ಜಮಖಂಡಿ ನಗರದಲ್ಲಿ ಶುಕ್ರವಾರ ನಡೆದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ವಾರ್ಷಿಕ ಘಟಿಕೋತ್ಸವದಲ್ಲಿ ಎಂಎ ಇಂಗ್ಲಿಷನಲ್ಲಿ ಚಿನ್ನದ ಪದಕ ಪಡೆದ ಆಯೇಶಾ ಅಲಾಸ್ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದಕ ಮತ್ತು ಪದವಿ ಪ್ರದಾನ ಮಾಡಿದರು. ಚಿತ್ರದಲ್ಲಿ ನಾಗಪುರ ಐಐಎಂ ನಿರ್ದೇಶಕ ಡಾ.ಭೀಮರಾಯ ಮೇತ್ರಿ, ವಿವಿ ಕುಲಪತಿ ಆನಂದ ದೇಶಪಾಂಡೆ ಇದ್ದಾರೆ.
ಬಾಗಲಕೋಟೆ: ವಿಕಸಿತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ದೊಡ್ಡದಾಗಿದೆ. ದೇಶದ ಸಂಸ್ಕೃತಿ, ಮೌಲ್ಯಗಳೊಂದಿಗೆ ಸಾಗಿದಾಗ ನಾವೂ ಸೇರಿದಂತೆ ದೇಶ ಸಮೃದ್ಧಿಯಾಗುತ್ತದೆ. ಆತ್ಮನಿರ್ಭರದ ಜೊತೆಗೆ ಆರ್ಥಿಕ ಪ್ರಗತಿಯೂ ಸಾಧನೆಯಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಮಖಂಡಿ ನಗರದ ಬಿಎಲ್‌ಡಿಇಎ ಆವರಣದ ದರ್ಬಾರ್ ಸಭಾಂಗಣದಲ್ಲಿ ನಡೆದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಆಗುತ್ತಿದೆ ಎಂದರು.
ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ನಿರಂತರ ಪರಿಶ್ರಮ, ಸಕಾರಾತ್ಮಕ ದೃಷ್ಟಿಕೋನ ಹೊಂದಿರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆ ನಿರಂತರವಾಗಿರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿಮ್ಮ ಸೇವೆ ಸಲ್ಲಬೇಕು. ತಂತ್ರಜ್ಞಾನ, ಡಿಜಿಟಲ್ ಸಾಧನಗಳ ಬಳಕೆಯಿಂದ ಸಾಧನೆ ಜೊತೆಗೆ ಹೊಸ ಸವಾಲುಗಳು ಎದುರಾಗಿವೆ. ಅವುಗಳನ್ನು ನಿವಾರಿಸಿಕೊಂಡು ಪ್ರಗತಿಪಥದತ್ತ ದಿಟ್ಟ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು.
ಕೃಷಿ, ಉದ್ಯೋಗ, ಶಿಕ್ಷಣದಲ್ಲಿ ಹೊಸ, ಹೊಸ ಅವಕಾಶಗಳು ಬರುತ್ತಿವೆ. ವಿಶ್ವವಿದ್ಯಾಲಯಗಳು ಜ್ಞಾನ ಹಂಚಿಕೆ ಜೊತೆಗೆ ಸಂಶೋಧನೆಗೆ ಒತ್ತು ನೀಡುವ ಮೂಲಕ ಸಾಧನೆಗೆ ಹೊಸ ಮಾರ್ಗ ತೋರಬೇಕಿದೆ. ಜ್ಞಾನ ಕ್ಷೇತ್ರದಿಂದ ಕರ್ಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದೀರಿ. ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಯಶಸ್ಸಿಗೆ ಸತತ ಪರಿಶ್ರಮ ಮುಖ್ಯ. ವೈಫಲ್ಯ ಜೀವನದ ಅಂಗ. ಅದನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು. ವಿಶ್ವದಲ್ಲಿ ನಿತ್ಯ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳಾಗುತ್ತಿವೆ. ಅವುಗಳನ್ನೂ ಅರಿತುಕೊಂಡು ಸಾಗಬೇಕು ಎಂದು ಹೇಳಿದರು.
