Young woman dies after falling into agricultural pond
ಚಿಕ್ಕಬಳ್ಳಾಪುರ: ತಾಲೂಕಿನ ದಿಬ್ಬೂರಿನಲ್ಲಿನ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಯುವತಿ ಮೃತಪಟ್ಟಿದ್ದಾಳೆ.
ಇಲ್ಲಿನ ಜಿಲ್ಲಾಸ್ಪತ್ರೆಯ ಫಾರ್ಮಸಿ ವಿಭಾಗದ ಕಂಪ್ಯೂಟರ್ ಆಪರೇಟರ್ ಮೌನಿಷಾ (25) ಮೃತೆ. ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ತೋಟಕ್ಕೆ ತಂದೆ ಮುನಿರಾಜು ಜತೆ ಹೋಗಿದ್ದಳು. ಕೈ ಕಾಲು ತೊಳೆದುಕೊಳ್ಳಲು ಕೃಷಿ ಹೊಂಡದ ಕಡೆಗೆ ತೆರಳಿದ್ದಾಳೆ.
ಇತ್ತ ಆಕೆಯ ತಂದೆ ಮನೆಯ ಕಡೆಗೆ ಬಂದಿದ್ದು, ಮಗಳು ಕೆಲಹೊತ್ತಾದರೂ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಹುಡುಕಾಡಿದಾಗ ನೀರಿನ ಹೊಂಡದಲ್ಲಿ ಮೌನಿಷಾಳಾ ಮೃತದೇಹ ಪತ್ತೆಯಾಗಿದೆ. ದಿಬ್ಬೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.