Yakshagana is the art of rural culture.
ತಿಪಟೂರು: ಇಂದಿನ ದಿನಗಳಲ್ಲಿ ವಿದ್ಯುನ್ಮಾನ ಯಂತ್ರಗಳು ವಾನವನನ್ನು ನಿಯಂತ್ರಿಸುತ್ತಿದ್ದು, ಈ ಕಾಲಟ್ಟ ಅಪಾಯಕಾರಿ ಎಂದು ಯಕ್ಷಗಾನ ಮಂಡಳಿ ಅಧ್ಯಕ್ಷ ಎಂ.ಆರ್.ಯಶ್ವಂತ್ ಹೇಳಿದರು.
ತಾಲೂಕಿನ ಆದಿನಾಯಕನಹಳ್ಳಿಯಲ್ಲಿ ಗ್ರಾಮ ದೇವತೆ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮತ್ತಿಹಳ್ಳಿ ಬಿದಿರಾಂಬಿಕ ಕೃಪಾಪೋಷಿತ ಯಕ್ಷಗಾನ ಬಯಲಾಟ ಮಂಡಳಿ ಮತ್ತು ಮೂಡಲಪಾಯ ಯಕ್ಷಗಾನ ಮಂಡಳಿಯಿಂದ ಪ್ರದರ್ಶಿಸಲಾದ ಶ್ರೀ ಅಂಬಿಕಾವಿಜಯ ಅಥವಾ ರಕ್ತಬೀಜಾಸುರನ ವಧೆ ಎಂಬ ಯಕ್ಷಗಾನ ಪ್ರದರ್ಶನ ವೇಳೆ ಮಾತನಾಡಿ, ಪ್ರಸ್ತುತ ಕಾಲಟ್ಟದಲ್ಲಿ ಇಂತಹ ಜನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಸವಾಲಾಗಿದೆ ಎಂದರು.
ಭಾಗವತ್ ಎಂ.ಎಂ.ಮಂಜುನಾಥ್ ವಾತನಾಡಿ, ಮೂಡಲಪಾಯ ಯಕ್ಷಗಾನವು ತನ್ನ ವಿಶಿಷ್ಟ ವೇಷಭೂಷಣ, ಸಂಗೀತ ಮತ್ತು ನೃತ್ಯ ಶೈಲಿಗಳ ಮೂಲಕ ಪ್ರಸಿದ್ಧವಾಗಿದ್ದು, ಪುರಾಣ ಕಥೆಗಳನ್ನು ಜೀವಂತವಾಗಿ ಪ್ರದರ್ಶಿಸುವ ಈ ಕಲೆ, ಗ್ರಾಮೀಣ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆದರೆ, ಆಧುನಿಕ ಮನರಂಜನಾ ವಾಧ್ಯಮಗಳ ಪ್ರಭಾವದಿಂದ ಈ ಕಲೆಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.