ಉಗುರಲ್ಲೇ ಹೋಗುವುದಕ್ಕೆ ಕೊಡಲಿ ಬೇಡ lokayuktha
- ಜೆಎಂಎಫ್‌ಸಿ ಪ್ರಧಾನ ನ್ಯಾಯಾಧೀಶ ಜಿ. ಹರೀಶ್ ಸಲಹೆ
- ಲೋಕ ಅದಾಲತ್ ಸದ್ಬಳಕೆಗೆ ಸೂಚನೆ
ಮುಳಬಾಗಿಲು: ನ್ಯಾಯಾಲಯದಲ್ಲಿ ಅಥವಾ ವ್ಯಾಜ್ಯಪೂರ್ವ ಹಂತಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಲಭವಾಗಿ ರಾಜಿ, ಸಂಧಾನಗಳ ಮೂಲಕ ಇತ್ಯರ್ಥಪಡಿಸಿಕೊಂಡರೆ ಮುಂದೆ ಮೇಲ್ಮನವಿ ಎನ್ನುವುದೇ ಉದ್ಭವವಾಗುವುದಿಲ್ಲ. ಉಭಯ ಕಕ್ಷಿದಾರರು ಪರಸ್ಪರ ಸಹಕಾರ ಜೀವನ ನಡೆಸಲು ಸಾಧ್ಯವಾಗುತ್ತದೆ. ಉಗುರಲ್ಲೇ ಹೋಗುವುದಕ್ಕೆ ಕೊಡಲಿ ಬೇಡ ಎಂದು ಜೆಎಂಎಫ್‌ಸಿ ಪ್ರಧಾನ ನ್ಯಾಯಾಧೀಶ ಜಿ. ಹರೀಶ್ ಸಲಹೆ ನೀಡಿದರು.loka adalath
ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಸೋಮವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯಲ್ಲಿ ಮಾತನಾಡಿ, ಜನಸಾವಾನ್ಯರು ಸಿವಿಲ್ ವ್ಯಾಜ್ಯಗಳೂ ಸೇರಿ ಸಣ್ಣಪುಟ್ಟ ಕ್ರಿಮಿನಲ್ ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸಬಹುದು. ಇದರಿಂದ ಸಮಯ ಮತ್ತು ಹಣ ಉಳಿಯುತ್ತದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಶುಲ್ಕವೂ ವಾಪಸ್ ನೀಡಲಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಜನರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಅರಿವು ಮೂಡಿಸಬೇಕು ಎಂದರು.
ತಾಲೂಕು ವಕೀಲರ ಸಂದ ಅಧ್ಯಕ್ಷ ಎನ್. ಸತೀಶ್‌ಕುವಾರ್ ವಾತನಾಡಿ, ಅವಶ್ಯವುಳ್ಳವರಿಗೆ ಕಾನೂನಿನ ಅರಿವು ಮತ್ತು ನೆರವು ತಲುಪಿಸುವಂತಹ ಕಾರ್ಯಕ್ರಮಗಳನ್ನು ಆಯೋಜನೆ ವಾಡಿಕೊಂಡು ಬರುತ್ತಿದ್ದು, ದೇಶದಲ್ಲಿ ಲಕ್ಷಾಂತರ ಜನ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ರಾಜ್ಯ, ಜಿಲ್ಲೆ ಮತ್ತು ತಾಲೂಕು ಹಂತದಲ್ಲೂ ಸಹ ರಾಜಿ ಸಂಧಾನಗಳ ಮೂಲಕ ಪ್ರಕರಣಗಳು ಸುಖಾಂತ್ಯ ಕಂಡಿದ್ದು, ಉತ್ತಮ ಜೀವನ ಕಟ್ಟಿಕೊಳ್ಳಲು ಮುಕ್ತ ಅವಕಾಶವನ್ನು ನ್ಯಾಯಾಂಗ ಒದಗಿಸಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಹಿರಿಯ ವಕೀಲ ಎಂ.ಎಸ್. ಶ್ರೀನಿವಾಸ ರೆಡ್ಡಿ ವಾತನಾಡಿ, ಹಿಂದೆ ಗ್ರಾಮಗಳಲ್ಲಿ ಸಣ್ಣಪುಟ್ಟ ವ್ಯಾಜ್ಯಗಳು ಹಾಗೂ ಆಸ್ತಿ ವಿವಾದಗಳು ಪಂಚಾಯಿತಿ ಮೂಲಕ ರಾಜಿಯಾಗುತ್ತಿದ್ದವು. ಮನಸ್ತಾಪಗಳು ಮಂಜಿನಂತೆ ಕರಗಿ ಹೋಗುತ್ತಿದ್ದವು, ಆದರೆ ಕೆಲವರು ಸಣ್ಣ-ಪುಟ್ಟ ಸಮಸ್ಯೆ ದೊಡ್ಡದು ವಾಡಿ ಪರಸ್ಪರ ಎತ್ತಿ ಕಟ್ಟುವ ಮೂಲಕ ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ಅಲೆಯುವಂತೆ ವಾಡುತ್ತಾರೆ. ಇದರಿಂದ ಸೋದರ ಸಂಬಂಧಗಳು, ಸ್ನೇಹ ಸಂಪರ್ಕಗಳು ಕಡಿತಗೊಂಡು ಜೀವನದ ನೆಮ್ಮದಿ ಕಸಿದುಕೊಂಡಿದ್ದು, ಇದರ ಮರುಸ್ಥಾಪನೆಗೆ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದರು.
ಪ್ರಾಂಶುಪಾಲ ನಾರಾಯಣಪ್ಪ ವಾತನಾಡಿ, ಕಾನೂನು ಅರಿವಿಲ್ಲದೆ ಹಲವು ಮುಗ್ಧ ಜನರು ತೊಂದರೆಗೆ ಸಿಲುಕಿದ್ದಾರೆ, ಇದನ್ನೇ ಕೆಲವರು ಬಂಡವಾಳ ವಾಡಿಕೊಳ್ಳುವ ಸಾಧ್ಯತೆಯೂ ಇದೆ. ವಿವಾದಗಳ ಬಗ್ಗೆ ಕಚೇರಿಗಳಿಗೆ ಅಲೆದಾಡಿಸುವುದು ಒಂದಾದರೆ, ಇನ್ನೂ ಕೆಲವರು ಗಂಭೀರ ಸಮಸ್ಯೆಗಳಲ್ಲಿ ಸಿಲುಕಿಸುವ ಹುನ್ನಾರ ವಾಡುತ್ತಾರೆ. ಈ ಬಗ್ಗೆಯೂ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.