ಕಲಬುರಗಿಯಲ್ಲಿ ಏರ್ಪಡಿಸಿದ್ದ ಪೆಡಿಯಾಟ್ರಿಕ್ ರೇಡಿಯಾಲಜಿ ವೈದ್ಯಕಿಯ ಶಿಕ್ಷಣ ಕುರಿತ ಕಾರ್ಯಾಗಾರವನ್ನು ಎಚ್ಕೆಇ ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಆರ್.ಹರವಾಳ, ಡಾ.ಕಿರಣ ದೇಶಮುಖ,ಡಾ.ಚೇತನ ದುರ್ಗಿ, ಡಾ.ಶಿವಾನಂದ ಮೇಳಕುಂದಿ, ಡಾ.ಶರಣಗೌಡ ಪಾಟೀಲ್, ಡಾ.ಎಂ.ಎಸ್.ತೆಗನೂರು ಇತರರಿದ್ದರು.
- ಡಾ.ಶ್ರೀಧರ ಹೇಳಿಕೆ
- ಪೆಡಿಯಾಟ್ರಿಕ್ ರೇಡಿಯಾಲಜಿ ಶಿಕ್ಷಣ ಕಾರ್ಯಾಗಾರ
ಕಲಬುರಗಿ: ಮಕ್ಕಳಿಗೆ ಅತೀ ಕಡಿಮೆ ರೇಡಿಯೇಷನ್ನಲ್ಲಿ ರೋಗಗಳನ್ನು ಪತ್ತೆ ಮಾಡಬಹುದು. ಎಕ್ಸ್ರೇ, ಎಂಆರ್ಐ, ಸಿಟಿ ಸ್ಕ್ಯಾ ನ್ ಸೇರಿ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೂಕ್ಷ್ಮತೆಯನ್ನು ಅರಿತರೇ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ತಪಾಸಣೆ ಪೂರ್ಣಗೊಳಿಸಬಹುದು ಎಂದು ಡಾ.ಶ್ರೀಧರ ಗಿಬಿಕೋಟೆ ಹೇಳಿದರು.
ನಗರದ ಬಸವೇಶ್ವರ ಆಸ್ಪತ್ರೆ ಸಭಾಂಗಣದಲ್ಲಿ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿನ ರೇಡಿಯೋಡಯಾಗ್ನೋಸಿಸ್ ವಿಭಾಗ, ರೇಡಿಯಾಲಜಿ ಅಸೋಸಿಯೇಷನ್, ಇಂಡಿಯನ್ ಸೊಸೈಟಿ ಆ್ ಪೆಡಿಯಾಟ್ರಿಕ್ ರೆಡಿಯಾಲಜಿ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಪೆಡಿಯಾಟ್ರಿಕ್ ರೇಡಿಯಾಲಜಿ ವೈದ್ಯಕಿಯ ಶಿಕ್ಷಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಡಾ.ಗ್ರೆಸಿಲ್ಲಾ ಜೋಶಿ ಮಾತನಾಡಿ, ಮಕ್ಕಳ ರೋಗಗಳ ಪತ್ತೆ, ದೇಹದ ಸಮಸ್ಯೆಗಳ ಚಿತ್ರೀಕರಣದಲ್ಲಿ ಹಲವು ನವೀನ ಪದ್ಧತಿಗಳಿದ್ದು, ಅವುಗಳನ್ನು ಅಳವಡಿಸಿಕೊಳ್ಳಬೇಕು. ಅತ್ಯುತ್ತಮ ವಿಧಾನಗಳಿದ್ದು, ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಎಚ್ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಡಾ.ಎಸ್.ಆರ್.ಹರವಾಳ, ಡಾ.ಕಿರಣ ದೇಶಮುಖ, ಆಯೋಜಕರಾದ ಡಾ.ಚೇತನ ದುರ್ಗಿ ಮತ್ತು ಡಾ.ಶಿವಾನಂದ ಮೇಳಕುಂದಿ, ಎಂಆರ್ಎಂಸಿ ಡೀನ್ ಡಾ.ಶರಣಗೌಡ ಪಾಟೀಲ್, ಆಸ್ಪತ್ರೆ ಅಧೀಕ್ಷಕ ಡಾ.ಎಂ.ಎಸ್.ತೆಗನೂರು ಇತರರಿದ್ದರು.
ಮಕ್ಕಳಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳನ್ನು ಅರಿಯಲು ರೇಡಿಯಾಲಜಿ ಅತ್ಯುತ್ತಮ ಮಾರ್ಗವಾಗಿದ್ದು, ಗುಣಮಟ್ಟದ ಭರವಸೆಯ ಚಿಕಿತ್ಸಾ ಫಲಿತಾಂಶಗಳನ್ನು ಪಡೆಯಲು ನಿರಂತರ ಅಧ್ಯಯನ ಅಗತ್ಯ. ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಗುಣಮಟ್ಟದ ಫಲಿತಾಂಶ ಮತ್ತು ಚಿಕಿತ್ಸೆ ನೀಡಲು ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ತಜ್ಞ ವೈದ್ಯರು ಸಲಹೆ ನೀಡಿದರು.