ಹಂಗರಗಾದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ್ ಮಂಗಳವಾರ ಚಾಲನೆ ನೀಡಿದರು. ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ್, ರಾಮಶೆಟ್ಟಿ ಪನ್ನಾಳೆ, ಸೂರ್ಯಕಾಂತ ಅಲ್ಮಾಜೆ ಇತರರಿದ್ದರು.
- ವಿವಿಧ ಗ್ರಾಮಗಳಲ್ಲಿ ಶಾಸಕ ಪ್ರಭು ಚವ್ಹಾಣ್ ಸಂಚಾರ
ಔರಾದ್: ಶಾಸಕ ಪ್ರಭು ಚವ್ಹಾಣ್ ಮಂಗಳವಾರ ಔರಾದ್ ಹಾಗೂ ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ 13.42 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಹಂಗರಗಾ ಹಾಗೂ ಸಾವರಗಾಂವಗಳಲ್ಲಿ 6.49 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ, ಠಾಣಾಕುಶನೂರದಲ್ಲಿ 30 ಲದ ಸಮುದಾಯ ಭವನ, ಬಳತ(ಬಿ)ದಲ್ಲಿ ಐದು ಕೋಟಿ ರೂ. ಸೇತುವೆ, ಹೊರಂಡಿಯಲ್ಲಿ 13 ಲಕ್ಷದ ಸಮುದಾಯ ಭವನ ಹಾಗೂ ಡೋಣಗಾಂವ(ಎಂ)ದಿಂದ ಮುರ್ಕಿವರೆಗೆ 1.50 ಕೋಟಿ ರೂ. ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ವಿವಿಧ ಗ್ರಾಮಗಳಲ್ಲಿ ಚಾಲ್ತಿಯಲ್ಲಿರುವ ರಸ್ತೆ, ಸೇತುವೆ, ಸಮುದಾಯ ಭವನ ಸೇರಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು.
ಶ್ರೀ ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಬಸವರಾಜ ಪಾಟೀಲ್, ಕಾಶಿನಾಥ ಜಿರ್ಗೆ, ಶಿವರಾಜ ಮದಕಟ್ಟೆ, ಬಸವರಾಜ ಕೆಂಪಶೆಟ್ಟೆ, ಮನ್ಮಥರಾವ ಜೀರ್ಗೆ, ಶಿವಕುಮಾರ ಸಜ್ಜನಶೆಟ್ಟಿ, ಸೂರ್ಯಕಾಂತ ಅಲ್ಮಾಜೆ, ಗಿರೀಶ್ ಒಡೆಯರ್, ಶಿವರಾಜ ಬೋಚ್ರೆ, ಮಾಣಿಕರಾವ ಬಬಚೆಡೆ, ಓಂಕಾರ ಸ್ವಾಮಿ, ಸಚಿನ್ ರಾಠೋಡ್, ಉದಯ ಸೋಲ್ಲಾಪುರೆ, ಮಂಜು ಸ್ವಾಮಿ, ಶಾಲಿವಾನ ಬಿರಾದಾರ್, ಸಂತೋಷ ಬಿರಾದಾರ್, ರಮಾಕಾಂತ ಕೊಂಡೆ, ಬಂಟಿ ರಾಂಪೂರೆ ಇತರರಿದ್ದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ.ಇದೇ ಉದ್ದೇಶದಿಂದ ನಿರಂತರ ಗ್ರಾಮ ಸಂಚಾರ ನಡೆಸಲಾಗುತ್ತಿದೆ. ಸಾರ್ವಜನಿಕರ ಮತ್ತು ಸ್ಥಳಿಯ ಬೇಡಿಕೆಗಳನ್ನು ಪರಿಗಣಿಸಿ ಆದ್ಯತೆ ಮೇರೆಗೆ ಗ್ರಾಮೀಣ ರಸ್ತೆ, ಸೇತುವೆ ಇತರ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.