ಬೆಳಗಾವಿಯ ಜೆಎನ್ಎಂಸಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟನೆಯಲ್ಲಿ ಡಾ.ಸಂದೀಪ ಶ್ರೀವಾಸ್ತವ, ಡಾ.ರಾಜೇಶ ಪೋವಾರ, ಡಾ.ದೀಪ್ತಿ ಕಡೇಂಗಡಿ, ಡಾ.ಭಾಗ್ಯಶ್ರೀ ಹುನಗುಂದ, ಡಾ.ರೂಪಾ ಬೆಲ್ಲದ, ಡಾ.ನಯನಾ ಹಾಶೀಲಕರ ಇತರರಿದ್ದರು.
ಬೆಳಗಾವಿ: ಕೆಎಲ್ಇ ಸಂಸ್ಥೆಯ ಕಾಹೆರ್ನ ಜೆ.ಎನ್.ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಸೋಮವಾರದಿಂದ ವೈದ್ಯಕಿಯ ಶಿಕ್ಷಣದಲ್ಲಿನ ಅಡ್ವಾನ್ಸ್ ಕೋರ್ಸ್ ಕುರಿತು 19ನೇ ಕಾರ್ಯಾಗಾರ ಆಯೋಜಿಸಲಾಗಿದ್ದು, ಆ.2ರವರೆಗೆ ನಡೆಯಲಿದೆ.
ಸೋಮವಾರ ಕಾಹೆರ್ ಕುಲಪತಿ ಡಾ.ಸಂದೀಪ ಶ್ರೀವಾಸ್ತವ ಕಾರ್ಯಾಗಾರ ಉದ್ಘಾಟಿಸಿ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರ ಕರ್ನಾಟಕದ ವೈದ್ಯಕಿಯ ಅಧ್ಯಾಪಕರಿಗಾಗಿ ಈ ಕಾರ್ಯಾಗಾರ ಆಯೋಜಿಸಿದ್ದಕ್ಕಾಗಿ ಜೆಎನ್ಎಂಸಿ ವೈದ್ಯಕಿಯ ಶಿಣ ವಿಭಾಗದ ತಂಡವನ್ನು ಅಭಿನಂದಿಸಿದರು.
ಜೆಎನ್ಎಂಸಿ ಪ್ರಾಂಶುಪಾಲ ಡಾ.ರಾಜೇಶ ಪೊವಾರ, ಬಿಸಿಎಂಇ ಉಸ್ತುವಾರಿ ಡಾ.ದೀಪ್ತಿ ಕಡೇಂಗಡಿ, ಡಿಒಎಂಇ ಸದಸ್ಯ ಕಾರ್ಯದರ್ಶಿ ಡಾ.ಭಾಗ್ಯಶ್ರೀ ಹುನಗುಂದ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಸುನೀತಾ ಪಾಟೀಲ, ಡಾ.ಜಯಶೀಲಾ ಬಾಗಿ, ಡಾ.ಜ್ಯೋತಿ ನಾಗಮೋತಿ, ಡಾ.ಶೀತಲ ಹರಕುಣಿ, ಡಾ.ಎಸ್.ಕೆ.ಸೈದಾಪುರ, ಡಾ.ಪದ್ಮಜಾ ವಾಳ್ವೇಕರ, ಡಾ.ನೇತ್ರಾವತಿ ಕವಿ ಇತರರಿದ್ದರು.
ಮೆಡಿಸಿನ್ ನಿಕಾಯದ ಡೀನ್ ಹಾಗೂ ಎನ್ಎಂಸಿ ನೋಡಲ್ ಸೆಂಟರ್ ಸಂಚಾಲಕಿ ಡಾ.ರೂಪಾ ಬೆಲ್ಲದ ಸ್ವಾಗತಿಸಿದರು. ಡಾ. ಶಿಲ್ಪಾ ಭೀಮಳ್ಳಿ ನಿರೂಪಿಸಿದರು. ಜೆಎನ್ಎಂಸಿ ಉಪ ಪ್ರಾಂಶುಪಾಲ ಡಾ.ನಯನಾ ಹಾಶೀಲಕರ ವಂದಿಸಿದರು. ವಿವಿಧ ವಿಭಾಗಗಳ 30 ಅಧ್ಯಾಪಕರು ಭಾಗವಹಿಸಿದ್ದರು.