ಸಿಗ್ನಲ್ನಲ್ಲಿ ಡ್ರ್ಯಾಗರ್ ಹಿಡಿದು ಬೆದರಿಕೆ ಹಾಕಿದ ಯುವಕ
- ಸಂಚಾರ ನಿಯಮಗಳನ್ನು ಗಾಳಿಗೆ ತೂರಿದಲ್ಲದೆ, ಟ್ರಾಫಿಕ್ ಸಿಗ್ನಲ್ನಲ್ಲೇ ಗಲಾಟೆ ಮಾಡಿದ ದುಷ್ಕರ್ಮಿ
- ನಿನ್ನೆ ಸಂಜೆ ನಡುರಸ್ತೆಯಲ್ಲಿ ಡ್ರ್ಯಾಗರ್ ಹಿಡಿದು ಕಾರು ಚಾಲಕನಿಗೆ ಅವಾಜ್ ಹಾಕಿದ ಯುವಕ
- KA53JB3274 ನೋಂದಣಿ ಸಂಖ್ಯೆಯ ಬೈಕ್ ಚಾಲಕ ಈ ದುರ್ವರ್ತನೆ ತೋರಿದ್ದಾನೆ
ಬೆಂಗಳೂರು: ದುಷ್ಕರ್ಮಿಯೊಬ್ಬ ಸಂಚಾರ ನಿಯಮಗಳನ್ನು ( Traffic Rules ) ಗಾಳಿಗೆ ತೂರಿದಲ್ಲದೆ, ಟ್ರಾಫಿಕ್ ಸಿಗ್ನಲ್ನಲ್ಲೇ ಗಲಾಟೆ ಮಾಡಿ, ಡ್ರ್ಯಾಗರ್ ಹಿಡಿದು ಬೆದರಿಕೆ ಹಾಕಿರುವಂತಹ ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಈ ಘಟನೆ ನಿನ್ನೆ (ಜ.16) ಸಂಜೆ 6 ಗಂಟೆಗೆ ವೈಟ್ ಫೀಲ್ಡ್ ವಿಭಾಗದಲ್ಲಿ ನಡೆದಿದೆ. ದುಷ್ಕರ್ಮಿಯೊಬ್ಬ ನಡುರಸ್ತೆಯಲ್ಲಿ ಡ್ರ್ಯಾಗರ್ ಹಿಡಿದು ಕಾರು ಚಾಲಕನಿಗೆ ಅವಾಜ್ ಹಾಕಿದ್ದಾನೆ. KA53JB3274 ನೋಂದಣಿ ಸಂಖ್ಯೆಯ ಬೈಕ್ ಚಾಲಕ ಈ ದುರ್ವರ್ತನೆ ತೋರಿದ್ದಾನೆ.
ಅರ್ಬಾಜ್ ಖಾನ್ ಎಂಬಾತನ ಹೆಸರಲ್ಲಿ ಬೈಕ್ ನೋಂದಣಿಯಾಗಿದೆ. ಸಿಗ್ನಲ್ ನಲ್ಲಿದ್ದಾಗ ಕಾರು ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ ನಡೆದಿದೆ. ಸೊಂಟದಲ್ಲಿ ಡ್ರ್ಯಾಗರ್ ಸಿಕ್ಕಿಸಿಕೊಂಡು ಬೈಕ್ ಚಲಾಯಿಸ್ತಿದ್ದ ದುಷ್ಕರ್ಮಿ, ಏಕಾಏಕಿ ಬೈಕ್ನಿಂದ ಇಳಿದು ಬಂದು, ಕೈಯಲ್ಲಿ ಚಾಕು ಹಿಡಿದು ಕಾರಿನಲ್ಲಿದ್ದವರಿಗೆ ಆವಾಜ್ ಹಾಕಿದ್ದಾನೆ.
ಅವಾಚ್ಯ ಪದಗಳಿಂದ ಕಾರು ಚಾಲಕನ ನಿಂದಿಸಿ ಬೆದರಿಕೆ ಹಾಕಿರೋ ಆರೋಪ ಯುವಕನ ವಿರುದ್ಧ ಕೇಳಿಬಂದಿದೆ. ಈ ಘಟನೆಯ ದೃಶ್ಯಾವಾಳಿ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಆಧರಿಸಿ ಘಟನೆಯ ಬಗ್ಗೆ ಬೆಂಗಳೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.