Fairoz Pathan 
ರಾಜ್ಯ

ಮದುವೆಗೆ 15 ದಿನ ಇರುವಾಗ್ಲೇ ಕೊಲೆಯಾದ ಮಧುಮಗ!; ಸ್ನೇಹಿತನಿಂದ್ಲೇ ಯೂತ್​ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಹತ್ಯೆ..Fairoz Pathan

ಪ್ರಮುಖ ಮುಖ್ಯಾಂಶಗಳು

  • ಹಳೆ ವೈಷಮ್ಯ ಯೂತ್​ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಹತ್ಯೆ
  • ಏಪ್ರಿಲ್​ 24ರಂದು ಮದುವೆ ಫಿಕ್ಸ್, ಏಪ್ರಿಲ್​ 10ರಂದು ಮರ್ಡರ್​
  • ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮಿಕ್ಕವರಿಗಾಗಿ ಹುಡುಕಾಟ ಮುಂದುವರೆದಿದೆ
ಹುಬ್ಬಳ್ಳಿ-ಧಾರವಾಡ: ಅವಳಿ ನಗರವೇ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಯೂತ್​ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯೊಬ್ಬ 32 ವರ್ಷದ ಫೈರೋಜ್​​ ಪಠಾಣ್​​ನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಧಾರವಾಡದಲ್ಲಿನ ನಡೆದಿದೆ.
ಫೈರೋಜ್​​ ಪಠಾಣ್​​ ಮನೆ ಧಾರವಾಡದ ಹಾಶ್ಮಿ ನಗರದಲ್ಲಿತ್ತು. ಇಲ್ಲಿಗೆ ಏಪ್ರಿಲ್​ 10ರ ಸಂಜೆ 6:30ಕ್ಕೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಮಾಹಿತಿ ಲೀಕ್​ ಆಗುತ್ತಲೇ ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿದ್ದಾರೆ. ಈ ಕೃತ್ಯದಲ್ಲಿ ಆರು ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಹಳೆ ವೈಷ್ಯಮ್ಯ ಕೊಲೆಗೆ ಕಾರಣ

ಮೊಹಮ್ಮದ್ ಶಾ ಸೇರಿದಂತೆ ಸದ್ದಾಂ, ಗೌಸ್, ಪರ್ವೇಜ್ ಪಠಾಣ್​ನನ್ನು ಕೊಂದ ಕಿಡಿಗೇಡಿಗಳು ಎಂದು ಗುರುತಿಸಲಾಗಿದ್ದು, ಕೊಲೆಗೆ ಸಂಚು ರೂಪಿಸಿದ್ದ ಅರ್ಬಾಜ್​ ಪಠಾಣ್​ ಮತ್ತು ಗುಲಾಬ್​ ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನು ನಾಲ್ವರು ಪೊರಾರಿಯಾಗಿದ್ದಾರೆ. ಅವರಿಗಾಗಿ ಪತ್ತೆದಾರಿ ಕಾರ್ಯ ಮುಂದುವರೆದಿದೆ. ಇಬ್ಬರ ಮಧ್ಯೆ ಇದ್ದ ಹಳೆ ವೈಷಮ್ಯ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಮುನ್ನ ಕೊಲೆಯಾದ ಮಧುಮಗ

ಪಠಾಣ್​ ಮದುವೆಗೆ 15 ದಿನ ಬಾಕಿ ಇತ್ತು. ಏಪ್ರಿಲ್​ 24ರಂದು ಅವರ ಮದುವೆ ಇದ್ದ ಕಾರಣ ಮನೆಯ ಕುಟುಂಬಸ್ಥರು ವಿವಾಹದ ತಯಾರಿಯಲ್ಲಿದ್ದರು. ಊರಿಗೆ ಆಮಂತ್ರಣ ಪತ್ರ ಹಂಚುವ ಕೆಲಸವನ್ನು ಮಾಡುತ್ತಿದ್ದರು. ಈ ಮಧ್ಯೆ ರಾತ್ರಿ ಮನೆಗೆ ನುಗ್ಗಿದ್ದ ಅಪರಿಚಿತರು ಅವರ ಮೇಲೆ ದಾಳಿ ನಡೆಸಿದ್ದಾರೆ.

ಸಿಸಿಟಿವಿಯಲ್ಲಿ ಏನಿದೆ?

