ಕಲಬುರಗಿ: ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿರುವ ಜಹೀರಾ ನಸ್ಸೀಮ್ ಅವರು ಮಂಗಳವಾರ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿಕೊಂಡರು.
ಜೆಸ್ಕಾಂ ಎಂ.ಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಭಾಜಪೇಯಿ ಅವರನ್ನು ಸರ್ಕಾರ ಕೇಂದ್ರ ಸೇವೆಗೆ ನಿಯೋಜನೆ ಮಾಡಿದ್ದರಂದ ತೆರವಾದ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸುವಂತೆ ಜಹೀರಾ ನಸ್ಸೀಮ್ ಅವರಿಗೆ ಸರ್ಕಾರ ಆದೇಶಿಸಿತ್ತು.