ಲೇಖಕಿ ಡಾ. ವಿಜಯಾಗೆ ಕಿ.ರಂ. ಪ್ರಶಸ್ತಿ
- 2025ನೇ ಸಾಲಿನ ಪ್ರೊ. ಕಿ.ರಂ. ನಾಗರಾಜ ಪ್ರಶಸ್ತಿ ಪ್ರಕಟ
- ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕ ಒಳಗೊಂಡಿದೆ
- ಡಿ. 25ರಂದು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ
ಬೆಂಗಳೂರು: ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ನೀಡುವ 2025ನೇ ಸಾಲಿನ ‘ಪ್ರೊ. ಕಿ.ರಂ. ನಾಗರಾಜ ಸಂಸ್ಕೃತಿ’ ಪ್ರಶಸ್ತಿಗೆ ಲೇಖಕಿ ಹಾಗೂ ಹಿರಿಯ ಪತ್ರಕರ್ತೆ ಡಾ. ವಿಜಯಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಕಿ.ರಂ. ನಾಗರಾಜ ಅವರ ಜನ್ಮದಿನವಾದ ಡಿ. 25ರಂದು ಸಂಜೆ 6 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.