ಸಿಸಿಟಿವಿ ಕ್ಯಾಮೇರಾದಲ್ಲಿ ಹತ್ಯೆ ದೃಶ್ಯ ಸೆರೆಯಾಗಿದೆ. ಇದರಲ್ಲಿ ಮೊಹಮ್ಮದ್​ ಶಾ ಎಂಬಾತ ಕಾಣಿಸಿಕೊಂಡಿದ್ದಾನೆ. ಆತನ ಜೊತೆ ಇನ್ನು ನಾಲ್ವರು ಇರುವುದು ಇದರಲ್ಲಿ ಕಾಣಸಿಗುತ್ತದೆ. ಪಠಾಣ್​ ಕರೆಯಲ್ಲಿ ಯಾರೊಂದಿಗೋ ಮನೆಯ ಗೇಟ್​ ಬಳಿ ಮಾತನಾಡುತ್ತ ನಿಂತಿರುವಾಗ ಬಂದ ವ್ಯಕ್ತಿ ಅವರ ಮುಂದೆಯೇ ನಿಂತಿರುತ್ತಾನೆ. ಹಾಗೆ ಇರುವಾಗ ಹೊಟ್ಟೆಗೆ ಇರಿಯುತ್ತಾನೆ. ದಾಳಿಗೊಳಗಾದ ಅವರು ತಪ್ಪಿಸಿಕೊಳ್ಳಲು, ಒಳಗೆ ಹೋದಾಗ ದಾಳಿಕೋರರು ಅವರನ್ನು ಹಿಂಬಾಲಿಸಿ ಕೊಲೆ ಮಾಡುತ್ತಾರೆ. ಈ ಘಟನೆ ನಡೆದು 40 ಸೆಕೆಂಡುಗಳ ಳಿಕ ನಾಲ್ವರು ಒಬ್ಬೊಬ್ಬರಾಗಿ ಮನೆಯಿಂದ ಹೊರಬರುರುತ್ತಾರೆ. ಅಷ್ಟರಲ್ಲಿ ಒಂದೆಡೆ ಸಾಕಷ್ಟು ಜನರು ದಿಗ್ಭ್ರಮೆಗೊಳಗಾಗಿ ನಿಂತಿದ್ದಾರೆ. ಪಠಾಣ್​ ಬೆಡ್​ ರೂಂನಲ್ಲಿ ಅನಾಥವಾಗಿ ಮೃತದೇಹ ಬಿದ್ದಿರುವುದು ಕಾಣಸಿಗುತ್ತದೆ.

ಕಾರಣ ಏನು?

ಆರೋಪಿ ಮೊಹಮ್ಮದ್​ ಶಾ, ಫೈರೋಜ್​​ ಪಠಾಣ್​​ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಹೊಲದ ಸಂಬಂಧ ಜಗಳ ನಡೆದಿತ್ತು. ಆ ಘಟನೆ ಬಳಿಕವೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಫೈರೋಜ್​ ತಾಯಿ ಹೇಳಿದ್ದೇನು?

ಪಠಾಣ್​ನನ್ನು ಕೊಲೆ ಮಾಡಿದ್ದು ಆತನ ಸ್ನೇಹಿತರು. ನನಗೆ ಮತ್ತು ನನ್ನ ಮಗಳ ಮೇಲು ದಾಳಿ ಮಾಡಿದ್ದಾರೆ. ನಮ್ಮ ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ. ಅವರಿಬ್ಬರ ಮಧ್ಯೆ ದ್ವೇಷ ಇತ್ತು ಅನ್ನೋದು ನನಗೆ ಗೊತ್ತಿಲ್ಲ ಎಂದು ಅವರ ತಾಯಿ ಹೇಳಿದ್ದಾರೆ.

ಪೊಲೀಸರು ಏನಂದ್ರು?

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ನಿನ್ನೆ ಉಪನಗ ಪೊಲೀಸ್​ ಠಾಣಾ ವ್ಯಪ್ತಿ ಕೊಲೆ ಪ್ರಕರಣ ನಡೆದಿದೆ. ಫೈರೋಜ್ ಅವರ ಮೃತದೇಹ ಹುಬ್ಬಳ್ಳಿ ಕಿಮ್ಸ್​ಗೆ ಮರಣೋತ್ತರ ಪರೀಕ್ಷೆಗೆಕಳುಗಹಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲಾಗುತ್ತದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿದಲ್ಲ ಎಂದರು,(ಏಜೆನ್ಸೀಸ್​)