ಜನರ ನಂಬಿಕೆಗೆ ಬದ್ಧರಾಗಿ ಕೆಲಸ ನಿರ್ವಹಿಸಿ Work
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನಿಕಾ ಸುಕ್ರಿವಾಲಾ ಸೂಚನೆ
ಶ್ರೀನಿವಾಸಪುರ: ಸಾರ್ವಜನಿಕರ ನಂಬಿಕೆಗೆ ಬದ್ಧರಾಗಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು. ಸಿಬ್ಬಂದಿ ಕಡಿಮೆ ಇದ್ದು, ಸುಗಮ ಸಂಚಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಎಂಜಿ ರಸ್ತೆಯಲ್ಲಿ ಅವರೆಕಾಯಿ ವ್ಯಾಪಾರ ವಾಡುವುದರಿಂದ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಅವಕಾಶ ವಾಡಿಕೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ತಿಳಿಸಿದರು. Work
ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಬೇಕು. ವಾದಕ ವಸ್ತುಗಳ ವಾರಾಟ ಪತ್ತೆ ವಾಡಬೇಕು. ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದಾಗ ಗೌರವದಿಂದ ವರ್ತಿಸುವುದರ ಜತೆಗೆ ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯ ಸೋಮಯಾಜಲಹಳ್ಳಿ. ಯಲ್ದೂರು ಹೊರ ಠಾಣೆಗಳನ್ನು ಮುಚ್ಚಬಾರದು. ಸಿಬ್ಬಂದಿ ಅಲ್ಲೇ ಕೆಲಸ ವಾಡಬೇಕು. ಆ ಭಾಗದಲ್ಲಿ ಕಾನೂನುಬಾಹಿರ ಚಟುವಟಿಕೆ ಹಾಗೂ ಮರಳು ದಂಧೆ ನಿಯಂತ್ರಿಸಬೇಕು ಎಂದು ಠಾಣಾಧಿಕಾರಿಗಳಿಗೆ ಸೂಚಿಸಿ, ಜಿಲ್ಲೆಯ ಎಲ್ಲ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ವಾಡಲಾಗುವುದು ಎಂದರು.
ಮುಳಬಾಗಿಲು ಡಿವೈಎಸ್‌ಪಿ ಮನೀಷಾ, ಸಿಪಿಐ ಮಹಮದ್ ಗೊರವನಕೊಳ್ಳ. ಎಸ್.ಬಿ.ರಾಜು ಹಾಗೂ ಸಿಬ್ಬಂದಿ ಇದ್ದರು.