ಹುಮನಾಬಾದ್​ ಪೊಲೀಸ್​ ಠಾಣೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಡಿವೈಎಸ್​ಪಿ ಮಡೋಳಪ್ಪ ಉದ್ಘಾಟಿಸಿದರು. ಪಿಎಸ್​ ಐಗಳಾದ ಸುರೇಶಕುಮಾರ ಚವ್ಹಾಣ್​, ವಿಜಯಕುಮಾರ ನಾಯಕ, ಹುಲೇಪ್ಪ ಗೌಡಗೊಂಡ, ಸಂಜೀವಕುಮಾರ ಜುನ್ನಾ, ಆನಂದ ಇತರರಿದ್ದರು. 
ರಾಜ್ಯ

ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯಕ

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್​ಪಿ ಮಡೋಳಪ್ಪ ಅಭಿಮತ
  • ಹುಮನಾಬಾದ್​ನಲ್ಲಿ ದಿನಾಚರಣೆ
ಹುಮನಾಬಾದ್​: ಆರೋಗ್ಯಪೂರ್ಣ ಜೀವನಕ್ಕೆ ಯೋಗ ಅವಶ್ಯವಾಗಿದೆ. ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಯೋಗಕ್ಕೆ ಸಮಯ ಮೀಸಲಿಡಬೇಕು ಎಂದು ಹುಮನಾಬಾದ್​ ಉಪವಿಭಾಗದ ಡಿವೈಎಸ್ಪಿ ಮಡೋಳಪ್ಪ ಪಿ.ಎಸ್​. ಹೇಳಿದರು.
ಪಟ್ಟಣದ  ಪೊಲೀಸ್​ ಠಾಣೆ ಆವರಣದಲ್ಲಿ ಶುಕ್ರವಾರ ಪೊಲೀಸ್​ ಇಲಾಖೆ ಮತ್ತು ರಾಜರಾಜೇಶ್ವರಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ರ್ನಿಲ್ಯ ಹೆಚ್ಚಾಗುತ್ತಿದೆ. ಕೆಲಸದ ಒತ್ತಡದ ನೆಪ ಹೇಳುವ ಬದಲು ಆರೋಗ್ಯಕ್ಕಾಗಿ ಪ್ರತಿದಿನ ಸ್ವಲ್ಪ ಸಮಯವನ್ನು ಯೋಗಾಭ್ಯಾಸಕ್ಕೆ ಮೀಸಲಿಡಬೇಕು. ನಿಯಮಿತ ಯೋಗದಿಂದ ಅನೇಕ ಕಾಯಿಲೆಗಳನ್ನು ದೂರವಿಟ್ಟು ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
 ರಾಜರಾಜೇಶ್ವರಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯದ ಮುಖ್ಯಸ್ಥೆ ಡಾ. ಸುರೇಖಾ ಮಾತನಾಡಿ, ಯೋಗವು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದರೊಂದಿಗೆ ಮನಸ್ಸಿಗೆ ಶಾಂತಿ ನೀಡುತ್ತದೆ ಎಂದರು. 
ಯೋಗ ತರಬೇತಿದಾರ ಆನಂದ ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮಗಳ ಪ್ರದರ್ಶನ ನೀಡಿ, ಅವುಗಳಿಂದಾಗುವ ಆರೋಗ್ಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
 ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ಸಂಜೀವಕುಮಾರ ಜುನ್ನಾ, ಪಿಎಸ್​ಐ ಗಳಾದ ಸುರೇಶಕುಮಾರ ಚವ್ಹಾಣ್​, ವಿಜಯಕುಮಾರ ನಾಯಕ, ಹುಲೇಪ್ಪ ಗೌಡಗೊಂಡ ಸೇರಿ ಪೊಲೀಸ್​ ಅಧಿಕಾರಿ, ಸಿಬ್ಬಂದಿ ಹಾಗೂ ವೈದ್ಯಕಿಯ ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.