Young man dies in accident 
ರಾಜ್ಯ

ಅಪಘಾತದಲ್ಲಿ ಯುವಕ ಸಾವು

ಗುಡಿಬಂಡೆ: ತಾಲೂಕಿನ ದಪ್ಪರ್ತಿ ಕ್ರಾಸ್​ನಲ್ಲಿ ಬುಧವಾರ ಬೈಕ್​ ಮರಕ್ಕೆ ಡಿಕ್ಕಿಯಾಗಿ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.ತಾಲೂಕಿನ ಗವಿಕುಂಟಹಳ್ಳಿಯ ಜಯರಾಮಪ್ಪ ಮತ್ತು ನಾಗಮಣಿ ದಂಪತಿಯ ಮಗ ನವೀನಕುಮಾರ್​ (22) ಮೃತ.
ಯುವಕ ಕೆಲಸಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗಿದ್ದು, ತಿರುವು ರಸ್ತೆಯಲ್ಲಿ ವಾಹನವನ್ನು ತಿರುಗಿಸಿಕೊಳ್ಳಲು ಹೋಗಿ ರಸ್ತೆ ಎದುರು ದಿಕ್ಕಿನಲ್ಲಿರುವ ಮರಕ್ಕೆ ಡಿಕ್ಕಿಯಾಗಿ ಮುಖ ಮತ್ತು ತಲೆಗೆ ತೀವ್ರವಾಗಿ ಪೆಟ್ಟುಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾನೆ.ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ನವೀನ್​ ಕುಮಾರ್​ ಒಬ್ಬನೇ ಮಗನಾಗಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತು.ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.