ಘಟಿಕೋತ್ಸವ ಭಾಷಣ ಮಾಡಿದ ನಾಗಪುರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ಭೀಮರಾಯ ಮೇತ್ರಿ, ಪದವಿ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ವಿ ಜೀವನ ನಡೆಸಲು ಐದು ಮಂತ್ರಗಳಿಗೆ ಅವುಗಳೆಂದರೆ ವಿಭಿನ್ನವಾಗಿರಲು ಧೈರ್ಯ ಮಾಡಬೇಕು. ದೊಡ್ಡ ಕನಸು ಕಾಣಬೇಕು. ನಾವೀನ್ಯತೆ, ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಹಾಗೂ ಭಾರತೀಯ ನೀತಿ ಮತ್ತು ಸಂಪ್ರದಾಯಗಳನ್ನು ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜೀವನ ಎಂದರೆ ನಿಮ್ಮನ್ನು ನೀವು ಕಂಡುಕೊಳ್ಳುವುದಲ್ಲ, ಜೀವನ ಎಂದರೆ ನಿಮ್ಮನ್ನು ನೀವು ಸೃಷ್ಟಿಸಿಕೊಳ್ಳುವುದಾಗಿದೆ. ಹೊಸತನದತ್ತ ನೋಡುವುದಾಗಿದೆ. ವ್ಯಾಪಾರ ಮಾರುಕಟ್ಟೆಯಲ್ಲಿ ಉಳಿಯಲು ನಿರಂತರವಾಗಿ ಮರುಕೌಶಲ ಮತ್ತು ಉನ್ನತೀಕರಣದ ಕಡೆಗೆ ಗಮನ ಹರಿಸಬೇಕು ಎಂದರು.
ಇAಟರ್‌ನೆಟ್, ಲ್ಯಾಪ್‌ಟಾಪ್, ಸ್ಮಾರ್ಟ್-ೆÇÃನ್, ಎಐ ಕಾಲದಲ್ಲಿ ನೀವು ಜನಿಸಿದ್ದೀರಿ. ಭಾರತವು ಈಗ ವಿಶ್ವದಲ್ಲಿಯೇ ಬ್ರಾಂಡ್ ಆಗಿದೆ. ಮುಂದಿನ ಆರ್ಥಿ ವಷÀðದ ವೇಳೆಗೆ ಭಾರತವು ವಿಶ್ವದಲ್ಲಿ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಹೇಳಿದರು.
ಆತ್ಮನಿರ್ಭರ ಭಾರತ, ವಿಕಸಿತ ಭಾರತದ ಪರಿಣಾಮ ೨೦೪೭ರ ವೇಳೆಗೆ ಭಾರತವು ೩೦ ಟ್ರಿಲಿಯನ್ ಆರ್ಥಿಕತೆ ಹೊಂದಲಿದ್ದು, ತಲಾ ಆದಾಯ ೧೮ ಸಾವಿರದಿಂದ ೨೦ ಸಾವಿರ ಡಾಲರ್‌ಗೆ ತಲುಪಲಿದೆ. ಭಾರತವು ವಿಶ್ವದ ಯುವ ಶಕ್ತಿಯ ಐದನೇ ಒಂದು ಭಾಗದಷ್ಟು ಹೊಂದಿದೆ. ಹಿಂದೆ ಜಪಾನ್ ಯುವ ಶಕ್ತಿ ಹೊಂದಿದಾಗಲೇ ಆರ್ಥಿಕವಾಗಿ ಸೂಪರ್ ಶಕ್ತಿಯಾಗಿತ್ತು. ಆದ್ದರಿಂದ ೨೧ನೇ ಶತಮಾನವು ಭಾರತದ ಶತಮಾನವಾಗಿದೆ ಎಂದು ವಿವರಿಸಿದರು.
ಶೇ ೫೧ರಷ್ಟು ವಿದೇಶ ಬಂಡವಾಳ ಹೂಡಿಕೆ ಕರ್ನಾಟಕ ಹಾಗೂ ಮಹಾರಾಷ್ಟçದಲ್ಲಿ ಆಗುತ್ತಿದೆ. ಟೆಕ್ ಕ್ಯಾಪಿಟಲ್ ಆಗಿರುವ ಬೆಂಗಳೂರು ಮುಂದಿನ ದಿನಗಳಲ್ಲಿ ವಿಶ್ವಕ್ಕೇ ಸಿಲಿಕಾನ್ ವ್ಯಾಲಿಯಾಗಲಿದೆ. ತಂತ್ರಜ್ಞಾನ ಬಳಕೆ ಮಾತ್ರವಲ್ಲ, ಉತ್ಪಾದನೆಯಲ್ಲಿಯೂ ದೇಶ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಉತ್ತಮ ನಾಯಕನ ಲಕ್ಷಣಗಳೆಂದರೆ ನೀವು ಎಷ್ಟು ಅನುಯಾಯಿಗಳನ್ನು ಹೊಂದಿದ್ದೀರಿ ಎಂದಲ್ಲ, ಬದಲಾಗಿ ನೀವು ಎಷ್ಟು ನಾಯಕರನ್ನು ಸೃಷ್ಟಿಸುತ್ತೀರಿ ಎಂಬುದಾಗಿದೆ.
