ಬೈಲಹೊಂಗಲದಲ್ಲಿ ಭಾರತೀಯ ಸಂಸತಿ ವಿದ್ಯಾ ಕೇಂದ್ರದ ಯೋಗ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. ಶಿವರಂಜನ ಬೋಳಣ್ಣವರ, ವಿಜಯಾನಂದ ಸ್ವಾಮೀಜಿ, ಮೋಹನ ಪಾಟೀಲ, ಸಂತೋಷ ಯಕ್ಕುಂಡಿ, ಬಸವರಾಜ ಮೆಟಗುಡ್ಡ ಇತರರಿದ್ದರು. 
ರಾಜ್ಯ

ಸದೃಢ ಆರೋಗ್ಯಕ್ಕೆ ಯೋಗ ಅಗತ್ಯ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ

ಜೀವನದಲ್ಲಿ ಸಂಪತ್ತು ಇದ್ದು ಸದೃಢ ಆರೋಗ್ಯ ಇಲ್ಲದಿದ್ದರೆ ಎಲ್ಲವೂ ಶೂನ್ಯವಿದ್ದಂತೆ, ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ತರಬೇತಿ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತಾಲೂಕಿನ ಮಲ್ಲಮ್ಮನ ಬೆಳವಡಿಯ ಯೋಗ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯ ಬೆಳೆಸಿಕೊಂಡು ಸಾಧನೆಯತ್ತ ಗಮನಹರಿಸಬೇಕು ಎಂದರು.
ಭಾರತೀಯ ಸಂಸತಿ ವಿದ್ಯಾ ಕೇಂದ್ರದ ಮುಖ್ಯಸ್ಥ ಡಾ.ಸಂತೋಷ ಗುರೂಜಿ ಮಾತನಾಡಿ, ಯೋಗ ಕೇಂದ್ರ ಜನರ ಆರೋಗ್ಯಕ್ಕೆ ಸಹಕಾರಿಯಾಗಲಿ ಎಂದರು.
ಚಿತ್ರನಟ ಶಿವರಂಜನ ಬೋಳಣ್ಣವರ ಮಾತನಾಡಿದರು. ನಿತ್ಯಾನಂದ ಆಶ್ರಮದ ವಿಜಯಾನಂದ ಸ್ವಾಮೀಜಿ, ಉದ್ಯಮಿ ವಿಜಯ ಮೆಟಗುಡ್ಡ, ಕಸಾಪ ಮಾಜಿ ಜಿಲ್ಲಾಧ್ಯ ಮೋಹನ ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಬಿ.ಐ.ಜಾವೂರ, ನಿವೃತ್ತ ಗ್ರಂಥಪಾಲಕ ಅಶೋಕ ಮೆಟಗುಡ್ಡ, ಬಸವರಾಜ ಮೆಟಗುಡ್ಡ, ಬಿ.ಬಿ.ಗಣಾಚಾರಿ, ಬಸವರಾಜ ಕಲಾದಗಿ, ಎ್​.ಎಸ್​.ಸಿದ್ದನಗೌಡರ, ರಾಜು ತುಳಜಣ್ಣವರ, ಎಂ.ಜಿ.ಭರಮಣ್ಣವರ, ಆನಂದ ಯಲಿಗಾರ,
ಮಹಾಂತೇಶ ಹರಕುಣಿ, ಸಿದ್ದಪ್ಪ ಗುಪ್ಪರ, ಸೋಮನಿಂಗ ಮಾರೆಪ್ಪನವರ, ಮಹಾಂತೇಶ ರಾಜಗೋಳಿ, ಶಿವಾನಂದ ಸಂಭೋಜಿ ಇತರರಿದ್ದರು.