ಕೊಳ್ಳೇಗಾಲ ಪಟ್ಟಣದ ಪತಂಜಲಿ ಯೋಗ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯೆದ್ಯ ಡಾ.ಮಧುಸೂದನ್ ಮಾತನಾಡಿದರು. ಶೇಖರ್, ಮಂಜುನಾಥ್, ಆನಂದರಾಮ್ ಶೆಟ್ಟಿ ಇತರರು ಇದ್ದರು.
- ವ್ಯೆದ್ಯ ಡಾ.ಮಧುಸೂದನ್
- ಪತಂಜಲಿ ಯೋಗ ಕೇಂದ್ರ
ಕೊಳ್ಳೇಗಾಲ: ಭಾರತೀಯ ಸಂಸ್ಕೃತಿಯಲ್ಲಿ ಹೆತ್ತವರು, ಗುರುಗಳು ಮತ್ತು ಅತಿಥಿಗಳಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಹಿರಿಯರು ಅವರ ಅನುಭವವನ್ನು ಕಿರಿಯರಿಗೆ ಧಾರೆ ಎರೆಯಬೇಕು ಎಂದು ವ್ಯೆದ್ಯ ಡಾ.ಮಧುಸೂದನ್ ಹೇಳಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ, ರೋಟರಿ ಮಿಡ್ ಟೌನ್ ವತಿಯಿಂದ ಪಟ್ಟಣದ ಪತಂಜಲಿ ಯೋಗ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಪ್ಪಂದಿರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನ್ಮಾರ್ಗದಲ್ಲಿ ಯುವಕರು ನಡೆಯುವಂತೆ ಗುರುಹಿರಿಯರು ಮಾರ್ಗದರ್ಶನ ನೀಡಬೇಕು ಎಂದರು.
ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ವ್ಯಾಯಾಮ, ವಾಕಿಂಗ್, ಉತ್ತಮ ಮಿತ ಆಹಾರ ಸೇವನೆ, ಯೋಗ, ಧ್ಯಾನದ ಮೂಲಕ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯರಾದ ಹೊನ್ನಪ್ಪ, ಎನ್.ಜಡೇಸ್ವಾಮಿ,ಎಂ .ಬಾಲಕೃಷ್ಣ, ಎ.ಟಿ.ಜಗನ್ನಾಥ್, ಜಗದೀಶ್, ಫ್ರಾನ್ಸಿಸ್ ಫರ್ನಾಂಡಿಸ್, ಎ.ಎಸ್.ವೆಂಕಟರಮಣ ಶೆಟ್ಟಿ, ಜನಾರ್ದನ ಆಚಾರ್, ರಂಗಶೆಟ್ಟಿ ಅವರನ್ನು ರೋಟರಿ ಮಿಡ್ ಟೌನ್ ವತಿಯಿಂದ ಸನ್ಮಾನಿಸಲಾಯಿತು.
ರೋಟರಿ ಮಿಡ್‌ಟೌನ್ ಅಧ್ಯಕ್ಷ ಶೇಖರ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಆನಂದ್ ರಾಮ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ರೋಟರಿ ಮಿಡ್ ಟೌನ್ ಮಾಜಿ ಸಹಾಯಕ ಪ್ರಾಂತಪಾಲ ಶಿವಾನಂದ, ಪ್ರವೀಣ್, ಸದಸ್ಯ ಹರ್ಷ, ಕುಮಾರಸ್ವಾಮಿ, ಲೋಕೇಶ್ ಇತರರಿದ್ದರು.