ಜೇವರ್ಗಿಯ ಡಿಸಿಸಿ ಬ್ಯಾಂಕ್ನಲ್ಲಿ ಯಶಸ್ವಿನಿ ಕಾರ್ಡ್ ನೋಂದಣಿ ಮಾಡಿದ ಸಹಕಾರಿ ಸಂಗಳ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಬಸವರಾಜ ಪಾಟೀಲ್, ಪ್ರಭು ಜಾಧವ್, ಶ್ರೀಶೈಲಗೌಡ ಕರಕಿಹಳ್ಳಿ, ಶಾಂತಗೌಡ ಪಾಟೀಲ್, ಪ್ರಶಾಂತ ವಾಡೇಕರ್ ಇದ್ದರು.
- ಬಸವರಾಜ ಪಾಟೀಲ್ ನರಿಬೋಳ ಹೇಳಿಕೆ
- ಸಹಕಾರಿ ಸಂಗಳ ಕಾರ್ಯದರ್ಶಿಗಳಿಗೆ ಸತ್ಕಾರ
ಜೇವರ್ಗಿ: ಪ್ರತಿ ರೈತರು ಸಹಕಾರಿ ಸಂದಲ್ಲಿ ಸದಸ್ಯತ್ವ ಮಾಡಿಸಿಕೊಂಡು ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಬೇಕು. ರೈತರ ಆಪತ್ಕಾಲಕ್ಕೆ ಯಶಸ್ವಿನಿ ಆರೋಗ್ಯ ಕವಚವಿದ್ದಂತೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ್ ನರಿಬೋಳ ಹೇಳಿದರು.
ಡಿಸಿಸಿ ಬ್ಯಾಂಕ್ನಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರಿ ಸಂಗಳ ಕಾರ್ಯದರ್ಶಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂ ಯೋಜನೆ ಇದಾಗಿದ್ದು, ಸದಸ್ಯತ್ವ ಹೊಂದಿದ ರೈತರಿಗೆ 5 ಲಕ್ಷದ ವರೆಗೆ ಆರೋಗ್ಯ ಚಿಕಿತ್ಸೆಗಾಗಿ ಈ ಯೋಜನೆಯಡಿ ಪ್ರಾಯೋಜನವಿದೆ. ಕಳೆದ ಬಾರಿ 6 ಸಾವಿರ ಫಲಾನುಭವಿಗಳಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ 12,500 ರೈತರು ಯಶಸ್ವಿನಿ ನೋಂದಣಿ ಮಾಡಿಸಿಕೊಂಡಿದ್ದಾರೆ. 10 ಲಕ್ಷಕ್ಕೂ ಅಧಿಕ ವಂತಿಗೆ ಹಣ ಬ್ಯಾಂಕ್ಗೆ ಜಮೆ ಮಾಡಲಾಗಿದೆ ಎಂದರು.
ಗಂವ್ಹಾರ, ಗುಡೂರ (ಎಸ್.ಎ), ನೇದಲಗಿ, ಬಳಬಟ್ಟಿ, ಕೆಲ್ಲೂರಿನಲ್ಲಿ ಹೆಚ್ಚು ನೋಂದಣಿ ಮಾಡಿದ ಸಹಕಾರಿ ಸಂಗಳ ಕಾರ್ಯದರ್ಶಿಗಳನ್ನು ಸತ್ಕರಿಸಲಾಯಿತು. ಪ್ರಮುಖರಾದ ಶಾಂತಗೌಡ ಪಾಟೀಲ್, ಪ್ರಶಾಂತ ವಾಡೇಕರ್, ಚಂದ್ರಾಮ ಪೂಜಾರಿ, ಲಿಂಗನಗೌಡ ಪಾಟೀಲ್, ಪ್ರಭು ಜಾಧವ್, ಶ್ರೀಶೈಲಗೌಡ ಕರಕಿಹಳ್ಳಿ, ಮಹಾಂತೇಶ ಪವ್ಹಾರ್, ಆರ್.ಡಿ.ಪಾಟೀಲ್ ಇತರರಿದ್ದರು.