ಸೂಲಿಬೆಲೆ ಹೋಬಳಿಮಟ್ಟದ ಲೆವೆನ್​ ಸ್ಟಾರ್​ ಚಾಂಪಿಯನ್​ ಲೀಗ್​ ಕ್ರಿಕೆಟ್​ ಟೂರ್ನ್​ಮೆಂಟ್​ನ ಸಮಾರೋಪದಲ್ಲಿ ವಿಜೇತ ಹೊಸಕೋಟೆ ಸಿಂದೂರಿ ತಂಡಕ್ಕೆ ಒಕ್ಕಲಿಗ ಸಂದ ಮಾಜಿ ನಿರ್ದೇಶಕ ಬಿ.ಎನ್​.ಗೋಪಾಲಗೌಡ ಬಹುಮಾನ ಹಾಗೂ ಟ್ರೋಫಿ ನೀಡಿದರು. ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ನಾಗರಾಜ್​, ವೆಂಕಟೇಶ್​, ಸೈಯದ್​ ಮೆಹಬೂಬ್​ ಇತರರು ಇದ್ದರು. 
ರಾಜ್ಯ

ಯುವಕರೇ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ / SULIBELE

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸೂಲಿಬೆಲೆ :

ವಿದ್ಯಾಭ್ಯಾಸದ ಜತೆಗೆ ಯುವಕರು ಕ್ರೀಡಾ ಮನೋಭಾವ ಬೆ

ಳೆ

ಸಿಕೊಳ್ಳಬೇಕು ಎಂದು ಒಕ್ಕಲಿಗ ಸಂದ ಮಾಜಿ ನಿರ್ದೇಶಕ ಬಿ.ಎನ್​.ಗೋಪಾಲಗೌಡ ಹೇಳಿದರು.

ಸೂಲಿಬೆಲೆಯ ಲೆವೆನ್​ ಸ್ಟಾರ್​ ಕ್ರೀಕೆಟರ್ಸ್​ನಿಂದ ಹಮ್ಮಿಕೊಂಡಿದ್ದ ಲೆವೆನ್​ ಸ್ಟಾರ್​ ಕ್ರಿಕೆಟ್​ ಟೂರ್ನ್​ಮೆಂಟ್​ ಸೀಸನ್​&1 ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಶಿಕ್ಷಣ ವಿದ್ಯಾರ್ಥಿಗಳ ವೃತ್ತಿಪರ ಬದುಕಿನ ಹಾದಿಗೆ ಬುನಾದಿಯಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದರು.

ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ದನ ರೆಡ್ಡಿ, ಸದಸ್ಯ ನರಸಿಂಹಮೂರ್ತಿ, ಗ್ಯಾರಂಟಿ ಸಮಿತಿ ಜಿಲ್ಲಾ ಸದಸ್ಯ ಸೈಯದ್​ ಮೆಹಬೂಬ್​, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್​, ತಿರುಮಲ ಎಂಟರ್​ಪ್ರೆಸಸ್​ ಬಿ.ಎಂ.ಬಸವರಾಜ್​, ಮುಖಂಡ ಎಸ್​.ವೈ.ನಾಗರಾಜ್​, ಮುರುಳಿ, ಮುನೇಂದ್ರ, ಮುನಿರಾಜು ಇದ್ದರು.

ಪಂದ್ಯಾವಳಿ ವಿಜೇತರು :

ಹೊಸಕೋಟೆ ತಾಲೂಕಿನ ಲಾಲ್​ಬಾಗ್​ ದಾಸರಹಳ್ಳಿ ಸಿಂಧೂರಿ ತಂಡ ಪ್ರಥಮ ಬಹುಮಾನವಾಗಿ 70 ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು. ದ್ವೀತಿಯ ಬಹುಮಾನವಾಗಿ 35 ಸಾವಿರ ನಗದು ಹಾಗೂ ಟ್ರೋಫಿಯನ್ನು ಸೂಲಿಬೆಲೆ ಲೆವೆನ್​ ಸ್ಟಾರ್​ ಕ್ರಿಕೆಟರ್​ ತಂಡ ತನ್ನದಾಗಿಸಿಕೊಂಡಿತು. ಹರಳೂರಿನ ಎಚ್​.ಸಿ.ಸಿ ತಂಡ 20 ಸಾವಿರ ನಗದು ಮತ್ತು ಟ್ರೋಪಿಯನ್ನು ಪಡೆಯುವ ಮೂಲಕ 3ನೇ ಬಹುಮಾನ ಪಡೆಯಿತು. ಬೆಸ್ಟ್​ ಬೌಲರ್​ ಹೃತಿಕ್​ ಗೌಡ, ಬೆಸ್ಟ್​ ಬ್ಯಾಟ್ಸ್​ಮೆನ್​ ನವೀನ್​, ಮ್ಯಾನ್​ ಅಪ್​ ದಿ ಮ್ಯಾಚ್​ ಜಗದೀಶ್​ ಪಡೆದುಕೊಂಡರು.