ಬಸವಕಲ್ಯಾಣದ ಗವಿಮಠದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಶ್ರೀ ನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂದೇಶ ಕುರಿತ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಹುಲಸೂರು ತಹಸೀಲ್ದಾರ್​ ಶಿವಾನಂದ ಮೇತ್ರೆ ಉದ್ಘಾಟಿಸಿದರು. ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಸಿದ್ದೇಶ್ವರ ಶಿವಾಚಾರ್ಯ, ಶರಣಪ್ಪ ಬಿರಾದಾರ, ಮಲ್ಲಿಕಾರ್ಜುನ ಆಲಗೂಡೆ ಇತರರಿದ್ದರು. 
ರಾಜ್ಯ

ತಿಳಿಯಬೇಕಿದೆ ಶ್ರಾವಣ, ಶಿವಾಚಾರ್ಯ ಪರಂಪರೆ ಮಹತ್ವ

ಪ್ರಮುಖ ಮುಖ್ಯಾಂಶಗಳು

  • ಹುಲಸೂರು ತಹಸೀಲ್ದಾರ್​ ಶಿವಾನಂದ ಮೇತ್ರೆ ಅಭಿಪ್ರಾಯ
  • ಗವಿಮಠದಲ್ಲಿ ಧಾರ್ಮಿಕ-ಆಧ್ಯಾತ್ಮಿಕ ಉಪನ್ಯಾಸ ಮಾಲೆ
ಬಸವಕಲ್ಯಾಣ: ಶ್ರಾವಣ ಮಾಸದ ಮಹತ್ವ ಹಾಗೂ ಶಿವಾಚಾರ್ಯ ಪರಂಪರೆಯ ವಿಶೇಷತೆ ತಿಳಿಯುವುದು ಅಗತ್ಯವಾಗಿದೆ ಎಂದು ಹುಲಸೂರು ತಹಸೀಲ್ದಾರ್​ ಶಿವಾನಂದ ಮೇತ್ರೆ ಹೇಳಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಗುರುವಾರ ಸಂಜೆ ಗವಿಮಠ ಟ್ರಸ್ಟ್​ ಏರ್ಪಡಿಸಿರುವ ಶ್ರೀ ನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂದೇಶ ಕುರಿತ ಉಪನ್ಯಾಸ ಮಾಲೆಗೆ ಚಾಲನೆ ನೀಡಿದ ಅವರು, ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳು ಶಿವನ ಲೀಲೆ ನೆನಪಿಸುತ್ತವೆ. ಗವಿಮಠದ ಪೂಜ್ಯರು ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಪೊಲೀಸ್​ ಅಧಿಕಾರಿ ವಿಶ್ವನಾಥ ವಸದ ಮಾತನಾಡಿ, ಶ್ರೀ ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಗವಿಮಠ ಧರ್ಮ ಜಾಗೃತಿ ಮತ್ತು ಆಧ್ಯಾತ್ಮಿಕ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದನ್ನು ಶ್ಲಾಸಿದರು.
ಸಾನ್ನಿಧ್ಯ ವಹಿಸಿದ್ದ ಕಿಟ್ಟಾ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಾತನಾಡಿ, ಪಂಚಪೀಠಗಳ ಪ್ರಥಮ ಜಗದ್ಗುರು ಶ್ರೀ ರೇಣುಕಾಚಾರ್ಯರ ಪರಂಪರೆಯಲ್ಲಿ ಶ್ರೀ ನಲಿಂಗ ರುದ್ರಮುನಿ ಶಿವಾಚಾರ್ಯರ ಸ್ಥಾನ ಮಹತ್ವದ್ದಾಗಿದೆ. ಗವಿಮಠದ ಇತಿಹಾಸ ಅತ್ಯಂತ ಅಮೂಲ್ಯವಾದದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಗವಿಮಠ ಟ್ರಸ್ಟ್​ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಮಾತನಾಡಿ, ಗವಿಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೈಗೊಂಡಿರುವ ವಿವಿಧ ಕಾರ್ಯಗಳು ಮಾದರಿಯಾಗಿವೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು. ಸುರೇಖಾ ಸಜ್ಜನಶೆಟ್ಟಿ, ಬಸವಂತಪ್ಪ ಲವಾರೆ, ಪ್ರೊ.ರುದ್ರೇಶ್ವರ ಗೋರ್ಟಾ, ವಿಮಲಾಬಾಯಿ ಮಾಣಿಕಪ್ಪಾ ಬಿರಾದಾರ, ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ವಿಠ್ಠಲ್​ ರಾಜೋಳೆ, ರಾಮಚಂದ್ರ ಹುಡುಗೆ, ಲಕ್ಷ್ಮಣಸಿಂಗ್​ ಸಿಂಗಾರೆ, ಗೋವಿಂದರೆಡ್ಡಿ ಕೋತಂಪಲ್ಲಿ, ಅಭಿಷೇಕ ರಾಮಣ್ಣ, ಸಂಜುಕುಮಾರ ಪಂಚಾಳ ಉಪಸ್ಥಿತರಿದ್ದರು ಎ.ಜಿ. ಪಾಟೀಲ್​ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗೂಡೆ ನಿರೂಪಣೆ ಮಾಡಿದರು. ಶರಣಬಸಪ್ಪ ಅಲಗುಡೆ ಪ್ರಾರ್ಥನೆ ಗೀತೆ ಹಾಡಿದರು.
"

ಗುರು ಇದ್ದರೆ ಗುರಿ ಇರುತ್ತದೆ. ಶ್ರೀ ನಲಿಂಗ ರುದ್ರಮುನಿ ಶಿವಾಚಾರ್ಯರ ಬದುಕಿನ ಅಂತರಂಗ ಬಹಳ ಆಳವಾದದ್ದು. ಅವರ ಜೀವನ ಸಾಧನೆ ಮತ್ತು ಇತಿಹಾಸ ಕುರಿತ ಅಧ್ಯಯನಕ್ಕೆ ಶ್ರಾವಣ ಮಾಸದ ಉಪನ್ಯಾಸ ಮಾಲೆ ಅವಕಾಶ ಕಲ್ಪಿಸಿಕೊಡುತ್ತದೆ.

— > ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ ಬಸವಕಲ್ಯಾಣ