ಹೂಲಿಕಟ್ಟಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಮಠದ ಜಾತ್ರೆ ಅಂಗವಾಗಿ ಶನಿವಾರ ಕುಮಾರ ಸ್ವಾಮೀಜಿ ಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಪತ್ರಯ್ಯ ಹುಲಕಂತಿ, ಯಲ್ಲಪ್ಪ ಗೋಣಿ ಇತರರಿದ್ದರು. 
ರಾಜ್ಯ

ಯುವ ಜನರು ಚಿಂತನೆ ಮೈಗೂಡಿಸಿಕೊಳ್ಳಬೇಕು

ಮಮದಾಪುರ: ಧರ್ಮಸಭೆ ಮೂಲಕ ಯುವ ಜನಾಂಗಕ್ಕೆ ಆಚಾರ&ವಿಚಾರ, ಸಂಸತಿ ಪರಿಚಯಿಸುತ್ತಿರುವ ಕಾರ್ಯ ಶ್ಲಾನೀಯ ಎಂದು ಶಿವಲಿಂಗೇಶ್ವರ ಮಠದ ಕುಮಾರ ಸ್ವಾಮೀಜಿ ಹೇಳಿದರು.
ಸಮೀಪದ ಹೂಲಿಕಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವ ಜನರು ಮೊಬೈಲ್​ ಗೀಳಿಗೆ ಅಂಟಿಕೊಳ್ಳದೆ ಮಠ&ಮಂದಿರಗಳಲ್ಲಿ ನಡೆಯುವ ಶಿವ ಭಜನೆ, ಕೀರ್ತನೆ, ಪ್ರವಚನ ಸೇರಿ ಸತ್ಸಂಗಗಳಲ್ಲಿ ಪಾಲ್ಗೊಳ್ಳುವ ಮೂಲಕ ಬದುಕಿನಲ್ಲಿ ಮಹಾತ್ಮರ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪತ್ರಯ್ಯ ಹುಲಕಂತಿ, ಯಲ್ಲಪ್ಪ ಗೋಣಿ, ಬಾಳಪ್ಪ ಕಂಕಣವಾಡಿ, ವಿನೋದ ಗ್ಯಾನಪ್ಪನವರ, ನಿಜಲಿಂಗಪ್ಪ ಅಂಗಡಿ, ಶಿವಾನಂದ ಮಮದಾಪುರ, ಮಲ್ಲಿಕಾರ್ಜುನ ಹಿರೇಮಠ, ಅಜ್ಜಪ್ಪ ಕರಿಗಾರ, ತುಕಾರಾಮ ಕುರಿ, ಬಾಬು ಬಡಿಗೇರ, ಲಗಮಣ್ಣ ಪಾಟೀಲ, ಕಲ್ಲಪ್ಪ ಪೂಜೇರಿ ಇತರರಿದ್ದರು.