ಸವದತ್ತಿ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತನಲ್ಲಿ ದಂಪತಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾದರು. ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ದರಾಮ ಟಿ., ನ್ಯಾಯಾಧೀಶೆ ಅರ್ಪಿತಾ ಬೆಲ್ಲದ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವದತ್ತಿ
ಲೋಕ ಅದಾಲತ್ನಲ್ಲಿ ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಕೊಳ್ಳುವುದರಿಂದ ಪಗಾರರಿಗೆ ತ್ವರಿತ ಮತ್ತು ಸುಲಭ ನ್ಯಾಯ ದೊರೆಯುತ್ತದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯ ಸಿದ್ದರಾಮ ಟಿ. ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲ ನ್ಯಾಯಾಲಯಗಳಲ್ಲಿನ 7,263 ಬಾಕಿ ಪ್ರಕರಣಗಳ ಪೆಕಿ 1,437 ಪ್ರಕರಣ ಲೋಕ ಅದಾಲತ್ಗೆ ಕೆಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 327 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯ ಮಂಜುನಾಥ ನಾಯಕ ಉಪಸ್ಥಿತಿಯಲ್ಲಿ ವೆವಾಹಿಕ ಮನಸ್ತಾಪದಿಂದ ದೂರವಾಗಿದ್ದ ಇಬ್ಬರು ದಂಪತಿ, ರಾಜಿ ಸಂಧಾನದ ಮೂಲಕ ಮತ್ತೆ ಒಂದಾದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ, ವಕೀಲರ ಸಂದ ಅಧ್ಯ ಜೆ.ಬಿ. ಮುನವಳ್ಳಿ, ಉಪಾಧ್ಯ ಎಂ.ಎಸ್. ಹುಬ್ಬಳ್ಳಿ, ಎಸ್.ಎಸ್. ಕಾಳಪ್ಪನವರ ಹಾಗೂ ಆರ್.ವಿ. ಹುಂಬಿ, ಮಹಿಳಾ ಪ್ರತಿನಿಧಿ ಎಸ್.ವೆ. ಶಿಬಾರಗಟ್ಟಿ, ಸಂಧಾನಕಾರರಾದ ಎ್.ಎಂ. ಕಾಳೆ, ಎಸ್.ಎಂ. ಪೆಂಡಾರಿ, ಆರ್.ಪಿ. ತೋಟಗಿ, ವಕೀಲರಾದ ಎಲ್.ಟಿ. ಹೊಸಮನಿ, ಎಂ.ಬಿ. ದ್ಯಾಮನಗೌಡರ, ಸಿ.ಬಿ. ದೊಡ್ಡಗೌಡರ, ಸಿ.ಎಸ್. ಮುತ್ತಗಿ, ಜಿ.ವೆ. ಕರಮಲ್ಲಪ್ಪನವರ, ಎಂ.ಎಂ. ಯಲಿಗಾರ, ಬಿ.ಕೆ. ಕಡಕೋಳ, ಎಂ.ಎ್.ಬಾಡಿಗೇರ ಇತರರಿದ್ದರು.