ಕುವೆಂಪು ಜಯಂತಿ Kuvempu 
ರಾಜ್ಯ

ಭಾಷೆಯ ಕಲಿಕೆಯಿಂದ ಕನ್ನಡಿಗರಾಗಬಹುದು Kuvempu

ಬಂಗಾರಪೇಟೆ: ಯಾವುದೇ ವಿಷಯ ದೊಡ್ಡದಾಗಿರಬೇಕೆಂದೇನೂ ಇಲ್ಲ. Kuvempu ಇರುವ ವಿಷಯದ ಪೂರ್ಣ ಮಾಹಿತಿ ಅರಿತು ಮಂಡಿಸಿದಾಗ ಅದಕ್ಕೊಂದು ಅರ್ಥ, ಸ್ವರೂಪ ದೊರೆಯುತ್ತದೆ ಎಂದು ಉಪ ತಹಸೀಲ್ದಾರ್​ ಜಿ.ಎಸ್​.ಗಾಯತ್ರಿ ಹೇಳಿದರು.
ಪಟ್ಟಣದ ಅನಿಕೇತನ ಕನ್ನಡ ಬಳಗ ಮತ್ತು ಎಸ್​ಡಿಸಿ ಕಾಲೇಜು ವತಿಯಿಂದ ಕಾಲೇಜಿನ ಡಿವಿಜಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುವೆಂಪು ಜಯಂತಿ ಹಾಗೂ ನಾಡಗೀತೆಯ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭಾಷೆ ಕಲಿತು ಅರಿತು ಯಾರು ಮಾತನಾಡುತ್ತಾರೋ ಅವರೇ ನಿಜವಾದ ಕನ್ನಡಿಗರು. ಸರ್ಕಾರಿ ವರದಿ ಪ್ರಕಾರ 15 ವರ್ಷ ಕರ್ನಾಟಕದಲ್ಲಿ ವಾಸವಿದ್ದು ಕನ್ನಡ ಬಳಸಲು ಬಂದರೆ ಅವರೂ ಕನ್ನಡಿಗರು ಎನ್ನಲಾಗುತ್ತದೆ ಎಂದರು.
"ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ' ಕುರಿತು ಬೆಂಗಳೂರಿನ ಕ್ರಿಸ್ತು ಜಯಂತಿ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥ ಸರ್ವೇಶ್​ ಬಂಟಹಳ್ಳಿ ಉಪನ್ಯಾಸ ನೀಡಿ, ಆಧುನಿಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ್ಟ ಆಯಾಮ ನೀಡಿದ ಅವರು ತಮ್ಮ ಸಾಹಿತ್ಯದಲ್ಲಿ ಮಲೆನಾಡಿನ ನಿಸರ್ಗ ವೈಭವ, ಅದರ ನಿಗೂಢತೆಯ ಚಿತ್ರಣ ನೀಡಿದ್ದಾರೆ ಎಂದರು.
ಜಿಲ್ಲಾ ಕಸಾಪಮಾಜಿ ಅಧ್ಯಕ್ಷ ನಾಗಾನಂದ ಕೆಂಪರಾಜ್​ ಮಾತನಾಡಿ, ಕುವೆಂಪು ಅವರು ಜಾತಿ ಅಸಮಾನತೆಯ ಬಗ್ಗೆ ಬರೆದ ಮೇರು ಕವಿ. ಅಂತರಂಗದ ಮೂಲಕ ಆತ್ಮ ಉನ್ನತಿ ಸಾಧಿಸಬೇಕು. ಪ್ರಕೃತಿ ಮಡಿಲಲ್ಲಿ ದೇವರು ರುಜು ಮಾಡಿದನು ಎಂಬ ಕವಿ ಹೃದಯದ ಭಾವನೆ ಹಂಚಿಕೊಂಡರು. ಪಕ್ಷಿ ಕಾಶಿ ಕೃತಿಯಲ್ಲಿ ಪಕ್ಷಿಗಳ ಬಗ್ಗೆ ವಿವರವಾದ ವಿಚಾರ ಹಂಚಿಕೊಂಡಿದ್ದಾರೆ. ಮಲೆನಾಡು ನಂದನವನ ಮತ್ತು ಸ್ವರ್ಗದ ಬೀಡೆಂದು ವರ್ಣಿಸಿದ್ದಾರೆ. ನವಿಲುಕಲ್ಲು, ಸಿಬ್ಬಲ ಗುಡ್ಡ, ಕವಿಶೈಲವನ್ನು ಸೂಯೋರ್ದಯದ ಮುಂಚೆ ನೋಡಿ ನಾವು ಅನುಭವಿಸಿದರೆ ಮಾತ್ರ ಕವಿಯ ಭಾವನೆ ಅರ್ಥ ಮಾಡಿಕೊಳ್ಳಬಹುದು ಎಂದರು.
ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಎಂ.ಎಸ್​. ರಾಮಪ್ರಸಾದ್​ ಪ್ರಾಸ್ತವಿಕ ನುಡಿಗಳನ್ನಾಡಿದರು.