ಹಾರೂಗೊಪ್ಪದ ಗ್ರಾಮದ ರುದ್ರಪ್ಪ ಮುತ್ತಣ್ಣವರ ಜಮೀನಿಗೆ ಕೃಷಿ ಅಧಿಕಾರಿ ಎಂ.ಎಂ.ಅಮಠೆ ಭೇಟಿ ನೀಡಿ ಸೋಯಾಬೀನ್ ಬೆಳೆ ಸಮೀೆ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಶ್ವೇತಾ ಕೋಟಗಿ, ರುದ್ರಪ್ಪ ಮುತ್ತಣ್ಣವರ, ಬಸಪ್ಪ ಮುನವಳ್ಳಿ, ಶಿವಾನಂದ ಯಾಬನ್ನವರ ಇತರರಿದ್ದರು.
ಮುರಗೋಡ: ಸ್ಥಳಿಯ ಹಾಗೂ ಹಾರುಗೊಪ್ಪ ಗ್ರಾಮದ ರೈತರ ಜಮೀನುಗಳಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ-ಕಾರಿ ಎಂ.ಎಂ.ಅಮಠೆ ಗುರುವಾರ ಭೇಟಿ ನೀಡಿದರು. ಸೋಯಾಬೀನ್, ಹೆಸರು ಹಾಗೂ ಉದ್ದು ಬೆಳೆಗಳಲ್ಲಿ ಕಂಡುಬರುತ್ತಿರುವ ಕಾಂಡಕೊರಕ ನೋಣ ಹಾಗೂ ಹಳದಿ ನಂಜು ರೋಗ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆಯುವ ಮೂಲಕ ಹತೋಟಿ ಕ್ರಮದ ಕುರಿತಾಗಿ ಅಗತ್ಯ ಸಲಹೆ ನೀಡಿದರು. ಬಳಿಕ ಮಾತನಾಡಿದ ಕೃಷಿ ಅಧಿ-ಕಾರಿ ಎಂ.ಎಂ.ಅಮಠೆ, ಹವಾಮಾನ ಪರಿಶೀಲಿಸಿಕೊಂಡು ರೈತರು ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಬೇಕು. ಸಕಾಲಕ್ಕೆ ಕೃಷಿ ಇಲಾಖೆಯಿಂದ ಸಲಹೆ&ಸೂಚನೆ ಪಡೆದು ವ್ಯವಸ್ಥಿತ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು. ಆತ್ಮ ತಾಂತ್ರಿಕ ಅಧಿಕಾರಿ ಶ್ವೇತಾ ಕೋಟಗಿ, ಕೃಷಿ ಇಲಾಖೆ ಯೋಜನೆ ಹಾಗೂ ಸೌಲಭ್ಯಗಳ ಕುರಿತು ವಿವರಿಸಿದರು. ರೈತರಾದ ರುದ್ರಪ್ಪ ಮುತ್ತಣ್ಣವರ, ಬಸಪ್ಪ ಮುನವಳ್ಳಿ, ಶಿವಾನಂದ ಯಾಬನ್ನವರ, ಕರವೀರಯ್ಯ ಹಿರೇಮಠ, ದುರಗಪ್ಪ ಭಜಂತ್ರಿ ಇದ್ದರು.