ಚಿತ್ರದುರ್ಗದಲ್ಲಿ ಮೇ 4ಕ್ಕೆ ಯಡಿಯೂರೋತ್ಸವ Chitradurga 
ರಾಜ್ಯ

ಚಿತ್ರದುರ್ಗದಲ್ಲಿ ಮೇ 4ಕ್ಕೆ ಯಡಿಯೂರೋತ್ಸವ Chitradurga

ಮಡಿವಾಳ: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ 50 ವರ್ಷ ಸುದೀರ್ಘ ರಾಜಕೀಯ ಸಂಘರ್ಷ ಜೀವನದ ಅಭಿಮಾನೋತ್ಸವವನ್ನು ಬಿಜೆಪಿಯಿಂದ ಮೇ 4 ರಂದು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ರಾಜ್ಯದ ವಿವಿಧ ಮಠಾಧೀಶರನ್ನು ಆಹ್ವಾನಿಸಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ ಹೇಳಿದರು. Chitradurga
ತಾಲೂಕಿನ ಬೆಳ್ಳನಪುರಿ ಸಂಸ್ಥಾನ ಮಠದ ಶ್ರೀ ಮಹಾಂತಲಿಂಗ ಸ್ವಾಮೀಜಿ ಅವರನ್ನು ಆಹ್ವಾನಿಸಿ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಬಿಜೆಪಿರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಗಳಾಗಿ, ಪಕ್ಷದ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದವರು. ಹಾಗಾಗಿ ಅವರ 50 ವರ್ಷದ ಸುದೀರ್ಘ ರಾಜಕೀಯ ಸಂಘರ್ಷ ಜೀವನದ ಅಭಿಮಾನೋತ್ಸವ ಆಯೋಜಿಸಲಾಗಿದೆ. ಬೆಳ್ಳಾವಿ ಮಠ, ನಾಗಲಾಪುರ ಮಠದ ಶ್ರೀಗಳನ್ನು ಆಹ್ವಾನಿಸಲಾಗುತ್ತಿದೆ. 10 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಯಡಿಯೂರಪ್ಪ ಅವರ ಜೀವನ ಸಾಕ್ಷ$್ಯಚಿತ್ರ ಪ್ರದರ್ಶನ ನಡೆಯಲಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಶಿಧರ್​, ಖಜಾಂಚಿ ರೇಣುಕಾ ಪ್ರಸಾದ್​, ಮಠದ ಗೌರವ ಕಾರ್ಯದರ್ಶಿ ಬಿ.ವಿ.ವೀರಭದ್ರಯ್ಯ, ಸಲಹಾ ಸಮಿತಿ ಸದಸ್ಯ ಬಿ.ವಿ.ರುದ್ರೇಶ್​, ಬಿಜೆಪಿ ನಗರಾಧ್ಯಕ್ಷ ನಂದೀಶ್​, ಹನುಮಂತಪ್ಪ, ಬಾಬು ಲೋಕೇಶ್​, ಮಂಜುನಾಥ್​, ಕಿರಣ್​, ಮಠದ ಭಕ್ತರಾದ ಬಿ.ಆರ್​.ಶಿವಶಂಕರ್​, ಶಿವಣ್ಣ, ಬಿ.ಸಿ.ಶಿವಪ್ರಕಾಶ್​, ಹೇಮಂತ್​, ಸತೀಶ್​, ಲೋಕೇಶ್​ ಇತರರು ಇದ್ದರು