ಕೆಂಭಾವಿಯಲ್ಲಿ ಆರ್ಟ್​ ಆಫ್​ ಲಿವಿಂಗ್​ ಶನಿವಾರ ಏರ್ಪಡಿಸಿದ್ದ ಸಂತೋಷದ ಅನುಭೂತಿ ಕಾರ್ಯಕ್ರಮದ ಸಮಾರೋಪದಲ್ಲಿ ಶಿಲ್ಪಾ ಅವಂಟಿ, ಸಿದ್ದಮ್ಮ, ವಾಮನರಾವ ದೇಶಪಾಂಡೆ, ನರಸಿಂಹರಾವ ಕುಲಕರ್ಣಿ, ಡಿ.ಸಿ.ಪಾಟೀಲ, ಆಂಜನೇಯ, ವೆಂಗಮಾಂಬಾ ಇದ್ದರು. 
ರಾಜ್ಯ

ಮನಸ್ಸು ಸದೃಢಕ್ಕೆ ಯೋಗ, ಪ್ರಾಣಾಯಾಮ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಆರ್ಟ್​ ಆಫ್​ ಲಿವಿಂಗ್​ನ ಶಿಲ್ಪಾ ಅವಂಟಿ ಅನಿಸಿಕೆ
  • ಕೆಂಭಾವಿಯಲ್ಲಿ ಸಂತೋಷದ ಅನುಭೂತಿ ಕಾರ್ಯಕ್ರಮ
ಕೆಂಭಾವಿ: ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಮನಸ್ಸು ಸದೃಢವಾಗಿರಲು ಯೋಗ, ಪ್ರಾಣಾಯಾಮ ಅತ್ಯವಶ್ಯಕ ಎಂದು ಆರ್ಟ್​ ಆಫ್​ ಲಿವಿಂಗ್​ನ ಜಿಲ್ಲಾ ಶಿಕ್ಷಕಿ ಶಿಲ್ಪಾ ಅವಂಟಿ ಹೇಳಿದರು.
ಪಟ್ಟಣದ ಉತ್ತರಾದಿ ಮಠದ ಸೌ.ಲಕ್ಷಿ$್ಮದೇವಿ ವಾಮನರಾವ ದೇಶಪಾಂಡೆ ಸಭಾ ಭವನದಲ್ಲಿ ಆರ್ಟ್​ ಆಫ್​ ಲೀವಿಂಗ್​ ಶನಿವಾರ ಏರ್ಪಡಿಸಿದ್ದ ಸಂತೋಷದ ಅನುಭೂತಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದಅವರು, ದೈನಂದಿನ ಬದುಕಿನಲ್ಲಿ ಜನರು ಆರೋಗ್ಯದ ಕಡೆ ಗಮನ ಕೊಡುತ್ತಿಲ್ಲ. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯುತ್ತಿರುವುದು ಸರಿಯಲ್ಲ ಎಂದರು.
ದೇಹದ ಜತೆ ಮನಸ್ಸು ಶುದ್ಧಿಗೊಳಿಸಲು ಶ್ರೀ ರವಿಶಂಕರ ಗುರೂಜಿಯವರು ಸುದರ್ಶನ ಕ್ರಿಯೆಯನ್ನು ಜಗತ್ತಿನಾದ್ಯಂತ ಪ್ರಚುರಗೊಳಿಸಿದ್ದಾರೆ. ಆರ್ಟ್​ ಆಫ್​ ಲಿವಿಂಗ್​ನಿಂದ ದೇಹ, ಮನಸ್ಸು, ಬುದ್ಧಿ ಕಡೆ ಹೇಗೆ ಹೆಚ್ಚು ಗಮನ ಕೊಡಬಹುದು ಎಂಬುದನ್ನು ತಿಳಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಆರು ದಿನ ಸುಮಾರು 30 ಶಿಬಿರಾರ್ಥಿಗಳಿಗೆ ಸುದರ್ಶನ ಕ್ರಿಯೆ ಕಲಿಸಿಕೊಟ್ಟ ಶಿಕ್ಷಕಿ ಸಿದ್ದಮ್ಮ ಮಾತನಾಡಿ, ದಿನದ ಒಂದಿಷ್ಟು ಸಮಯ ನಮಗಾಗಿ ಮೀಸಲಿಡಬೇಕು. ಯೋಗ, ಪ್ರಾಣಾಯಾಮ ಸೇರಿ ದೈಹಿಕ ಕಸರತ್ತು ನಡೆಸಬೇಕು. ಆರ್ಟ್​ ಆಫ್​ ಲಿವಿಂಗ್​ನಿಂದ ಮನಸ್ಸು ಶಾಂತಗೊಳಿಸಿ ಆಂತರಿಕ ಸಮತೋಲನ ಹೆಚ್ಚಿಸುವ ಅನೇಕ ಮಾರ್ಗಗಳನ್ನು ತಿಳಿಸಿಕೊಡಲಾಗುತ್ತದೆ. ಅಧ್ಯಾತ್ಮದಿಂದ ಮಾತ್ರ ಮನಸ್ಸು ನಿಯಂತ್ರಿಸಲು ಸಾಧ್ಯ ಎಂದರು.
ಯೋಗ, ಆಧ್ಯಾತ್ಮಿಕತೆ, ಸನಾತನ ಧರ್ಮ ಪರಂಪರೆ ಉಳಿಸಿ ಬೆಳೆಸಲು ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ವಾಮನರಾವ ದೇಶಪಾಂಡೆ ಕರೆ ನೀಡಿದರು. ನಿವೃತ್ತ ಉಪನ್ಯಾಸಕ ನರಸಿಂಹರಾವ ಕುಲಕರ್ಣಿ ಯೋಗಾರ್ಥಿಗಳ ಕುರಿತು ಮಾತನಾಡಿದರು.
ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಜಯಶ್ರೀ ಹಿರೇಮಠ, ನವೀನ್​, ಸಿ.ಎಚ್​. ಶ್ರೀನಿವಾಸ, ರಾವೇಂದ್ರ, ಆಂಜನೇಯ, ಪ್ರಭು ಅಂಗಡಿ, ಗುಡದಯ್ಯ ದಾವಣಗೇರಿ, ದೇವು ಯಾಳಗಿ, ಸತೀಶ, ಮಂಜುನಾಥ, ಶಿವರಾಜ ಬೂದುರ, ಬಲಭೀಮರೆಡ್ಡಿ ಡಿಗ್ಗಾವಿ, ಶಿವಾನಂದಸ್ವಾಮಿ ಹಿರೇಮಠ, ಮಲ್ಲನಗೌಡ ಪಾಟೀಲ, ರಮೇಶ ಅಂಗಡಿ, ಸುಜಾತಾ ಎನ್​., ವೆಂಗಮಾಂಬಾ ಶ್ರೀನಿವಾಸ, ಕಲ್ಪನಾ ನವೀನ್​ ಇತರರಿದ್ದರು. ಡಿ.ಸಿ. ಪಾಟೀಲ ನಿರೂಪಣೆ ಮಾಡಿದರು. ಮೋಹನರೆಡ್ಡಿ ಡಿಗ್ಗಾವಿ ಸ್ವಾಗತಿಸಿದರು. ರೇವಣಸಿದ್ದಯ್ಯ ವಂದಿಸಿದರು.