ಔರಾದ್ ತಾಲೂಕಿನ ಬೆಲ್ದಾಳ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖಂಡ ಸಾಗರ ಪಾಟೀಲ್, ಸಿದ್ರಾಮ ಸಿಂಧೆ, ಸಂಗಮೇಶ ಬೆಲ್ದಾಳ, ಕಾಶಿನಾಥ ಬೆಲ್ದಾಳ, ಸಂಗಮೇಶ ಬೆಲ್ದಾಳ, ಬಸಯ್ಯಾ ಸ್ವಾಮಿ ಇತರರಿದ್ದರು.
- ಮುಖಂಡ ಸಾಗರ ಪಾಟೀಲ್ ಸಲಹೆ
- ಬೆಲ್ದಾಳದಲ್ಲಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ
ಔರಾದ: ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ಭಾರತದ ಮೂಲ ಶಾಸ್ತ್ರೀಯ ಸಂಗೀತದಿಂದ ದೂರ ಉಳಿಯುತ್ತಿರುವ ಯುವ ಸಮೂಹ, ದೇಶೀಯ ಕೆಲೆಗಳನ್ನು ಕಲಿಯುವ ಮೂಲಕ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮಬೇಕು ಎಂದು ಮುಖಂಡ ಸಾಗರ ಪಾಟೀಲ್ ಸಲಹೆ ನೀಡಿದರು.
ಡಾ.ಪಂಡಿತ ಪುಟ್ಟರಾಜ ಸಂಗೀತ ಸಾಹಿತ್ಯ ನಾಟ್ಯ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಬೆಲ್ದಾಳ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿಯಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಕಡೆ ಹೆಚ್ಚಿನ ಒಲವು ತೋರಿಸುವ ಮೂಲಕ ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಪಟ್ಟಣ, ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಂಸ್ಕೃತಿ ಉತ್ತೇಜಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಯುವಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಸಂಸ್ಥೆ ಅಧ್ಯಕ್ಷ ಕಾಶಿನಾಥ ಬೆಲ್ದಾಳ, ಕಾರ್ಯದರ್ಶಿ ಸಂಗಮೇಶ ಬೆಲ್ದಾಳ, ಜನವಾಡ ಮಹಾದೇವ ಮಂದಿರದ ಬಸಯ್ಯಾ ಸ್ವಾಮಿ, ಪ್ರಮುಖರಾದ ರವೀಂದ್ರ ರೆಡ್ಡಿ, ವೀರಾರೆಡ್ಡಿ, ಜೈಪಾಲರೆಡ್ಡಿ, ಗೋವಿಂದರೆಡ್ಡಿ ಕೋಯಿಲೆ, ಗಂಗಾರೆಡ್ಡಿ ಪಿಟ್ರೆ, ವೆಂಕಟರೆಡ್ಡಿ ಪಿಟ್ಲೆ, ಶಿವಾರೆಡ್ಡಿ ಇಂದುರೆ, ಶೀಲವಂತ, ಭೋಜಾರೆಡ್ಡಿ ಇತರರಿದ್ದರು.