ಔರಾದ್​ನ ಸಾಯಿ ಬಾಬಾ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿದ್ದ ಸಂಘಟನೆ ಸೃಜನ್​ ಅಭಿಯಾನಕ್ಕೆ ಎಐಸಿಸಿ ವೀಕ್ಷಕ ರಾಜೇಶ್​ ಲಿಲೋಥಿಯಾ ಚಾಲನೆ ನೀಡಿದರು. ಪ್ರಮುಖರಾದ ಭೀಮಸೇನರಾವ ಶಿಂಧೆ, ಅರವಿಂದ ಅರಳಿ, ಮೀನಾಕ್ಷಿ ಸಂಗ್ರಾಮ, ರಾಜಕುಮಾರ ಹಲಬುರ್ಗೆ ಆನಂದ ಚವ್ಹಾಣ್​, ದತ್ತು ಮೂಲಗೆ, ಬಸವರಾಜ ನಿಟ್ಟೂರೆ, ಬಾಬು ತಾರೆ, ರಾಮಣ್ಣ ವಡೆಯರ್​, ಬಾಬು ತಾರೆ, ಫೈಯಾಜ್​ ಅಲಿ ಇತರರಿದ್ದರು.  
ರಾಜ್ಯ

ಕಾಂಗ್ರೆಸ್​ ಬಲವರ್ಧನೆಗೆ ಒಗ್ಗಟ್ಟಿನಿಂದ ಕೆಲಸ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ವೀಕ ರಾಜೇಶ್​ ಸಲಹೆ
  • ಔರಾದ್​ದಲ್ಲಿ ಸಂಘಟನೆ ಸೃಜನ್​ ಅಭಿಯಾನ
ಔರಾದ್​: ಕಾಂಗ್ರೆಸ್​ ಪಕ್ಷದ ಬಲವರ್ಧನೆಗೆ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಪಕ್ಷಕ್ಕೆ ಹೆಚ್ಚಿನ ಬಲ ತುಂಬಲು ಸಾಧ್ಯ ಎಂದು ರಾಜೇಶ್​ ಲಿಲೋಥಿಯಾ ಹೇಳಿದರು.
ಪಟ್ಟಣದ ಸಾಯಿ ಬಾಬಾ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸಂಘಟನೆ ಸೃಜನ್​ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಮಹತ್ವದ ಸ್ಥಾನ ಮಾನವಿದೆ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡು ಪಕ್ಷ ತಳಮಟ್ಟದಿಂದ ಬಲವರ್ಧನೆಗೆ ಶ್ರಮಿಸಬೇಕು. ಜಿಲ್ಲಾ ಸಮಿತಿಗೆ ಸಂಘಟನೆ ಅನುಭವ ಮತ್ತು ಉತ್ತಮವಾದ ಸಮರ್ಥವುಳ್ಳ ವ್ಯಕ್ತಿಗಳಿಗೆ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಜವಾಬ್ದಾರಿ ನೀಡಲಾಗುವುದು. ಬರುವ ಚುನಾವಣೆಗೆ ಗ್ರಾಮ ಮಟ್ಟದಿಂದ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ಎಲ್ಲರೂ ಸಕ್ರೀಯರಾಗಬೇಕು ಎಂದು ಕರೆ ನೀಡಿದರು.
ತದನಂತರ ತಾಲೂಕು ಕಾಂಗ್ರೆಸ್​ ಮುಖಂಡರು ಸೇರಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಸ್ಥಾನ ಹುದ್ದೆಗೆ ಆಕಾಂಕ್ಷಿಗಳ ಹೆಸರನ್ನು ಎಈಸಿಸಿ ವೀಕ್ಷಕರಿಗೆ ನೀಡಿದರು. ಪ್ರಮುಖರಾದ ಭೀಮಸೇನರಾವ ಶಿಂಧೆ, ಅರವಿಂದ ಅರಳಿ, ಮೀನಾಕ್ಷಿ ಸಂಗ್ರಾಮ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಆನಂದ ಚವ್ಹಾಣ್​, ದತ್ತು ಮೂಲಗೆ, ಬಸವರಾಜ ನಿಟ್ಟೂರೆ, ಬಾಬು ತಾರೆ, ರಾಮಣ್ಣ ವಡೆಯರ್​, ಬಾಬು ತಾರೆ, ಫೈಯಾಜ್​ ಅಲಿ, ಅಜ್ಮತ್​ ಪಟೇಲ್​, ಚರಣಸಿಂಗ್​ ರಾಠೋಡ್​, ಧನರಾಜ ಮುಸ್ತಾಪುರೆ, ಸಲಾವುದ್ದಿನ್​, ಶಿವಮೂರ್ತಿ, ವಿಶ್ವನಾಥ ದೀನೆ ಇತರರಿದ್ದರು.