ಅರ್ಟಗಲ್ಲ ಗ್ರಾಮದ ಪಿಕೆಪಿಎಸ್​ನಲ್ಲಿ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವಿರೂಪಾ ಮಾಮನಿ ರೈತ ಲಾನುಭವಿಗಳಿಗೆ ಶೂನ್ಯ ಬಡ್ಡಿ ಸಾಲದ ಚೆಕ್​ ವಿತರಿಸಿದರು. ಶಾಸಪ್ಪ ಗುದಗೊಪ್ಪ, ರೇಣುಕ ಶಿವಯೋಗಿ ಶಿವಾಚಾರ್ಯರು, ಸೋಮನಗೌಡ ಪಾಟೀಲ ಇತರರಿದ್ದರು. 
ರಾಜ್ಯ

ರೈತರ ಅನುಕೂಲಕ್ಕೆ ಶೂನ್ಯ ಬಡ್ಡಿ ಸಾಲ

ಮುನವಳ್ಳಿ: ರೈತರ ಬೇಡಿಕೆ ಮತ್ತು ಕೃಷಿ ಅಗತ್ಯಕ್ಕೆ ಅನುಗುಣವಾಗಿ 3.08 ಕೋಟಿ ರೂ. ಹೆಚ್ಚುವರಿಯಾಗಿ ನೀಡುವ ಮೂಲಕ ಒಟ್ಟ್ಟು 8.58 ಕೋಟಿ ರೂ. ರೈತ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವಿರೂಪಾ ಮಾಮನಿ ತಿಳಿಸಿದರು.
ಸಮೀಪದ ಅರ್ಟಗಲ್ಲ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಸಾಲಪತ್ರ ವಿತರಿಸಿ ಮಾತನಾಡಿದರು.
885 ಮಂದಿ ರೈತ ಸದಸ್ಯರನ್ನು ಹೊಂದಿರುವ ಈ ಸಂಕ್ಕೆ ಮುಂಬರುವ ದಿನಗಳಲ್ಲಿ ರೈತರ ಕಷಿ ಚಟುವಟಿಕೆಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಬಿಡಿಸಿಸಿ ಬ್ಯಾಂಕ್​ನಿಂದ ಸಾಲದ ಪತ್ತನ್ನು 10 ಕೋಟಿ ರೂ.ವರೆಗೆ ಹೆಚ್ಚಿಸಲು ಪ್ರಯತ್ನಿಸಲಾಗುವುದು. ಸಾಲ ಸೌಲಭ್ಯ ಸದುಪಯೋಗ ಮಾಡಿಕೊಂಡು ರೈತರು ಆರ್ಥಿಕ ಅಭಿವೃದ್ಧಿ ಹೊಂದಬೇಕು. ಜತೆಗೆ ಬಿಡಿಸಿಸಿ ಬ್ಯಾಂಕ್​ ಕೃಷಿ ಸಂಬಂಧಿತ ಯೋಜನೆ ಲಾಭ ಪಡೆಯಬೇಕು ಎಂದು ತಿಳಿಸಿದರು.
ಸಂದ ಅಧ್ಯ ಶಾಸಪ್ಪ ಗುದಗೊಪ್ಪ ಮಾತನಾಡಿ, ರೈತರ ಸಾಲದ ಮಿತಿ ಹೆಚ್ಚಿಸಲು ಶ್ರಮಿಸಿದ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವಿರೂಪಾ ಮಾಮನಿ ಕಾರ್ಯ ಶ್ಲಾನೀಯ ಎಂದರು.
ಹರ್ಲಾಪುರ ಢವಳೇಶ್ವರ ಹಿರೇಮಠದ ರೇಣುಕ ಶಿವಯೋಗಿ ಶಿವಾಚಾರ್ಯರು ಆಶೀರ್ವಚನ ನೀಡಿ, ಸವದತ್ತಿ ಭಾಗದಲ್ಲಿ ಸಹಕಾರ ರಂಗಕ್ಕೆ ಮಾಮನಿ ಕುಟುಂಬದ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.
ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವಿರೂಪಾ ಮಾಮನಿ ಅವರನ್ನು ಸನ್ಮಾನಿಸಲಾಯಿತು. ಸಂದ ಉಪಾಧ್ಯ ಸೋಮನಗೌಡ ಪಾಟೀಲ, ನಿರ್ದೇಶಕರಾದ ಗುರುದೇವ ಹಿರೇಮಠ, ಭೀಮಪ್ಪ ಚಿಗರಿ, ಪ್ರಕಾಶ ಗೋಮಾಡಿ, ಮಂಜುನಾಥ ನಾಯ್ಕರ, ಬಸಪ್ಪ ಮಾದರ, ಕೀರಪ್ಪ ಕೀಲಿ, ಕೀರಪ್ಪ ಕುರಬರ, ಉದ್ದಪ್ಪ ಕಲಕುಟ್ರಿ, ಗೌರವ್ವ ಜಮಕಿ, ರೇಣುಕಾ ಕಲಕುಟ್ರಿ, ಸಹಕಾರ ಸಂಗಳ ತಾಲೂಕು ನಿಯಂತ್ರಣಾಧಿಕಾರಿ ಸಿ.ಕೆ.ಕೋರಿ, ಬ್ಯಾಂಕ್​ ನಿರೀಕ ಎಸ್​.ಎಸ್​.ಸಿದ್ದನ್ನವರ, ಮುಖ್ಯಕಾರ್ಯನಿರ್ವಾಹಕಿ ದೀಪಾ ಧರೆನ್ನವರ, ಜಗದೀಶ ಕೌಜಗೇರಿ, ಬಿ.ಕೆ.ನಿಕ್ಕಂ, ಶೇಖರ ಗೋಕಾವಿ ಇತರರಿದ್ದರು. ಮಾರುತಿ ಧರೆನ್ನವರ ನಿರೂಪಿಸಿದರು.