ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನYoga Narasimhaswamy 
ರಾಜ್ಯ

ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನYoga Narasimhaswamy

ಪ್ರಮುಖ ಮುಖ್ಯಾಂಶಗಳು

  • ಬಾಳೆಹಣ್ಣು&ಧವನ ಅರ್ಪಿಸಿ ಜೈಕಾರ ಹಾಕಿದ ಭಕ್ತಗಣ
  • ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣಿಗೆ
ಕದರೀಪುರ: ಕೋಲಾರ ತಾಲೂಕು ವೇಮಗಲ್​ ಹೋಬಳಿ ಮದ್ದೇರಿ ಗ್ರಾಪಂ ವ್ಯಾಪ್ತಿಯ ಕದರೀಪುರ ಗ್ರಾಮದ ಪುರಾತನ ಪ್ರಸಿದ್ಧ, ದಣ ಖಾದ್ರಿ ಎಂದೇ ಪ್ರಖ್ಯಾತಿ ಹೊಂದಿರುವ ಶ್ರೀ ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ನೆರವೇರಿತು.Yoga Narasimhaswamy
ಬ್ರಹ್ಮ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ ನೆರವೇರಿಸಲಾಯಿತು. ಶಾಸಕ ಕೊತ್ತೂರು ಮಂಜುನಾಥ್​ ಮತ್ತು ಎಂಎಲ್​ಸಿ ಅನಿಲ್​ಕುಮಾರ್​ ಸ್ವಾಮಿಯ ದರ್ಶನ ಪಡೆದು ರಥಕ್ಕೆ ಪೂಜೆ ಸಲ್ಲಿಸಿ, ಎಳೆಯುವ ಮೂಲಕ ರಥಕ್ಕೆ ಚಾಲನೆ ನೀಡಿದರು. ರಥಕ್ಕೆ ವಿವಿಧ ಬಣ್ಣದ ಪುಷ್ಪಗಳು, ಬೃಹತ್​ ಹಾರಗಳು, ಬಾಳೆ ಕಂದಿನಿಂದ ಶೃಂಗರಿಸಲಾಗಿತ್ತು, ರಥ ಮುಂದೆ ಹೋಗುತ್ತಿದ್ದಂತೆ ಭಕ್ತರು ಜೈಕಾರ ಹಾಕುತ್ತ ರಥಕ್ಕೆ ಬಾಳೆಹಳ್ಳು, ಧವನ ಸಮರ್ಪಣೆ ಮಾಡುವ ಮೂಲಕ ಭಕ್ತಿ ಮೆರೆದರು.
ಇದೇ ವೇಳೆ ಗ್ರಾಮದಲ್ಲಿ ಶಾಸಕರ ಅನುದಾನದಿಂದ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಟಕವನ್ನು ಉದ್ಘಾಟಿಸಲಾಯಿತು.
ಸಮಾಜ ಸೇವಕ ಸೀತಿ ಹೊಸೂರು ಮುರಳಿಗೌಡ ಮಾತನಾಡಿ, ಯುವಕರು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯ. ಕದರೀಪುರದಲ್ಲಿ ನಡೆಯುವ ಕ್ರಿಕೆಟ್​ ಟೂರ್ನಮೆಂಟ್​ ಹೋಬಳಿಮಟ್ಟದಲ್ಲಿ ನಡಯಲಿದೆ. ಮುಂದೆ ವಿವಿಧ ಮಟ್ಟದ ಕ್ರೀಡಾಕೂಟಗಳಲ್ಲಿ ಗುರುತಿಸಿಕೊಂಡು ಉತ್ತಮ ಸ್ಥಾನಮಾನ ಹೊಂದಿ, ನಮ್ಮ ಗ್ರಾಮಕ್ಕೆ, ಜಿಲ್ಲೆಗೆ ಕೀರ್ತಿ ತನ್ನಿ ಎಂದರು.
