ಕೋಡಿಹಳ್ಳಿಯಲ್ಲಿ ಹಸಿಕರಗಕ್ಕೆ ಪೂಜೆ Hasikarag  
ರಾಜ್ಯ

ಕೋಡಿಹಳ್ಳಿಯಲ್ಲಿ ಹಸಿಕರಗಕ್ಕೆ ಪೂಜೆ Hasikarag

ಲಕ್ಕೂರು: ಕೋಡಿಹಳ್ಳಿಯ ಶ್ರೀ ದ್ರೌಪದಾಂಭ ದೇವಿ ದೇವಾಲಯದ ಕರಗ ಮಹೋತ್ಸವದ ಅಂಗವಾಗಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹಸಿಕರಗದ ಪೂಜಾ ಸಂಜೆ 9ರಿಂದ 11 ಗಂಟೆವರೆಗೆ ನಡೆಯಿತು.
ಮಾರಿಕಾಂಭ ದೇವಾಲಯ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಗಂಗೆಪೂಜೆ ನೆರವೇರಿಸಿದ ನಂತರ ಹಸಿಕರಗದ ಪೂಜಾ ಕೈಕಂರ್ಯ ನಡೆಯಿತು. ವೀರಕುಮಾರರಿಗೆ ಕಂಕಣ ಕಟ್ಟಿದ ನಂತರ ಹಸಿಕರಗವನ್ನು ಹೊತ್ತ ಕರಗದ ಪೂಜಾರಿಗಳಾದ ವಿ.ಸುರೇಶ್​, ವಿ.ಕಿರಣ ಹಾಗೂ ಮಹೇಶ್​ ಅವರು ಮಂಗಳವಾದ್ಯೆಗಳ ತಾಳಕ್ಕೆ ನರ್ತಿಸಿದರು.
ಪೂಜೆಯಲ್ಲಿ ವೀರಕುಮಾರರು ಕತ್ತಿಗಳ ಮೂಲಕ ಹಲಗು ಸೇವೆ ಮಾಡಿದರು. ಶ್ರೀ ದ್ರೌಪದಾಂಭ ದೇವಿಯ ಹಸಿಕರಗವು ಮುಖ್ಯರಸ್ತೆಯ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮನೆಗಳಿಂದ ಪೂಜೆ ಸ್ವೀಕರಿಸಿದರು. hasikarag
ಗ್ರಾಮದ ಶ್ರೀ ಮಾರಿಕಾಂಭ, ಶ್ರೀ ಯಲ್ಲಮ್ಮ, ಶ್ರೀ ಗಂಗಮ್ಮ, ಶ್ರೀ ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸ್ವೀಕರಿಸಿದರು.
ದ್ರೌಪದಾಂಭ ಸೇವಾ ಸಮಿತಿ ಸಂಚಾಲಕ ಸಿ.ಪ್ರಕಾಶ್​ ಮಾತನಾಡಿ, ಶ್ರೀ ದ್ರೌಪದಾಂಭ ದೇವಿಯ ಕರಗ ಮಹೋತ್ಸವ ಆಚರಣೆಯಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.
ಗೌರವಾಧ್ಯಕ್ಷ ಪಿ.ಕೃಷ್ಣಪ್ಪ, ಅಧ್ಯಕ್ಷ ಕೆ.ನಾರಾಯಣಸ್ವಾಮಿ, ಉಪಾಧ್ಯಕ್ಷ ಪಿ.ರಾಜಪ್ಪ, ಖಜಾಂಚಿ ಕೆ.ಮಹೇಶ್​, ಸಂಘಟನಾ ಕಾರ್ಯದರ್ಶಿಗಳಾದ ಎಂ.ಮುನಿಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಸುರೇಶ್​, ಸದಸ್ಯೆ ಸುನಂದಮ್ಮ ಶ್ರೀನಿವಾಸ್​, ಮುಖಂಡರಾದ ಆರ್​.ಚಂದ್ರಪ್ಪ, ಸಿ.ಮುನಿರಾಜು, ಮಂಜುನಾಥ್​, ಎಂ.ಮುನಿಕೃಷ್ಣ, ವೈ.ನಾರಾಯಣಸ್ವಾಮಿ, ವೆಂಕಟೇಶಪ್ಪ, ಶಂಕರಪ್ಪ, ಅಬ್ಬಯ್ಯಪ್ಪ, ಮಂಜುನಾಥ್​, ಪಿ.ವೆಂಕಟೇಶ್​, ವೆಂಕಟೇಶ್​ರೆಡ್ಡಿ ಇದ್ದರು.