Workers' Day is meaningful when there is mutual cooperation. 
ರಾಜ್ಯ

ಪರಸ್ಪರ ಸಹಕಾರವಿದ್ದಾಗ ನೌಕರರ ದಿನಾಚರಣೆ ಸಾರ್ಥಕ

ಚಿಕ್ಕನಾಯಕನಹಳ್ಳಿ: ಸರ್ಕಾರಿ ನೌಕರರ ದಿನಾಚರಣೆ ಪರಿಪೂರ್ಣವಾಗಬೇಕಾದರೆ ಪರಸ್ಪರ ಸಹಕಾರ ಅಗತ್ಯ ಹಾಗೂ ನೌಕರರ ಕ್ಷೇಮಾಭಿವೃದ್ಧಿಗೆ ದುಡಿದವರ ಸ್ಮರಣೆ ಅತ್ಯಂತ ಮಹತ್ವ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗವಿರಂಗಯ್ಯ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಸರ್ಕಾರಿ ನೌಕರರ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಸರ್ಕಾರಿ ನೌಕರರು ಸಾರ್ವಜನಿಕ ಸೇವಾ ವಲಯ ವರ್ಗಕ್ಕೆ ಸೇರಿದವರು ಸಾರ್ವಜನಿಕರ ಕೆಲಸವನ್ನು ಎಷ್ಟು ಪ್ರಾಮಾಣಿಕವಾಗಿ ಸೌಲಭ್ಯ ಕೊಡುವಲ್ಲಿ ಬದ್ಧರಾಗಿರುತ್ತೇವೆಯೋ ಅಷ್ಟೇ ಪ್ರಾಮಾಣಿಕವಾಗಿ ನಮ್ಮ ಸೌಲಭ್ಯ ಪಡೆಯಲು ಕೂಡ ಬದ್ಧರಾಗಿರಬೇಕು. ಸರ್ಕಾರಿ ನೌಕರರು ಜೇನುಗೂಡಿನಂತಿದ್ದು, ಒಟ್ಟಾಗಿ ದುಡಿದರೆ ಆ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗಲು ಸಾಧ್ಯ. ಇದನ್ನು ಅರಿತು ಅವರವರ ವ್ಯಾಪ್ತಿಯಲ್ಲಿ ಕೆಲಸ ಮಾಡಿದರೆ ಯಶಸ್ಸು ಹಾಗೂ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ರಾಜ್ಯ ಪರಿಷತ್​ ಸದಸ್ಯ ಹಾಗೂ ಸಹಾಯಕ ಕೃಷಿ ನಿರ್ದೇಶಕ ಶಿವರಾಜಕುಮಾರ್​ ಮಾತನಾಡಿ, ಸಮಸ್ಯೆಗಳ ಬಗೆಹರಿಸಿಕೊಳ್ಳುವಲ್ಲಿ ಸಂಘದ ಪಾತ್ರ ಹೆಚ್ಚು ಮಹತ್ವದಿಂದ ಕೂಡಿರುತ್ತದೆ. ಸಂಘಟನೆ ಹಾಗೂ ಸಮಾಲೋಚನೆ ಮೂಲಕ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಮಾರ್ಗಗಳು ಸಿಗುತ್ತವೆ ಎಂದರು.
ಅಬಕಾರಿ ಇಲಾಖೆ ಇನ್​ಸ್ಪೆಕ್ಟರ್​ ಜ್ಯೋತಿ ಮಾತನಾಡಿ, ಪ್ರತಿಯೊಂದು ದಿನವೂ ನಮಗೆ ಚಾಲೆಂಜ್​ ಇರುತ್ತದೆ. ಆ ಚಾಲೆಂಜ್​ ಸ್ವೀಕರಿಸುತ್ತಾ ಸ್ಪರ್ಧಾ ಮನೋಭಾವ ಹೊಂದಬೇಕು. ಯಾವುದೇ ಸಮಯದಲ್ಲಿ ಧೈರ್ಯದಿಂದ ಮುನ್ನುಗಬೇಕು ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್​.ಪರಶಿವಮೂರ್ತಿ, ಡಾ.ನಟರಾಜ್​, ಎಚ್​.ಎಂ. ಸುರೇಶ್​, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಾಮ್​ ನಿರೂಪ್​ ರಾವತ್​ ಇದ್ದರು.