ಕಲಬುರಗಿಯಲ್ಲಿ ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಸಮ್ಮುಖದಲ್ಲಿ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್​ ಸೇರ್ಪಡೆಯಾದರು. ಮಂಜುನಾಥ ಅಂಜುಟಗಿ, ಸಂಗಮೇಶ ಹಲಕರ್ಟಿ, ಪ್ರವಿಣ ಪಾಟೀಲ್​ ಇದ್ದರು. 
ರಾಜ್ಯ

ಜನಪರ ಆಡಳಿತ ಮೆಚ್ಚಿ ಕಾಂಗ್ರೆಸ್​ನತ್ತ ಯುವಕರು

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಹೇಳಿಕೆ
  • ಬಿಜೆಪಿ ತೊರೆದು "ಕೈ' ಹಿಡಿದ ಕಾರ್ಯಕರ್ತರು
ಕಲಬುರಗಿ: ರಾಜ್ಯ ಸರ್ಕಾರದ ಜನಪರ ಕೆಲಸ, ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿ ಹಾಗೂ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಶಾಸಕ ಎಂ.ವೈ.ಪಾಟೀಲ್​ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮೆಚ್ಚಿ ಸಾಕಷ್ಟು ಯುವಕರು ಕಾಂಗ್ರೆಸ್​ ಸೇರುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಹೇಳಿದರು.
ಅಕ್ಕಮಹಾದೇವಿ ಕಾಲನಿಯ ತಮ್ಮ ನಿವಾಸದಲ್ಲಿ ಶನಿವಾರ ಅತನೂರ ಗ್ರಾಮದ ಬಿಜೆಪಿ ಯುವ ಕಾರ್ಯಕರ್ತರನ್ನು ಕಾಂಗ್ರೆಸ್​ಗೆ ಸ್ವಾಗತಿಸಿ ಮಾತನಾಡಿ, ಯುವಜನರ ಉತ್ಸಾಹ, ವಿಶ್ವಾಸವೂ ಬದಲಾವಣೆ ಸಂಕಲ್ಪಕ್ಕೆ ಸಾಯಾಗಿದೆ. ಮತೇತ್ರದಲ್ಲಿ ಕಾಂಗ್ರೆಸ್​ ಬಲಿಷ್ಠವಾಗುತ್ತಿದ್ದು, ಅಭಿವೃದ್ಧಿ ಮತ್ತು ಜನಪರ ಆಡಳಿತ ನೀಡಲಾಗುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ಪ ಸಂಘಟನೆ ಮಾಡೋಣ. ಬೂತ್​ ಮಟ್ಟದಿಂದ ಕಾಂಗ್ರೆಸ್​ ಬಲವರ್ಧನೆಗೆ ಶ್ರಮಿಸೋಣ ಎಂದರು.
ಯುವ ಕಾರ್ಯಕರ್ತರಾದ ಬೀರಣ್ಣ ಪೂಜಾರಿ, ಬಸು ಗೊಳಸಾರ, ಬೀರಣ್ಣ ಕಣ್ಣಿ, ಸಿದ್ದು ಅಮಂತಿ, ದೇವಪ್ಪ ಪೂಜಾರಿ, ಈರೇಶ ಪೂಜಾರಿ, ಜಕ್ಕಪ್ಪ ಪೂಜಾರಿ, ಹಸನ್​ ಅಲಿ ಭಾಗವಾನ, ಅರ್ಜುನ ದೊಡ್ಡಮನಿ, ಸಿದ್ದು ಪೂಜಾರಿ, ರಾಮಣ್ಣ ಫಕೀರಪ್ಪ, ಮಲ್ಲಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ ಕಾಂಗ್ರೆಸ್​ ಸೇರ್ಪಡೆಯಾದರು.
ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಪ್ರಮುಖರಾದ ಸಂಗಮೇಶ ಹಲಕರ್ಟಿ, ಚನ್ನವಿರ ತಡಲಗಿ, ಪ್ರವಿಣ ಪಾಟೀಲ್​ ಇತರರಿದ್ದರು.