ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪದವಿ ಪ್ರಮಾಣ ಪತ್ರ ವಿತರಣೆ ಮಾಡಿದರು. ಪ್ರಾಂಶುಪಾಲ ಡಾ.ರವಿಚಂದ್ರನ್, ಸೂಪರಿಂಡೆಂಟ್ ಡಾ.ದಯಾನಂದ್ ಇತರರು ಇದ್ದರು.
ಹೊಸಕೋಟೆ : ವೈದ್ಯಕಿಯ ಸುಂದರ ವೃತ್ತಿಯಾಗಿದ್ದು, ಯುವ ವೈದ್ಯರುಅತಿ ಹೆಚ್ಚು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.
ನಗರದ ಎಂವಿಜೆ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಆಸ್ಪತ್ರೆ ಬೆಳ್ಳಿ ಹಬ್ಬ ಸಂಭ್ರಮಹಾಗೂ ವೈದ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯ ವೃತ್ತಿ ನಿರಂತರ ಪರಿಶ್ರಮದಿಂದ ಪಡೆದದ್ದಾಗಿದ್ದು, ಜಾತಿ, ಧರ್ಮ ನೋಡದೆ ಮಾನವೀಯ ಮೌಲ್ಯಗಳನ್ನು ಮನದಲ್ಲಿಟ್ಟುಕೊಂಡು ವೃತ್ತಿಯನ್ನು ನಿಭಾಯಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗ ಮತ್ತು ತಂತ್ರಜ್ಞಾನಕ್ಕೆ ತಮ್ಮ ವೃತ್ತಿಯನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರ ಜೀವಕ್ಕೂ ಇಲ್ಲಿ ಬೆಲೆ ಇದೆ, ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗದೆ ಸಮಾಜ ಸೇವೆ ಮಾಡಿರಿ ಎಂದರು.
ಸಂಸ್ಥೆಯಚೇರ್ಮನ್ ಡಾ.ಎಂ.ಜೆ.ಮೋಹನ್ ಮಾತನಾಡಿ, 25 ವರ್ಷಗಳ ಹಿಂದಿನ ವೈದ್ಯಕಿಯ ಪದ್ಧತಿ ಇಂದು ಇಲ್ಲವಾಗಿದೆ. ಇಂದಿನ ಔಷಧಗಳು ಭಾರಿ ಪರಿಣಾಮಕಾರಿಯಾಗಿ ಕೆಲಸ ಮಾಡಿ ರೋಗವನ್ನು ಸಂಪೂರ್ಣ ಗುಣಪಡಿಸುವ ಶಕ್ತಿ ಹೊಂದಿರುತ್ತವೆ. ಶಸಚಿಕಿತ್ಸೆಗೆ ರೋಬೋಟಿಕ್ ತಂತ್ರಜ್ಞಾನ ಬಂದಿದೆ. ಕೆಲವೇ ಗಂಟೆಗಳಲ್ಲಿ ನಿಖರವಾದ ಶಸ ಚಿಕಿತ್ಸೆ ಮಾಡಬಹುದಾಗಿದ್ದು, ತಂತ್ರಜ್ಞಾನಕ್ಕೆ ಹೊಂದಿಕೊಂಡು ವೃತ್ತಿಯಲ್ಲಿ ಮುಂದುವರಿಯಬೇಕು. ಆ ಮೂಲಕ ಸಮಾಜಕ್ಕೆ ಮಾದರಿ ವೈದ್ಯರಾಗಬೇಕು ಎಂದರು.
ಎಂವಿಜೆ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ.ರವಿಚಂದ್ರನ್, ಸೂಪರಿಂಡೆಂಟ್ ಡಾ.ದಯಾನಂದ್, ಡೆಪ್ಯುಟಿ ಸೂಪರಿಂಡೆಂಟ್ ಡಾ.ಪ್ರಮೋದ್, ಅಂಜನ್ ರೆಡ್ಡಿ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಅನ್ಬುಕುಮಾರ್, ರೋಟರಿ ಜಿಲ್ಲಾ ಸಹಾಯಕ ಪಾಲಕ ಡಿ.ಎಸ್. ರಾಜ್ ಕುಮಾರ್ ಇದ್ದರು.
25 ವರ್ಷಗಳಿಂದ ನಿರಂತರವಾಗಿ ಆರೋಗ್ಯ ೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳಾಪುರ ಭಾಗದ ಜನರಿಗೆ ಆಸರೆಯಾಗಿ ಉಚಿತ ಸೇವೆ ಒದಗಿಸುತ್ತಿದೆ.
— > ಡಾ.ಧರಣಿ ಮೋಹನ್, ಮುಖ್ಯಕಾರ್ಯನಿರ್ವಹಣಾಧಿಕಾರಿ, ಎಂವಿಜೆ ಆಸ್ಪತ್ರೆ.