ಸುರಪುರ ನಿಷ್ಟಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಸೋಮವಾರ ಜರುಗಿದ ಶ್ರಾವಣ ಶಿವಾನುಭವ ಚಿಂತನ ಕರ‍್ಯಕ್ರಮವನ್ನು ಶ್ರೀ ಪ್ರಭುಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಸಿದ್ದನಗೌಡ ಪಾಟೀಲ್, ಮಂಗಳೂರಿನ ಶ್ರೀ ಶರಣಬಸವ ಸಾಧು ಮಹಾರಾಜರು ಇದ್ದರು.
- ಶ್ರೀ ಪ್ರಭುಲಿಂಗ ಸ್ವಾಮೀಜಿ ಅಭಿಮತ
- ಸುರಪುರದಲ್ಲಿ ಶ್ರಾವಣ ಶಿವಾನುಭವ ಚಿಂತನ ಕರ‍್ಯಕ್ರಮ
ಸಮಾನತೆಯೇ ಜಗತ್ತಿನ ಬೆಳಕು ಅದುವೇ ಲೋಕಾನುಭವ ಎಂಬುದು ಶರಣರ ಆಶಯವಾಗಿತ್ತು ಎಂದು ಶ್ರೀ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ನಗರದ ನಿಷ್ಟಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಸೋಮವಾರ ಜರುಗಿದ ಶ್ರಾವಣ ಶಿವಾನುಭವ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಜಾತಿ ತಾನೊಂದೆ ವಲಂ ಎನ್ನುವಂತೆ ಶರಣರು ಜಾತಿ-ಮತ- ಪಂಥವನ್ನು ಮೀರಿ ಮನುಷ್ಯನನ್ನು ಮನುಷ್ಯನಾಗಿ ಕಂಡರು ಇದುವೆ ಶರಣರ ಲೋಕಾನುಭವವಾಗಿದೆ ಎಂದು ಹೇಳಿದರು.
ಮಂಗಳೂರಿನ ಶರಣ ಭೀಮರಾಯ ಒಂಟೆತ್ತು ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸಕರಾದ ಸಿದ್ದನಗೌಡ ಪಾಟೀಲ್, ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಎಚ್.ವೈ.ರಾಠೋಡ್ ಸ್ವಾಗತಿಸಿದರು. ಶಿವಶರಣಯ್ಯ ಸ್ವಾಮಿ ಬಳುಂಡಗಿ ಮಠ ಪ್ರಾರ್ಥನೆ ನೆರವೇರಿಸಿದರು. ಪ್ರಾಣೇಶ್‌ರಾವ್ ಕುಲಕರ್ಣಿ, ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪನವರ ಮಠ ಮಂಗಲಗೀತೆ ಹಾಡಿದರು. ಶಿವಾನುಭವ ಚಿಂತನದ ಪ್ರಾರಂಭದಲ್ಲಿ ಮೋಹನರಾವ್ ಮಾಳದಕರ್, ಉಮೇಶ್ ಯಾದವ್, ರಮೇಶ್ ಕುಲಕರ್ಣಿ, ಸುರೇಶ್ ಅಂಬುರೆ, ಜ್ಝಾನದೇವ ಪಾಣಿಬಾತೆ, ದೀಪಿಕಾ ಸ್ಥಾವರಮಠ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.