ಕೋಮುಲ್​ ನಿರ್ದೇಶಕ ಚಂಜಿಮಲೆ ಬಿ.ರಮೇಶ್​, ಪಿಎಲ್​ಡಿ ಬ್ಯಾಂಕ್​ ಉಪಾಧ್ಯ ಜಂಬಾಪುರ ವೆಂಕಟರಾಮ್​, ಕೋಲಾರ ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯ ಮೈಲಾಂಡಹಳ್ಳಿ ಮುರಳಿ, ವೇಮಗಲ್​&ನರಸಾಪುರ ಯೋಜನಾ ಪ್ರಾಧಿಕಾರ ಅಧ್ಯ ಉರಟಿ ಅಗ್ರಹಾರ ಚೌಡರೆಡ್ಡಿ, ಗ್ಯಾರಂಟಿ ಯೋಜನ ಸಮಿತಿ ಜಿಲ್ಲಾಧ್ಯ ಶಿವಕುಮಾರ್​, ಸೊಸೈಟಿ ಉಪಾಧ್ಯ ಡಿ.ವಿ.ಶ್ರೀನಿವಾಸ್​, ಹಿರಿಯ ಮುಖಂಡ ಎಂ.ಆರ್​.ಶ್ರೀನಿವಾಸಗೌಡ, ಗ್ರಾಮ ಪಂಚಾಯಿತಿ ಅಧ್ಯ ಬಾಬು, ಸದಸ್ಯ ಶ್ರೀರಾಮಯ್ಯ, ಸ್ಥಳಿಯ ಕಾಂಗ್ರೆಸ್​ ಯುವ ಮುಖಂಡರಾದ ಚನ್ನಕೇಶವ, ಲ್ಮನರಸಪ್ಪ, ಇ.ವಿ.ಮಂಜುನಾಥ್​, ಕೆ.ಎಂ.ಸುರೇಶ್​, ಯುವ ಮುಖಂಡರಾದ ಇ.ಕೆ.ಚಂದ್ರಶೇಖರ್​, ಇ.ಎಚ್​.ಆನಂದ್​ಕುಮಾರ್​, ದೇವರಾಜ್​, ಕೆ.ಎಂ.ಮೂರ್ತಿ, ಮನೋಹರ್​ ಇದ್ದರು.
ಬಾಲ್ಯವಿವಾಹ ಜಾಗೃತಿ: ಜಾತ್ರೆಯಲ್ಲಿ ಬಾಲ್ಯ ವಿವಾಹಮುಕ್ತ ಭಾರತ ಅಭಿಯಾನ ಯೋಜನೆಯಡಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕರ ಪತ್ರಗಳನ್ನು ಹಂಚುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿತು. ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಸದಸ್ಯರು ಹಾಗೂ ಕಾರ್ಯದರ್ಶಿ, ಹಿರಿಯ ಸಿವಿಲ್​ ನ್ಯಾಯಾಧೀಶ ನಿತೇಶ್​ ಮಾತನಾಡಿ, ಬಾಲ್ಯ ವಿವಾಹಮುಕ್ತ ಭಾರತವನ್ನಾಗಿಸುವಲ್ಲಿ ಪಾಲಕರ ಪಾತ್ರ ಪ್ರಮುಖ ಪಾತ್ರ ವಹಿಸಬೇಕಿದೆ. ಗಂಡಿಗೆ 21, ಹೆಣ್ಣಿಗೆ 18 ವರ್ಷವಾಗದೇ ವಿವಾಹ ಮಾಡಬೇಡಿ ಎಂದರು. ಮಾ.14ರಂದು ರಾಜ್ಯದ್ಯಂತ ಮೊದಲನೇ ರಾಷ್ಟ್ರೀಯ ಲೋಕ ಅದಾಲತ್​ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ರಾಜಿ ಮಾಡಿಕೊಳ್ಳುವ ಕುರಿತು ಮಾಹಿತಿ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಸುಖಾಂತ್ಯ ಹಾಡಿ ಎಂದು ತಿಳಿಸಿದರು.