ಡಿ.ಪಾಳ್ಯ ಹೋಬಳಿಯ ಹಲವಾರು ಯುವ ಮುಖಂಡರು ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ಬಣವನ್ನು ತೊರೆದು ಮಾತೃ ಪಕ್ಷ ಕಾಂಗ್ರೆಸ್​ಗೆ ಸೇರ್ಪಡೆಯಾದರು. ಮಾಜಿ ಸಚಿವ ಎನ್​ಎಚ್​.ಶಿವಶಂಕರ ರೆಡ್ಡಿ ಯುವ ಮುಖಂಡರನ್ನು ಸ್ವಾಗತಿಸಿದರು. 
ರಾಜ್ಯ

ಯುವ ಕೈ ಮುಖಂಡರು ಮಾತೃ ಪಕ್ಷಕ್ಕೆ ವಾಪಾಸ್​

ಗೌರಿಬಿದನೂರು: ಡಿ.ಪಾಳ್ಯ ಹೋಬಳಿಯ ಯುವ ಮುಖಂಡರು ಶಾಸಕ ಪುಟ್ಟಸ್ವಾಮಿ ಗೌಡರ ಬಣ ತೊರೆದು ಮಾತೃ ಪಕ್ಷ ಕಾಂಗ್ರೆಸ್​ಗೆ ಸೇರ್ಪಡೆಯಾದರು.
ತಾಲೂಕಿನ ಎಚ್​.ನಾಗಸಂದ್ರ ಗ್ರಾಮದಲ್ಲಿ ಮಾಜಿ ಸಚಿವ ಎನ್​.ಎಚ್​.ಶಿವಶಂಕರ ರೆಡ್ಡಿ ಯುವ ಮುಖಂಡರನ್ನು ಸ್ವಾಗತಿಸಿ ಮಾತನಾಡಿ, ಹಣ ಬಲದ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ದಿನ ನಡೆಯಲ್ಲ, ಆಸೆ ಆಮಿಷ ತೋರಿಸಿ ಹೆಚ್ಚಿನ ದಿನ ಜನರ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ, ಕ್ಷೇತ್ರದ ಜನಕ್ಕೆ ತಮ್ಮ ತಪ್ಪಿನ ಅರಿವಾಗುತ್ತಿದೆ. ನನ್ನ ಅವಧಿಯಲ್ಲಾಗಿರುವ ಅಭಿವೃದ್ಧಿ ಕೆಲಸದ ಬಗ್ಗೆ ಮನವರಿಕೆಯಾಗುತ್ತಿದೆ. ಕಾಂಗ್ರೆಸ್​ ಮೊದಲಿನಂತೆ ಸದೃಢಗೊಳ್ಳಲಿದೆ ಎಂದರು.
ಪಕ್ಷಕ್ಕೆ ಸೇರ್ಪಡೆಯಾದ ರಮೇಶ್​ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರಾದ ಮಾಜಿ ಸಚಿವ ಶಿವಶಂಕರ ರೆಡ್ಡಿಯವರು ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕೆಲಸ ನಡೆಸಿದ್ದಾರೆ. ಕುಡಮಲಕುಂಟೆ ಕೈಗಾರಿಕೆ ಪ್ರದೇಶ ಸ್ಥಾಪನೆಯೊಂದಿಗೆ ಕಾರ್ಖಾನೆ ತಾಲೂಕಿಗೆ ತರುವ ಮೂಲಕ ಕ್ಷೇತ್ರದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸಿದ್ದಾರೆ. ಅವರ ತತ್ವ ಸಿದ್ಧಾಂತ ಮೆಚ್ಚಿ ನಾವು ಮಾತೃಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದರು.
ಮುಖಂಡ ರಾಘವೇಂದ್ರ, ಮುನಿರಾಜು, ಬಾಲಪ್ಪ, ಹರ್ಷ, ವೆಂಕಟರಾಯಪ್ಪ ಇತರರು ಇದ್ದರು.