ಅಫಜಲಪುರ: ಶ್ರಾವಣ ಮಾಸ ಶಿವ ಭಕ್ತರಿಗೆ ಅತ್ಯಂತ ಪವಿತ್ರವಾದದ್ದಾಗಿದ್ದು, ಆ.13ರಿಂದ ಒಂದು ತಿಂಗಳು ನಿತ್ಯ ಸಂಜೆ 6ಕ್ಕೆ ಯಡಿಯೂರು ಸಿದ್ಧಲಿಂಗೇಶ್ವರ ಪುರಾಣ ಜರುಗಲಿದೆ ಎಂದು ಮಳೇಂದ್ರ ಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ಶ್ರೀಗುರು ಮಳೇಂದ್ರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರಾವಣ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಮಠದ ಧಾರ್ಮಿಕ ಪರಂಪರೆ, ಸಂಸತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪುರಾಣ, ಪ್ರವಚನ ಹಮ್ಮಿಕೊಳ್ಳಲಾಗುತ್ತಿದೆ. ಸೆ.14ರಂದು ಜಾತ್ರಾ ಮಹೋತ್ಸವದ ನಿಮಿತ್ತ ಅಡ್ಡಪಲ್ಲಕ್ಕಿ ಮಹೋತ್ಸವ ಜರುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಅಫಜಲಪುರ& ದೇವಲ ಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯ ಚಂದ್ರಶೇಖರ ಕರಜಗಿ, ಪ್ರಮುಖರಾದ ಶಾಂತಯ್ಯ ಹಿರೇಮಠ, ಮಳೇಂದ್ರ ಡಾಂಗೆ, ಶಿವಪುತ್ರ ಬುರಲಿ, ಚಂದ್ರಶೇಖರ ನಿಂಬಾಳಕರ, ಶಿವಪುತ್ರ ಸಂಗೊಳಗಿ, ಶರಣು ನೂಲಾ, ಶರಣಪ್ಪ ವಾಳಿ, ಬಸವರಾಜ ಕಲಶೆಟ್ಟಿ, ಶ್ರೀಶೈಲ ಬಳೂರಗಿ, ಮಲ್ಲು ಸಾಂಪೂರ, ಅಶೋಕ ಬೂತಿ ಇತರರಿದ್ದರು.