ನಗರಸಭೆ 15ನೇ ಹಣಕಾಸು ಯೋಜನೆಯಡಿ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಮಂಗಳವಾರ ಬೆಳಗ್ಗೆ ನಗರಸಭೆ ಅಧ್ಯಕ್ಷರು ಸದಸ್ಯರೊಂದಿಗೆ ಆಗಮಿಸಿದ ಶಾಸಕ ಎನ್.ಶ್ರೀನಿವಾಸ್ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿದರು.
ನೆಲಮಂಗಲ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್.ಶ್ರೀನಿವಾಸ್ ಚಾಲನೆ ನೀಡಿದರು.
ನಗರಸಭೆ 15ನೇ ಹಣಕಾಸು ಯೋಜನೆಯಡಿ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಮಂಗಳವಾರ ಬೆಳಗ್ಗೆ ನಗರಸಭೆ ಅಧ್ಯಕ್ಷರು ಸದಸ್ಯರೊಂದಿಗೆ ಆಗಮಿಸಿದ ಶಾಸಕ ಎನ್.ಶ್ರೀನಿವಾಸ್ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿದರು.
ಅಭಿವೃದ್ಧಿಪಡಿಸಲಾಗುತ್ತಿರುವ ರಸ್ತೆ ಈ ಹಿಂದೆ ಗ್ರಾಪಂ ವ್ಯಾಪ್ತಿಯಲ್ಲಿದ್ದು, 20 ವರ್ಷಗಳು ಕಳೆದರೂ ಅಭಿವೃದ್ಧಿ ಆಗಿರಲಿಲ್ಲ. ಇದೀಗ ನಗರಸಭೆ ವ್ಯಾಪ್ತಿಗಳಲ್ಲಿ ಒಳಪಟ್ಟಿದೆ. ರಸ್ತೆಯಲ್ಲಿ ನಿತ್ಯ ಸಂಚರಿಸುವ ಸಹಸ್ರಾರು ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಓಡಾಡುವುದು ದುಸ್ತರವಾಗಿತ್ತು. ಈ ಭಾಗದ ಮುಖಂಡರು ಮನವರಿಕೆ ಮಾಡಿಕೊಟ್ಟ ಮೇರೆಗೆ ರಾಷ್ಟ್ರೀಯ ಹೆದ್ದಾರಿವರೆಗಿನ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದನ್ನು ಸಹಿಸದ ಕೆಲ ನಗರಸಭೆ ಸದಸ್ಯರು ಸಂಸದರಿಗೆ ಆಹ್ವಾನ ನೀಡಿಲ್ಲ ಎಂಬ ಸಣ್ಣ ವಿಚಾರ ಮುಂದಿಟ್ಟುಕೊಂಡು ಅಡ್ಡಗಾಲು ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕ ಎನ್.ಶ್ರೀನಿವಾಸ್ ಪ್ರಶ್ನಿಸಿದರು.
ಈ ಹಿಂದೆ ಅರಿಶಿನಕುಂಟೆ, ಬಸವನಹಳ್ಳಿ ಸೇರಿ ವಿವಿಧೆಡೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೆಲ ಅಭಿವೃದ್ಧಿ ಕೆಲಸಗಳಿಗೆ ಸಂಸದರೇ ಆಗಮಿಸಿ ಚಾಲನೆ ನೀಡಿದರು. ಆ ವೇಳೆ ಕ್ಷೇತ್ರದ ಶಾಸಕನಾದ ನನಗೆ ಯಾವುದೇ ಆಹ್ವಾನ ನೀಡಿರಲಿಲ್ಲ. ಹಾಗಂತ ನಾನು ನಮ್ಮಪಕ್ಷದ ಮುಖಂಡರನ್ನು ಕಳಿಸಿ ಪ್ರಶ್ನೆ ಮಾಡಿಸಬಹುದಿತ್ತು. ಅಂತ ಸಣ್ಣ ಕೆಲಸಕ್ಕೆ ಕೈ ಹಾಕುವುದಿಲ್ಲ. ನನಗೆ ಸಮಯವೂ ಇಲ್ಲ. ಅಭಿವೃದ್ಧಿ ವಿಚಾರವಾಗಿ ಪ್ರೋತ್ಸಾಹಿಸಬೇಕೇ ಹೊರತು ರಾಜಕೀಯ ಬೆರೆಸಿ ಅಡ್ಡಗಾಲು ಹಾಕಬಾರದು ಎಂದರು.
ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್ಗೌಡ, ಮಾಜಿ ಸದಸ್ಯ ಬಿ.ಜಿ.ವಾಸು, ಉಪಾಧ್ಯಕ್ಷ ಆನಂದ್, ಸದಸ್ಯ ನರಸಿಂಹಮೂರ್ತಿ, ಹೆಚ್ಚವರಿ ಸದಸ್ಯ ರಾಮಮೂರ್ತಿ, ವಕೀಲ ಎನ್.ಪಿ. ರಘುನಾಥ್, ಮುಖಂಡ ಕೆ.ಕೃಷ್ಣಪ್ಪ, ಮಿಲ್ಟ್ರಿಮೂರ್ತಿ, ಮುನಿಯಪ್ಪ, ಚಿಕ್ಕಣ್ಣ, ರವಿಕುಮಾರ್, ಚಂದ್ರಕುಮಾರ್, ಅಶ್ವಥಮ್ಮ, ಲಕ್ಷಿ$್ಮನಾರಾಯಣ್, ಭಕ್ತನಪಾಳ್ಯಮುನಿರಾಜು, ಕೆಂಪರಾಜು, ನಾರಾಯಣ್ರಾವ್, ವೆಂಕಟೇಶ್, ಪ್ರಸನ್ನಕುಮಾರ್ ಇದ್ದರು.
ರಸ್ತೆಗಳ ಅಭಿವೃದ್ಧಿ: ಶಾಸಕರು, ಮುಖ್ಯಮಂತ್ರಿಗಳ ವಿಶೇಷ ಅನುದಾನದ ಜತೆಗೆ ನಗರಸಭೆ ಅನುದಾನ ಬಳಕೆ ಮಾಡಿಕೊಂಡು ನಗರದ ಪ್ರಮುಖ ಸಂಪರ್ಕ ರಸ್ತೆಗಳು, ವಸತಿ ಬಡಾವಣೆಗಳಲ್ಲಿನ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು, ಇನ್ನೂ ಕೆಲ ರಸ್ತೆಗಳ ಅಭಿವೃದ್ಧಿಪಡಿಸುವ ಯೋಜನೆ ಇದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ಅವಾಂತರವನ್ನು ತಪ್ಪಿಸಲು ನಗರದ ರಾಜಕಾಲುವೆಗೆ ಹೊಸದಾಗಿ ಸೇತುವೆಗಳ ನಿಮಾರ್ಣ ಮಾಡಲಾಗುತ್ತಿದೆ ಎಂದು ನಗರಸಭೆ ಗಣೇಶ್ ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಕಾಮಗಾರಿಗಳಿಗೆ ಕ್ಷೇತ್ರದ ಸಂಸದರಿಗೆ ಆಹ್ವಾನ ನೀಡದೇ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಶಾಸಕರು ಹಾಗೂ ವಿರೋಧ ಪಕ್ಷದ ಮುಖಂಡರ ನಡುವೆ ಕಲಹಕ್ಕೆ ಕಾರಣವಾಗುತ್ತಿದೆ. ಅಧಿಕಾರಿಗಳು ಇಂತಹ ಸನ್ನಿವೇಶ ಬಾರದಂತೆ ಎಚ್ಚರಿಕೆ ವಹಿಸಬೇಕು.