Youth dies after drowning in swimming pool 
ರಾಜ್ಯ

ಸ್ವಿಮಿಂಗ್​ ಪೂಲ್​ನಲ್ಲಿ ಮುಳುಗಿ ಯುವಕ ಸಾವು

ಬಂಗಾರಪೇಟೆ: ತಾಲೂಕಿನ ಸೂಲಿಕುಂಟೆ ಗ್ರಾಪಂ ವ್ಯಾಪ್ತಿಯ ಖಾಸಗಿ ಸ್ವಿಮಿಂಗ್​ಪೂಲ್​ನಲ್ಲಿ ಈಜಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮಧ್ಯಪ್ರದೇಶದ ಯುವಕ ಮೃತಪಟ್ಟಿದ್ದಾನೆ.
ಗ್ವಾಲಿಯರ್​ ನಿವಾಸಿ ಕಮಲ್​ ಜೈನ್​ (28) ಮೃತ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ತನ್ನ 50 ಸಹೋದ್ಯೋಗಿಗಳೊಂದಿಗೆ ಜು.3ರಂದು ಸಂಜೆ ಖಾಸಗಿ ರೆಸಾರ್ಟ್​ಗೆ ಬಂದು ತಂಗಿದ್ದು, ರಾತ್ರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕಮಲ್​ ಜೈನ್​ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಶನಿವಾರ ಬೆಳಗಿನ ಜಾವ ಸುಮಾರು 3 ರಿಂದ 3.30ರ ವೇಳೆ ಒಬ್ಬರೇ ಸ್ವಿಮಿಂಗ್​ಪೂಲ್​ನಲ್ಲಿ ಈಜಲು ಇಳಿದಿದ್ದಾನೆ. ಈಜಾಡುತ್ತಾ ಆಯಾಸಗೊಂಡು ಮೇಲಕ್ಕೆ ಬರಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ, ಪೊಲೀಸ್​ ಇನ್​ಸ್ಪೆಕ್ಟರ್​ ರವಿಕುಮಾರ್​ ಭೇಟಿ ನೀಡಿ ಪರಿಶೀಲಿಸಿದ್ದು, ಬಂಗಾರಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.