ಇಎಸ್ಐ ಆಸಷ್ಪತ್ರೆ  
ರಾಜ್ಯ

ಚಿಕಿತ್ಸೆ ಪಡೆದ ಯುವಕನಗೆ ಕಣ್ಣು ಹೋಯ್ತು! ತಾಯಿ ಆರೋಪ

ಪ್ರಮುಖ ಮುಖ್ಯಾಂಶಗಳು

  • - ಇಎಸ್‌ಐ ಆಸ್ಪತ್ರೆ ವೈದ್ಯರ ವಿರುದ್ಧ ಠಾಣೆಗೆ ಪಾಲಕರ ದೂರು
  • - ಯುವಕನಿಗೆ ಮಿದುಳು ಜ್ವರ ಹಾಗೂ ಟಿಬಿ ಸಮಸ್ಯೆ ಇತ್ತು
  • - ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡಿಲ್ಲ ವೈದ್ಯರ ಸ್ಪಷ್ಟನೆ
ಬೆಂಗಳೂರು: ಅನಾರೋಗ್ಯದಿಂದ ನಗರದ ಇಎಸ್‌ಐ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ 23 ವರ್ಷದ ಯುವಕನಿಗೆ ವೈದ್ಯರ ನಿರ್ಲಕ್ಷ್ಯದಿಂದ ದೃಷ್ಟಿ ಹೋಗಿದೆ ಎಂದು ಅರೋಪಿಸಿ ಪೋಷಕರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೈದ್ಯರು ಮಾಡಿದ ಎಡವಟ್ಟಿನಿಂದ ದುಡಿದು ನನ್ನನ್ನು ಸಾಕಬೇಕಿದ್ದ ಮಗ ದೃಷ್ಟಿ ಹಾಗೂ ಕೈಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆಯಲ್ಲಿ ಮಲಗಿದ್ದಾನೆ. ನನ್ನ ಮಗ ಗುಣ ಹೊಂದಬೇಕು. ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರೋಗಿಯ ತಾಯಿ ಲಕ್ಷ್ಮಿ ಮನವಿ ಮಾಡಿದ್ದಾರೆ.
ಜೂ.16ರ ಸಂಜೆ ಜ್ವರದಿಂದ ಬಳಲುತ್ತಿದ್ದ ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರ ಸಲಹೆ ಮೇರೆಗೆ ರಕ್ತ ಪರೀಕ್ಷೆ ಸೇರಿ ಹಲವು ಪರೀಕ್ಷೆಗಳನ್ನು ಮಾಡಿಸಲಾಯಿತು. ವರದಿಯಲ್ಲಿ ಎಲ್ಲವೂ ನಾರ್ಮಲ್ ಎಂದಿತ್ತು. ಆದರೆ, ಜ್ವರ ವಾಸಿಯಾಗದ ಕಾರಣ ವೈದ್ಯರು ಬೇರೆ ಸಮಸ್ಯೆ ಇರುಬಹುದು. ಇಎಸ್‌ಐ ಆಸ್ಪತ್ರೆಯಲ್ಲಿ ತೋರಿಸಿ ಎಂದು ಸೂಚಿಸಿದರು. ಅದರಂತೆ ಜೂ. 26ರಂದು ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲ ಪರೀಕ್ಷೆಗಳನ್ನು ಮಾಡಿದ ವೈದ್ಯರು ತಲೆ ಮತ್ತು ಬೆನ್ನಿನಲ್ಲಿ ನೀರು ತುಂಬಿದೆ ಎಂದೇಳಿ ನೀರು ತೆಗೆದರು. ನಂತರದಲ್ಲಿ ಸೊಂಟ, ಕೈಕಾಲು ಅಲುಗಾಡಿಸಲು ಆಗದೆ ಹಾಸಿಗೆ ಹಿಡಿದಿದ್ದಾನೆ ಎಂದು ಗೋಳಿಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ನಿಮ್ಹಾನ್ಸ್‌ಗೆ ಹೋಗಿ ಎಂದು ಕಳುಹಿಸಿದರು. ಆದರೆ ಅಲ್ಲಿ ಯಾರೂ ಚಿಕಿತ್ಸೆ ನೀಡಲಿಲ್ಲ, ದಾಖಲು ಸಹ ಮಾಡಿಕೊಳ್ಳದೆ ವಾಪಸ್ ಕಳುಹಿಸಿದರು. ಹೀಗೆ ಕಳೆದ 7 ತಿಂಗಳಿನಿಂದ ಮಗ ಹಾಸಿಗೆಯಲ್ಲಿಯೇ ಇದ್ದಾನೆ. ಇಎಸ್‌ಐ ಕಾರ್ಡ್ ಇದ್ದರೂ, ಈವರೆಗೂ ಔಷಧಿ ಮಾತ್ರೆ ಅಂತ 2 ಲಕ್ಷ ರೂ. ವರೆಗೂ ಖರ್ಚು ಮಾಡಿದ್ದೇನೆ. ಆದರೆ ಮಗ ಗುಣವಾಗಿಲ್ಲ. ಹೀಗಿರುವಾಗ ಮನೆಗೆ ಕರೆದುಕೊಂಡು ಹೋಗು ಎನ್ನುತ್ತಿದ್ದಾರೆ. ಆತ ಗುಣವಾಗದೆ ಹೇಗೆ ಕರೆದುಕೊಂಡು ಹೋಗಲಿ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ವೈದ್ಯರು ಯುವಕ ಆಸ್ಪತ್ರೆಗೆ ದಾಖಲಾದ ಸಂರ್ಭದಲ್ಲಿ ಕೆಲ ಪರೀಕ್ಷೆಗಳನ್ನು ನಡೆಸಲಾಯಿತು. ಇದರಿಂದ ಆತನಿಗೆ ಮಿದುಳು ಜ್ವರ ಇರುವುದು ಪತ್ತೆಯಾಗಿದ್ದು, ಜತೆಗೆ ಟಿಬಿ ಸಹ ಇದೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು
ಅನಾರೋಗ್ಯದಿಂದ ನಗರದ ಇಎಸ್‌ಐ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ 23 ವರ್ಷದ ಯುವಕನಿಗೆ ವೈದ್ಯರ ನಿರ್ಲಕ್ಷ್ಯದಿಂದ ದೃಷ್ಟಿ ಹೋಗಿದೆ ಎಂದು ಅರೋಪಿಸಿ ಪೋಷಕರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.