ವೈ-Àಲ್ಯದ ಭಯ ಬೇಡ, ಯಾವುದನ್ನೂ ಸಹ ಸರಳವಾಗಿ ಬಿಟ್ಟುಕೊಡಬೇಡಿ. ನೀವು ಬಿಟ್ಟು ಕೊಡದೇ ಇದ್ದಾಗ ಮ್ಯಾಜಿಕ್ ಸಂಭವಿಸುತ್ತದೆ. ವಾಲ್ಟ್ ಡಿಸ್ನಿ, ಐನ್‌ಸ್ಟೀನ್ ಆರಂಭದಲ್ಲಿ ತೊಂದರೆ ಎದುರಿಸಿದ್ದರು. ನಂತರ ವಿಶ್ವವೇ ನಿಬ್ಬೆರಗಾಗುವಂತಹ ಸಾಧನೆ ಮಾಡಿದರು. ಕಠಿಣ ಪರಿಶ್ರಮ, ಸತತ ಪ್ರಯತ್ನ ಯಶಸ್ಸಿನ ಹಾದಿಯಲ್ಲಿ ಕರೆದುಕೊಂಡು ಹೋಗಲಿವೆ ಎಂದರು.
ಸಾಧನೆ ಮನ್ನಣೆಗೆ ಕಾರಣವಾಗುತ್ತದೆ. ಮನ್ನಣೆ ಗೌರವ ತಂದುಕೊಡುತ್ತದೆ. ಗೌರವ ಅಽಕಾರಕ್ಕೆ ಕಾರಣವಾಗುತ್ತದೆ. ಹೀಗಾಗಿ ಕಾರ್ಯಕ್ಷಮತೆಯ ಮೂಲಕ ದಿನನಿತ್ಯದ ಜೀವನದಲ್ಲಿ ಶ್ರೇಷ್ಠತೆಯನ್ನು ಅಭ್ಯಾಸವನ್ನಾಗಿಸಿ ಇದನ್ನು ಸಾಽಸಬಹುದು. ನೈಜ ಪ್ರಪಂಚವೂ ಅತ್ಯುನ್ನತ ಮಟ್ಟದ ಕಾರ್ಯಕ್ಷಮತೆಯನ್ನು ಬಯಸುತ್ತದೆ. ಶಿಸ್ತು, ನಿರ್ಧಾರ ತೆಗೆದುಕೊಳ್ಳುವ ವೇಗ ಮತ್ತು ಕ್ರಿಯೆಯ ವೇಗವು ಹೆಚ್ಚಿನ ಕಾರ್ಯಕ್ಷಮತೆಯ ಲಕ್ಷಣಗಾಗಿವೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಆನಂದ ದೇಶಪಾಂಡೆ, ಕುಲಸಚಿವ ಸೋಮಲಿಂಗ ಗೆಣ್ಣೂರ, ಕುಲಸಚಿವ(ಮೌಲ್ಯಮಾಪನ) ಲತಾ ಕೆ.ಪಿ, ಹಣಕಾಸು ಅಽಕಾರಿ ಡಾ.ಚಿದಾನಂದ ಧವಳೇಶ್ವರ ಮತ್ತಿತರರು ಇದ್ದರು.
ಘಟಿಕೋತ್ಸವದಲ್ಲಿ ಒಟ್ಟು ೧೬ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ೪೬ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದು, ಒಟ್ಟು ೧೬೯೧ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ಬಾಹ್ಯಾಕಾಶ ವಿಜ್ಞಾನಿ, ಪದ್ಮಭೂಷಣ ಎಸ್.ನಂಬಿ ನಾರಾಯಣನ್, ಟೆಕ್-ಉದ್ಯಮಿ ಮಹೇಶ ಬೆಲ್ಲದ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಹಾಗೆಯೇ ಇಳಕಲ್ಲ-ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಅವರ ಅನುಪಸ್ಥಿತಿಯಲ್ಲಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.