Worship God with unwavering devotion.
ಪಟ್ಟನಾಯಕನಹಳ್ಳಿ: ಮನುಷ್ಯರು ಅಚಲ ನಂಬಿಕೆ, ಭಕ್ತಿಯಿಂದ ದೇವರನ್ನು ಆರಾಧಿಸಿದರೆ, ಎಲ್ಲರ ಯೋಗ ಕ್ಷೇಮ ಭಗವಂತನೇ ನೋಡಿಕೊಳ್ಳಲಿದ್ದಾನೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕೆರೆಯಾಗಲ ಚಿಕ್ಕೇನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡ ಶ್ರೀ ಕಟ್ಟೆ ರಂಗನಾಥ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ನಾಗಬಿಂಬ ಸ್ಥಿರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವಾತನಾಡಿ, ಮನುಕುಲ, ಜೀವರಾಶಿಗಳಿಗೆ ತೊಂದರೆಯಾದರೆ ದೇವರು ರಕ್ಷಿಸಿತ್ತಾನೆ ಎಂದರು.
ಕುಡಿಯುವ ನೀರಿನ ಮಹತ್ವಕಾಂಕ್ಷೆಯ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ಸ್ಥಗಿತಗೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ಪೂರ್ಣಗೊಳಿಸುವ ಇಚ್ಛಾಶಕ್ತಿ ಹೊಂದಬೇಕು. ನೀರಾವರಿ ಯೋಜನೆಗಳು ನೆನಗುದ್ದಿಗೆ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದರು.
ನಾರು ಅಭಿವೃದ್ಧಿ ನಿಗಮದ ವಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ವಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ದೇವರ ಉತ್ಸವಗಳು ಪರಸ್ಪರ ಸ್ನೇಹ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.
ರಾಜಣ್ಣ, ಗಿರೀಶ್, ಪಿಎಲ್‌ಡಿ ಬ್ಯಾಂಕ್ ವಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಗ್ರಾಪಂ ವಾಜಿ ಅಧ್ಯಕ್ಷ ಪದ್ಮರಾಜು, ಸಿದ್ದನಹಳ್ಳಿ ರಂಗನಾಥ್, ರಾಮಕೃಷ್ಣಪ್ಪ, ಆರ್.ಟಿ.ನಾರಾಯಣಪ್ಪ, ಪರಮೇಶ್, ಶ್ರೀರಂಗಪ್ಪ, ದೇವರಾಜು, ನರಸಿಂಹಯ್ಯ, ಲಕ್ಷ್ಮಣ್ ಇತರರು ಇದ್ದರು.