ಶ್ರೀೇತ್ರ ಯಲ್ಲಮ್ಮನ ಗುಡ್ಡದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಸಿದ್ದನಗೌಡ ಗೂಡರಾಶಿ, ಪ್ರಭಾವತಿ ಕೀರಪುರ, ಶಿವಾನಂದ ಪಟ್ಟಣಶೆಟ್ಟಿ, ನಾಗರತ್ನಾ ಚೋಳಿನ, ಮಂಜುನಾಥ ಅಂಗಡಿ, ಅಲ್ಲಮಪ್ರಭು ಪ್ರಭುನವರ, ಆರ್​.ಎಚ್​.ಸವದತ್ತಿ, ಸಿ.ಎನ್​.ಕುಲಕರ್ಣಿ ಇತರರಿದ್ದರು. 
ರಾಜ್ಯ

ಯಲ್ಲಮ್ಮನಗುಡ್ಡ ಪರಿಸರ ರಕ್ಷಣೆಗೆ ಒತ್ತು

ಉಗರಗೋಳ: ಯಲ್ಲಮ್ಮನ ಗುಡ್ಡ ಬಂಡೆಗಲ್ಲುಗಳಿಂದ ಕೂಡಿರುವ ಪ್ರದೇಶವಾಗಿರುವುದರಿಂದ ಸಸಿ ನೆಟ್ಟು ಪೋಷಿಸುವುದು ಸವಾಲಿನ ಕೆಲಸವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಶುದ್ಧ ಕುಡಿಯುವ ನೀರಿನ ಟಕ ಮತ್ತು ಭದ್ರತಾ ಕೊಠಡಿ ಉದ್ಘಾಟನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಸಸಿ ನಡುವ ಮೂಲಕ ಪರಿಸರ ಸಂರಣೆ ಮಾಡಬೇಕು. ಭಕ್ತರ ದಾಹ ತೀರಿಸಲು ದೇವಸ್ಥಾನ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ನಲ್ಲಿ ಅಳವಡಿಸಲಾಗಿದೆ. ಭಕ್ತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಿದ್ದನಗೌಡ ಗೂಡರಾಶಿ ಮಾತನಾಡಿ, ನಗರೀಕರಣ ಪ್ರಭಾವದಿಂದ ಪರಿಸರ ನಾಶವಾಗುತ್ತಿದೆ. ನೈಸರ್ಗಿಕ ಸಂಕುಲಗಳಿಗೆ ಆಪತ್ತು ಬಂದೊದಗಿದೆ. ಹೀಗಾಗಿ, ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಸಂರಣೆಯಲ್ಲಿ ತೊಡಗಬೇಕು ಎಂದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಕಾರ್ಯದರ್ಶಿ ಪ್ರಭಾವತಿ ಕೀರಪುರ, ಮಲ್ಲು ಜಕಾತಿ, ಶಿವಾನಂದ ಪಟ್ಟಣಶೆಟ್ಟಿ, ನಾಗರತ್ನಾ ಚೋಳಿನ, ಮಂಜುನಾಥ ಅಂಗಡಿ, ಅಲ್ಲಮಪ್ರಭು ಪ್ರಭುನವರ, ಆರ್​.ಎಚ್​.ಸವದತ್ತಿ, ಸಿ.ಎನ್​.ಕುಲಕರ್ಣಿ, ನಾಗರಾಜ ಬಡೆಪ್ಪನವರ, ಶ್ರೀಧರ ಇನಗಂಟಿ (ಬಾಲಾಜಿ), ನೀಲಪ್ಪ ಸಿದ್ದಕ್ಕನವರ, ಪ್ರಕಾಶ ಲಮಾಣಿ, ಡಿ.ಆರ್​.ಚೌಹಾಣ, ಪ್ರವಿಣ ರಾಮಪ್ಪನವರ, ಎಎಸ್​ಐ ಪುಂಡಲೀಕ ಪರೀಟ್​, ಏಕನಗೌಡ ಮುದ್ದನಗೌಡ್ರ, ಗೋವಿಂದಗೌಡ ತಿಪರಾಶಿ ಇತರರಿದ್ದರು.