Work worth Rs 6 crore to be launched in a month 
ರಾಜ್ಯ

ತಿಂಗಳಲ್ಲಿ 6 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಚಿಕ್ಕಬಳ್ಳಾಪುರ ಡೆಸ್ಕ್
ಗೌರಿಬಿದನೂರು: ಇನ್ನು ಒಂದು ತಿಂಗಳಲ್ಲಿ ನಗರದಲ್ಲಿ ಸುಮಾರು 5&6 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ಸಿಸಿ ರಸ್ತೆ ಸೇರಿದಂತೆ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ ಹೇಳಿದರು.
ನಗರದ ವಾರ್ಡ್​ ನಂ.21ರ ಅರವಿಂದನಗರ ಮುನೇಶ್ವರ ಬಡಾವಣೆಯಲ್ಲಿ ನಗರಸಭೆಯ ಎಸ್​ಎ್​ಸಿ ವಿಶೇಷ ಅನುದಾನದಡಿ 20 ಲ ರೂ. ವೆಚ್ಚದಲ್ಲಿ ಓಬಳಪ್ಪ ರಸ್ತೆ, ಕೆಎಂಎಫ್​ ಬಾಬು ಅವರ ಮನೆ ಮುಂದೆ ಸಿಸಿ ರಸ್ತೆ ಮತ್ತು ಗೋಪಿನಾಥ್​ ಮನೆ ಮುಂದೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರದಲ್ಲಿ ಇಂದು 20 ಲ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಐದಾರು ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ತಿಂಗಳ ಒಳಗೆ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ನಗರದ ಜನತೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ನಗರಸಭೆ ಮಾಜಿ ಅಧ್ಯೆ ಕೆ.ಎಸ್​.ರೂಪಾಅನಂತರಾಜು ಮಾತನಾಡಿ, ನನ್ನ ಐದು ವರ್ಷದ ಅವಧಿಯಲ್ಲಿ ನಗರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳನ್ನು ನಮ್ಮ ವಾರ್ಡಿನಲ್ಲಿ ಮಾಡಿಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಸುಮಾರು 30 ಲ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು. ನಗರಸಭೆ ಮಾಜಿ ಅಧ್ಯ ಲಕ್ಷಿ$್ಮನಾರಾಯಣಪ್ಪ, ಮಾಜಿ ಸದಸ್ಯರಾದ ಕೆ.ಎಸ್​.ಅನಂತರಾಜು, ರಾಜಕುಮಾರ್​ , ಪೌರಾಯುಕ್ತ ಕೆ.ಜಿ.ರಮೇಶ್​, ಸಂತೋಷ್​, ಗಂಗಾಧರ್​, ಸೀತಾರಾಮ್​, ಪಾಪಣ್ಣ, ರಂಗನಾಥ್​, ನರೇಂದ್ರ, ಗೋಪಾಲ್​ ರೆಡ್ಡಿ, ಬ್ಯಾಂಕ್​ ಸ್ವಾಮಿ, ಕೊರಿಯರ್​ ರವಿ, ಗೌರಿ ರಮೇಶ್​, ನಾಗಭೂಷಣ್​, ರಾಮರೆಡ್ಡಿ, ಜಬಿವುಲ್ಲಾ ಹಾಗೂ ನಾಗರಿಕರು ಇದ್ದರು.