ಅರಸೀಕೆರೆ ತಾಲೂಕಿನ ರಾಮಸಾಗರ ಹಾಗೂ ಕರಿಕಲ್ ಗುಡ್ಡದ ಸರಹದ್ದಿನಲ್ಲಿ ಹಾದು ಹೋಗಿರುವ ಎತ್ತಿನಹೊಳೆ ನಾಲೆ ಸ್ಥಳಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಶ್ರೇಯಸ್ ಎಂ.ಪಟೇಲ್, ಕೆ.ಎಂ.ಶಿವಲಿಂಗೇಗೌಡ, ಮೆಟ್ರೋ ಬಾಬು, ಶ್ರೀನಿವಾಸ್ ಇದ್ದರು. 
ರಾಜ್ಯ

ಬೇಲೂರು, ಅರಸೀಕೆರೆ ಕೆರೆಗಳಿಗೆ ಹರಿಯಲಿದೆ ಎತ್ತಿನಹೊಳೆ

ಪ್ರಮುಖ ಮುಖ್ಯಾಂಶಗಳು

  • ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ
  • ರಾಮಸಾಗರ ಹಾಗೂ ಕರಿಕಲ್ ಗುಡ್ಡ ವ್ಯಾಪ್ತಿ
ಅರಸೀಕೆರೆ: ತಾಲೂಕಿನ ರಾಮಸಾಗರ ಹಾಗೂ ಕರಿಕಲ್ ಗುಡ್ಡ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಎತ್ತಿನಹೊಳೆ ನಾಲೆಯನ್ನು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಬುಧವಾರ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು, ದೊಡ್ಡ ಮೊತ್ತದ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳುವ ವಿಶ್ವಾಸವಿದೆ. ಬೇಲೂರು ಹಾಗೂ ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರು ಹರಿಯಲಿದೆ ಎಂದು ಸಚಿವರು ಹೇಳಿದರು.
ಬೇಲೂರು ತಾಲೂಕಿನ ಐದಳ್ಳ ಕಾವಲಿನ ಅರಣ್ಯಭೂಮಿ ಸಂಬಂಧ ಇದ್ದಂತಹ ಸಮಸ್ಯೆ ಬಗೆಹರಿದಿದೆ. ಉದ್ದೇಶಿತ ಕಾಮಗಾರಿ ಸ್ಥಳವನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡುವ ಮೂಲಕ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಯೋಜನೆ ಪೂರ್ಣಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ. ಅರಸೀಕೆರೆ ಮತ್ತು ಬೇಲೂರು ತಾಲೂಕಿನ ಕೆರೆಗಳು ತುಂಬಿದರೆ ಸುತ್ತಮುತ್ತಲಿನ ಜಿಲ್ಲೆಗಳ ಅಂತರ್ಜಲ ಹೆಚ್ಚಾಗುವ ಮೂಲಕ ರೈತರು ಹಾಗೂ ಜನಸಾಮಾನ್ಯರ ಕುಡಿಯುವ ನೀರು ಬವಣೆ ತಪ್ಪಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎತ್ತಿನ ಹೊಳೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ರಾಮಸಾಗರಕ್ಕೆ ಭೇಟಿ ನೀಡಿದ ನಂತರ ಐದಳ್ಳ ಕಾವಲು ಬಳಿ ಕಾಮಗಾರಿ ವೀಕ್ಷಣೆಗೆ ತೆರಳಿದರು. ಸಂಸದ ಶ್ರೇಯಸ್ ಪಟೇಲ್, ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡ, ಎಇಇ ಇಂದುಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಮಲ್ಲೇನಹಳ್ಳಿ ಶಿವಶಂಕರ ಸ್ವಾಮಿ, ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಂಜುಳಾ ಚಂದ್ರನಾಯ್ಕ, ಗಂಡಸಿ ಕಮಲಮ್ಮ, ನಗರಸಭೆ ಮಾಜಿ ಸದಸ್ಯರಾದ ವೆಂಕಟಮುನಿ, ಮನುಕುಮಾರ್, ಜೆಸಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯರಾದ ಮಂಜುನಾಥ್, ಹೇಮಂತ್ ಕುಮಾರ್, ಮಂಜುನಾಥ್, ಮುಖಂಡರಾದ ಅಡವಿಸ್ವಾಮಿ, ಮಾಡಾಳು ರಮೇಶ್, ಮಲ್ಲಿದೇವರಹಳ್ಳಿ, ಮಂಜುನಾಥ್, ಬೆಳಗುಂಬ ಜಯಣ್ಣ ಇತರರಿದ್ದರು.