ನೆಲಮಂಗಲದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಎಲ್ಒ&-2 ಕಾರ್ಯಾಗಾರದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಬಮುಲ್ ನಿರ್ದೇಶಕ ಭವಾನಿಶಂಕರ್ಬೈರೇಗೌಡ, ನಗರಸಭೆ ಸದಸ್ಯ ಶಿವಕುಮಾರ್, ಅಂಜನಮೂರ್ತಿ, ಪುಷ್ಪಲತಾ ಮಾರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್ರಾಜು ಇತರರು ಇದ್ದರು.
ನೆಲಮಂಗಲ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ವೇಳೆ ಜೆಡಿಎಸ್ ಬಿಎಲ್ಎ&2 ಪದಾಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ನಗರದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ನಿಂದ ಆಯೋಜಿಸಿದ್ದ ಮತದಾನ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಬಿಎಲ್ಒ&-2 ಕಾರ್ಯಾಗಾರದಲ್ಲಿ ಮಾತನಾಡಿದರು.ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದೆ. ಪ್ರತಿ ಮತವೂ ಅಮೂಲ್ಯವಾಗಿದ್ದು, ಕಾರ್ಯಕರ್ತರು ಹದ್ದಿನ ಕಣ್ಣಿನಂತೆ ಎಚ್ಚರಿಕೆ ವಹಿಸಬೇಕಿದೆ. ಮತದಾರರ ಪರಿಷ್ಕರಣೆ ಸೂಕ್ಷ್ಮ ವಿಚಾರವಾಗಿದ್ದು, ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇದೆ. ಒಂದು ವೇಳೆ ಮತದಾನ ಮಾಡದಿದ್ದರೇ ಆ ವ್ಯಕ್ತಿಯ ಅಸ್ತಿತ್ವವೇ ಕಳೆದುಕೊಂಡಂತಾಗುತ್ತದೆ. ಹಾಗಾಗಿಅರ್ಹ ಮತದಾರರ ಹೆಸರನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆಲ ಅಕ್ರಮ ಮತಗಳನ್ನು ಮತಪಟ್ಟಿಯಿಂದ ಕೈ ಬಿಡಬೇಕು. ಕ್ಷೇತ್ರದಾದ್ಯಂತ 276 ಬೂತ್ಗಳಲ್ಲಿ ಜೆಡಿಎಸ್ನಿಂದ ಬಿಎಲ್ಒ&2 ಕಾರ್ಯಕರ್ತರ ನೇಮಕ ಮಾಡಲಾಗಿದೆ. ಮುಂಬರುವ ಗ್ರಾಪಂ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಜೆಡಿಎಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ 2028ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರದಲ್ಲಿ ದಬ್ಬಾಳಿಕೆ ಹೆಚ್ಚಾಗಿದೆ. ಜತೆಗೆ ಗ್ಯಾರಂಟಿ ಎಂದು ಸರ್ಕಾರದ ಹಣ ಲೂಟಿ ಮಾಡುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಬಿಎಲ್ಒ&2ಗಳ ತಳಮಟ್ಟದಲ್ಲಿ ಮತದಾರ ಪರಿಷ್ಕರಣೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಮತಗಳನ್ನು ಸುರಕ್ಷಿಸಬೇಕಿದೆ ಎಂದರು.
ಅಭಿನಂದನೆ : ಇತ್ತೀಚೆಗೆ ಜೆಡಿಎಸ್ನ ನೂತನ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಮಂಜುನಾಥ್ ಅವರನ್ನು ಕಾರ್ಯಕರ್ತರು ಹಾಗೂ ಮುಖಂಡರು ಸನ್ಮಾನಿಸಿದರು. ಜೆಡಿಎಸ್ ರಾಜ್ಯ ವಕ್ತಾರ ಪ್ರವಿಣ್ಕುಮಾರ್ ಅವರ ಮತದಾರ ಸಮಗ್ರ ಪರಿಷ್ಕರಣೆ ಕುರಿತು ವಿಶೇಷ ಕಾರ್ಯಾಗಾರ ಮೂಲಕ ಬಿಎಲ್ಒ&2ಗೆ ಮಾಹಿತಿ ನೀಡಿದರು.
ಜಿಪಂ ಮಾಜಿ ಸದಸ್ಯ ಚಲುವರಾಜು, ತಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ಮಾಜಿ ಸದಸ್ಯ ವರದನಾರಾಯಣ್, ಬೆಟ್ಟೇಗೌಡ, ರುದ್ರೇಶ್, ಮುಖಂಡ ಬಿ.ಕೆ.ತಿಮ್ಮರಾಜು, ಭವಾನಿಶಂಕರ್ಮಂಜುನಾಥ್, ಬಿ.ಎಂ.ಶ್ರೀನಿವಾಸ್, ಸಂಪತ್ಬಾಬು, ಮೋಹನ್ಕುಮಾರ್, ಗುರುಪ್ರಸಾದ್, ಸುರೇಶ್, ಕನಕರಾಜು, ಜಗಜ್ಯೋತಿಬಸವೇಶ್ವರ, ಮಂಜಮ್ಮ, ಲೀಲಾಕುಮಾರ್ ಇತರರು ಇದ್ದರು.