ಯಾದಗಿರಿ ಜಿಲ್ಲೆಯ ಬೆಳಗೇರಾ ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿರುವ ಹಳೇಯ ಕಲ್ಯಾಣಿಯನ್ನು ಗಜಾನನ ಯುವಕ ಸಂಘದವರು ಸ್ವಚ್ಛತೆ ಮಾಡುವ ಮೂಲಕ ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಸಿದರು. ಆಂಜನೇಯ, ಭೀಮು, ನಾಗೇಶ್, ರಾಜು, ಮೌನೇಶ್ ಮಡಿವಾಳ, ದೇವು, ವೆಂಕಟೇಶ, ಮೋನು, ಅಯ್ಯಪ್ಪ, ಲಚ್ಚು, ದೇವೇಂದ್ರ, ಶರಣು, ಮಧು ಗೌಡ, ಭೀಮು ಇತರರಿದ್ದರು. 
ರಾಜ್ಯ

ಕಲ್ಯಾಣಿ ಶುಚಿತ್ವಕ್ಕೆ ಮುಂದಾದ ಯವಕರು

ಪ್ರಮುಖ ಮುಖ್ಯಾಂಶಗಳು

  • ಗಜಾನನ ತರುಣ ಸಂಘದ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ
  • ಭರ್ಜರಿ ಗಣೇಶ ಹಬ್ಬಕ್ಕೆ ಭರದ ಸಿದ್ಧತೆ
ಯಾದಗಿರಿ: ಗಣೇಶ ಹಬ್ಬದ ನಿಮಿತ್ತ ಕಲ್ಯಾಣಿಯೊಂದರಲ್ಲಿ ತುಂಬಿಕೊAಡಿದ್ದ ಕಸ, ಕಡ್ಡಿ, ತ್ಯಾಜ್ಯ ಮತ್ತು ಅಪ್ಪು ಸಸ್ಯಗಳು ಯುವಕರು ತೆರವುಗೊಳಿಸುವ ಮೂಕ ಸ್ವಶ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಬೆಳಗೇರಾ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯನ್ನು ಮಂಗಳವಾರ ಗ್ರಾಮದ ಯುವಕರು ಸ್ಚಚ್ಛತೆಗೆ ಮುಂದಾದರು. ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಮಾರುತೇಶ್ವರ ಗಜಾನನ ತರುಣ ಸಂಘ ೨೦೨೬ನೇ ಸಾಲಿನ ಗಣೇಶ ಉತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಗಜಾನನ ಸಂಘದಿಂದ ಯಾವುದಾದರೂ ಸಾರ್ವಜನಿಕ ಸೇವೆ ಮಾಡುವ ಮುಖಾಂತರ ಗಣೇಶ ಹಬ್ಬಕ್ಕೆ ಸ್ವಾಗತ ಕೋರಬೇಕೆಂದು ಸಂಘದ ಸಭೆಯಲ್ಲಿ ನಿರ್ಣಯಿಸಿದಂತೆ ಆಂಜನೇಯ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛತೆ ಮಾಡುವ ಮೂಲಕ ೨೦೨೬ನೇ ಸಾಲಿನ ಗಣೇಶ ಉತ್ಸವಕ್ಕೆ ಭರ್ಜರಿ ಸಿದ್ಧತೆಗೆ ಈ ಸಂಘ ಮುಂದಾಗಿದೆ.
ಗ್ರಾಮದ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಕಲ್ಯಾಣಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಕಸ, ಕಡ್ಡಿ ಹಾಗೂ ಅನಗತ್ಯ ವಸ್ತುಗಳನ್ನು ತೆರವುಗೊಳಿಸಲಾಯಿತು. ಹಬ್ಬದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸ್ವಚ್ಛ ಹಾಗೂ ಸುಂದರ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ದೇವಸ್ಥಾನದ ಭಕ್ತರು ಉತ್ಸಾಹದಿಂದ ಭಾಗವಹಿಸಿ, ಸ್ವಚ್ಛತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಧಾರ್ಮಿಕ ಆಚರಣೆಗಳೊಂದಿಗೆ ಪರಿಸರ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಿದರು.
ಹೆಸರು ಹೇಳಲ ಇಚ್ಚಿಸದ ಗ್ರಾಮದ ಮುಖಂಡರೊಬ್ಬರು ಮಾತನಾಡಿ, ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಹಬ್ಬಗಳ ಸಂದರ್ಭದಲ್ಲಿ ಇಂತಹ ಸ್ವಚ್ಛತಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಇಂದು ಆ ಕೆಲಸ ಯುವಕರು ಮಾಡುತ್ತಿದ್ದಾರೆ. ಗಣೇಶ ಹಬ್ಬದ ಸಂಭ್ರಮದೊAದಿಗೆ ಸ್ವಚ್ಛತೆಯ ಸಂಕಲ್ಪವೂ ಮಾಡಿದ ಈ ಕಾರ್ಯಕ್ರಮಕ್ಕೆ ನಮ್ಮೆಲ್ಲ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಗಜÁನನ ಸಂಘದಿAದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಆಂಜನೇಯ, ಭೀಮು, ನಾಗೇಶ್, ರಾಜು, ಮೌನೇಶ್ ಮಡಿವಾಳ, ದೇವು, ವೆಂಕಟೇಶ, ಮೋನು, ಅಯ್ಯಪ್ಪ, ಲಚ್ಚು, ದೇವೇಂದ್ರ, ಶರಣು, ಮಧು ಗೌಡ, ಭೀಮು ಇತರರಿದ್ದರು.