಿಯ ಸುಳ್ಳು ಸುದ್ದಿಗಳು ಜನರಲ್ಲಿ ಗೊಂದಲ ಉಂಟು ಮಾಡುತ್ತವೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. (ಏಜೆನ್ಸೀಸ್)